Advertisement
ಈ ಬಗ್ಗೆ ಮಾತನಾಡುವ ಅದಿತಿ, “ಇತ್ತೀಚಿನ ವರ್ಷಗಳಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಿದ್ದರಿಂದ, ಯಾವಾಗಲೂ ಶೂಟಿಂಗ್, ಡಬ್ಬಿಂಗ್, ಮೀಟಿಂಗ್, ಪ್ರಮೋಶನ್ಸ್ ಅಂಥ ಸಿನಿಮಾ ಕೆಲಸಗಳಲ್ಲಿ ಬಿಝಿಯಾಗಿರುತ್ತಿದ್ದೆ. ಮನೆಯಲ್ಲಿ ಇರೋದಕ್ಕೆ ಸಮಯವೇ ಸಿಗುತ್ತಿರಲಿಲ್ಲ. ಮೊದಲೆಲ್ಲ ಎಷ್ಟೋ ಸಲ ಸ್ವಲ್ಪವಾದ್ರೂ ಕೆಲಸದ ನಡುವೆ ಬ್ರೇಕ್ ಸಿಗಬಾರದಾ? ಅಂಥ ಅಂದುಕೊಳ್ಳುತ್ತಿದ್ದೆ. ಆದ್ರೆ, ಇದ್ದಕ್ಕಿದ್ದಂತೆ ಕೋವಿಡ್ ಲಾಕ್‌ಡೌನ್‌ನಿಂದಾಗಿ ಎಲ್ಲರಂತೆ ನಾನೂ ಮನೆಯಲ್ಲಿರಬೇಕಾಯ್ತು. ಮೊದಲಿಗೆ ಮನೆಯವರ ಜೊತೆ ಸ್ವಲ್ಪ ದಿನ ಆರಾಮಾಗಿ ಇರಬಹುದಲ್ಲ ಅಂಥ ಅಂದುಕೊಂಡಿದ್ದೆ. ಆಮೇಲೆ ಮನೆಯಲ್ಲೇ ಇದ್ದು, ಬೋರಾಗೋದಕ್ಕೆ ಶುರುವಾಯ್ತು. ಮತ್ತೆ ಯಾವಾಗ ಕೆಲಸ ಶುರುವಾಗುತ್ತೋ, ನಾನು ಮತ್ತೆ ಯಾವಾಗ ಮೊದಲಿನಂತೆ ಬಿಝಿಯಾಗ್ತಿನೋ ಅಂಥ ಅನಿಸೋಕೆ ಶುರುವಾಗಿತ್ತು. ಸದ್ಯ ಅಷ್ಟರಲ್ಲಿ,ಕೋವಿಡ್ ಎರಡನೇ ಅಲೆಯ ಆತಂಕ ನಿಧಾನವಾಗಿ ಕಡಿಮೆಯಾಗುತ್ತಿದೆ. ನಿಧಾನವಾಗಿ ಜನರು ಓಡಾಟ ಶುರು ಮಾಡಿದ್ದಾರೆ, ನಮ್ಮ ಸಿನಿಮಾ ಕೆಲಸಗಳೂ ಶುರುವಾಗುತ್ತಿದೆ’ ಎಂದು ನಿಟ್ಟುಸಿರು ಬಿಡುತ್ತಾರೆ.
Related Articles
Advertisement
ಸದ್ಯ ಅದಿತಿ ಪ್ರಭುದೇವ ಕನ್ನಡದಲ್ಲಿ ಹತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಅದರಲ್ಲಿ ಈಗಾಗಲೇ “ಒಂಬತ್ತನೇ ದಿಕ್ಕು’, “ದಿಲ್‌ಮಾರ್’, “ತೋತಾಪುರಿ’ ಭಾಗ-1, “ತೋತಾಪುರಿ’ ಭಾಗ-2, “ಓಲ್ಡ್ ಮಾಂಕ್’, “ಆನ’ ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿವೆ. ಇನ್ನು “ಗಜಾನನ ಆ್ಯಂಡ್ ಗ್ಯಾಂಗ್’, “ತ್ರಿಬಲ್ ರೈಡಿಂಗ್’ ಸಿನಿಮಾಗಳ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿವೆ. ಉಳಿದಂತೆ “ಅಂದೊದಿತ್ತು ಕಾಲ’, “5ಡಿ’, “ಚಾಂಪಿಯನ್’, “ಭಗವಾನ್ ಶ್ರೀಕೃಷ್ಣ ಪರಮಾತ್ಮ’ ಸಿನಿಮಾಗಳು ಇನ್ನೂ ಚಿತ್ರೀಕರಣದ ಹಂತದಲ್ಲಿವೆ.
ಇದಲ್ಲದೆ ಇನ್ನೂ ಎರಡೂ – ಮೂರು ಸಿನಿಮಾಗಳಲ್ಲಿ ಅದಿತಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಈ ಚಿತ್ರಗಳು ಇನ್ನೂ ಮಾತುಕತೆಯಯ ಹಂತದಲ್ಲಿರುವುದರಿಂದ, ಸಿನಿಮಾಗಳ ಟೈಟಲ್ ಮತ್ತು ಪಾತ್ರಗಳ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ಹೊರಬರಬೇಕಿದೆ.