Advertisement

ಗಜಾನನ ಬಳಗದಲ್ಲಿ ಅದಿತಿ

07:08 PM Aug 24, 2020 | Suhan S |

“ರಂಗ ನಾಯಕಿ’ ಚಿತ್ರದ ಬಳಿಕ ನಟಿ ಅದಿತಿ ಪ್ರಭುದೇವ ನಾಯಕಿಯಾಗಿ ಮತ್ತೂಂದು ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ, ಅದಿತಿ ಅಭಿನಯಿಸುತ್ತಿರುವ ಹೊಸಚಿತ್ರದ ಹೆಸರು “ಗಜಾನನ ಗ್ಯಾಂಗ್‌’.

Advertisement

2014 ರಿಂದ 2021ರ ವರೆಗೆ ಸಮಾಜದಲ್ಲಿ ನಡೆಯುವ ವಿವಿಧ ಘಟನೆಗಳ ಸುತ್ತ ನಡೆಯುವ ಈ ಚಿತ್ರದಲ್ಲಿ ಎಲ್ಲ ಸನ್ನಿವೇಶಗಳೂ 2021ರಿಂದ ಶುರುವಾಗಿ ಫ್ಲ್ಯಾಶ್‌ಬ್ಯಾಕ್‌ದಲ್ಲಿ 2014ರ ವರೆಗೂ ಸಾಗುತ್ತದೆಯಂತೆ. ಅದರೊಂದಿಗೆ ಗೆಳೆತನ, ಮಧ್ಯಮ ವರ್ಗದ ಪ್ರೀತಿ ಮತ್ತಿತರ ಅರ್ಥಪೂರ್ಣ ಅಂಶಗಳು “ಗಜಾನನ ಗ್ಯಾಂಗ್‌’ ಚಿತ್ರದಲ್ಲಿ ಇರಲಿವೆ ಎನ್ನುತ್ತದೆ ಚಿತ್ರತಂಡ.

ಇನ್ನು ಈ ಚಿತ್ರದಲ್ಲಿ ಅದಿತಿ ಪ್ರಭುದೇವ ಮಧ್ಯಮ ಕುಟುಂಬದ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಈ ಹಿಂದೆ “ಇರುವುದೆಲ್ಲವ ಬಿಟ್ಟು’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ನಟಿಸಿದ್ದ ಶ್ರೀ ಮಹದೇವ್‌ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದು, ಇವರಿಗೆ ಅದಿತಿ ಪ್ರಭುದೇವ ನಾಯಕಿಯಾಗಿ ಜೋಡಿಯಾಗುತ್ತಿದ್ದಾರೆ. ಇನ್ನು ಕಳೆದ ವರ್ಷ “ನಮ್‌ ಗಣಿ ಬಿ.ಕಾಂ ಪಾಸ್‌’ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದ ಅಭಿಷೇಕ್‌ ಶೆಟ್ಟಿ ಈ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದು, ಜೊತೆಗೊಂದು ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಚಿತ್ರಕ್ಕೆ ಪ್ರದ್ಯುತ್ತನ್‌ ಸಂಗೀತ, ಉದಯಲೀಲಾ ಛಾಯಾಗ್ರಹಣ, ವಿಜೇತ್‌ಚಂದ್ರ ಸಂಕಲನ ಕಾರ್ಯ ನಿರ್ವಹಿಸುತ್ತಿದ್ದಾರೆ.

“ಬೃಂದಾವನ್‌ ಎಂಟರ್‌ಪ್ರೈಸಸ್‌’ ಬ್ಯಾನರ್‌ನಲ್ಲಿ ಯು.ಎಸ್‌.ನಾಗೇಶ್‌ ಕುಮಾರ್‌ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಉಳಿದಂತೆ ಚಿತ್ರದ ಇತರ ಕಲಾವಿದರು, ತಂತ್ರಜ್ಞರ ಆಯ್ಕೆ ನಡೆಯುತ್ತಿದೆ. ­

Advertisement

Udayavani is now on Telegram. Click here to join our channel and stay updated with the latest news.

Next