Advertisement

ಟೋಕಿಯೊ ಒಲಿಂಪಿಕ್ಸ್‌ : ಪದಕದತ್ತ ದೃಷ್ಟಿ ನೆಟ್ಟಿದ್ದಾರೆ ಅದಿತಿ

11:11 PM Aug 06, 2021 | Team Udayavani |

ಟೋಕಿಯೊ: ಒಲಿಂಪಿಕ್ಸ್‌ನಲ್ಲಿ ಯಾರೂ ನಿರೀಕ್ಷಿಸಿರದ ಕ್ರೀಡೆಯೊಂದರಲ್ಲಿ ಭಾರತ ಪದಕ ಗೆಲ್ಲುವ ಸಾಧ್ಯತೆಯೊಂದು ದಟ್ಟವಾಗಿದೆ. ಅದೂ ಗಾಲ್ಫ್ ನಲ್ಲಿ, ಕರ್ನಾಟಕದ ಅದಿತಿ ಅಶೋಕ್‌ ಈ ಸಾಧನೆ ಮಾಡಲು ಸಜ್ಜಾಗಿದ್ದಾರೆ!

Advertisement

ಆರಂಭಿಕ ಮೂರೂ ಸುತ್ತುಗಳಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಅದಿತಿ ಸತತವಾಗಿ 2ನೇ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಶನಿವಾರವೂ ಅವರು ಅತ್ಯುತ್ತಮ ಆಟ ಕಾಯ್ದುಕೊಂಡರೆ ಪದಕ ಖಾತ್ರಿ. ಈಗಿನ ಪ್ರದರ್ಶನ ನೋಡಿದರೆ ಬೆಳ್ಳಿ ಅಥವಾ ಚಿನ್ನ ಬರುವುದು ಖಚಿತವೆನಿಸಿದ್ದರೂ ಕನಿಷ್ಠ ಕಂಚನ್ನಂತೂ ಗೆಲ್ಲುವುದು ಖಾತ್ರಿ ಎನ್ನಲಾಗಿದೆ.

ಬೆಂಗಳೂರಿನ ಅದಿತಿ ಶುಕ್ರವಾರ ನಡೆದ 3ನೇ ಸುತ್ತಿನಲ್ಲಿ ತಾಯಿ ಮಹೇಶ್ವರಿಯನ್ನೇ ಕ್ಯಾಡಿಯನ್ನಾಗಿ ಹೊಂದಿದ್ದರು. ಸದ್ಯ ಅವರು ಅಮೆರಿಕದ ನೆಲ್ಲಿ ಕೊರ್ಡಾ ಅನಂತರದ ಸ್ಥಾನದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next