Advertisement

ಅದಿತಿ –ಅರುಂಧತಿ ಚೆಲುವಾದ ಪ್ರಸ್ತುತಿ

06:12 PM Jul 25, 2019 | mahesh |

ರಂಜನಿ ಮೆಮೋರಿಯಲ್‌ ಟ್ರಸ್ಟ್‌ನ ಆಶ್ರಯದಲ್ಲಿ ಜೂ.15ರಂದು ಸಂಜೆ ಲತಾಂಗಿಯಲ್ಲಿ ಅದಿತಿ, ಅರುಂಧತಿ, ಪನ್ನಗ ಶರ್ಮನ್‌ ಇವರ ಕಛೇರಿಯನ್ನು ಆಯೋಜಿಸಲಾಗಿತ್ತು.

Advertisement

ಅದಿತಿ – ಅರುಂಧತಿ ಅವರಲ್ಲಿ ಉತ್ತಮ ಹೊಂದಾಣಿಕೆ ಇದೆ. ಗಟ್ಟಿಯಾಗಿ ಕಲಿತ ಪಾಠಾಂತರದ ಸೊಗಸು ಇದೆ. ಪರಿಶ್ರಮ, ನಿರಂತರ ಅಭ್ಯಾಸ ನಡೆಸಿದರೆ ಏನಾಗಬಹುದು ಎಂಬುವುದಕ್ಕೆ ಈ ಸೋದರಿಯರು ಸಾಕ್ಷಿಯಾಗಿ ನಿಲ್ಲುತ್ತಾರೆ. ನವರಾಗಮಾಲಿಕಾ ವರ್ಣದ ಚೆಲುವಾದ ಪ್ರಸ್ತುತಿಯ ನಂತರ ವಿನಾಯಕ (ಹಂಸಧ್ವನಿ)ಯನ್ನು ನುಡಿಸಲಾಯಿತು. ದೀಕ್ಷಿತರ ಮೀನಾಕ್ಷಿಯಾಗಲೀ, ಶ್ಯಾಮಾಶಾಸ್ತ್ರಿಗಳ ಮರಿವೇರೆ ಗತಿಯಲ್ಲಿ ಅಚ್ಚುಕಟ್ಟುತನ ಇದ್ದರೂ ಅವಸರವೇ ಪ್ರಧಾನವಾಗಿ ಮೆರೆಯುತ್ತಿತ್ತು. ಆಲಾಪನೆಗಳು ಹೆಚ್ಚಿನ ಮನೋಧರ್ಮವನ್ನು ಬಯಸುತ್ತವೆ. ಪನ್ನಗಶರ್ಮರ ಸೂಕ್ತ ನಡೆಗಳು ನುಡಿಸಾಣಿಕೆಗೆ ಪೂರಕವಾಗಿದ್ದವು. ಕಾರ್ವೈಗಳನ್ನು ಹೆಚ್ಚಾಗಿ ನೀಡಿದರೆ ಕಛೇರಿಯು ಇನ್ನೂ ಹೆಚ್ಚಿನ ಯಶಸ್ಸನ್ನು ಸಾಧಿಸಬಲ್ಲದು.

ಗಾನಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next