Advertisement

ಆದಿವುಡುಪಿ: ರಸ್ತೆಯ ಇಕ್ಕೆಲದಲ್ಲಿ ಮೀನಿನ ತ್ಯಾಜ್ಯ ನೀರು, ರೋಗ ಭೀತಿ

10:21 PM May 22, 2020 | Sriram |

ಮಲ್ಪೆ: ಆದಿವುಡುಪಿ ಮೀನು ಮಾರುಕಟ್ಟೆಯ ಎದುರು ಹೆಲಿಪ್ಯಾಡ್‌ ಸಮೀಪದ ರಸ್ತೆಯ ಎರಡು ಬದಿಯಲ್ಲಿ ಮೀನಿನ ನೀರು ನಿಂತು ಪರಿಸರವಿಡೀ ದುರ್ನಾತ ಬೀರುತ್ತಿದ್ದು ಮೂಗು ಮುಚ್ಚಿಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ.

Advertisement

ಹೆಲಿಪ್ಯಾಡ್‌ ಸಮೀಪ ಪ್ರತಿ ದಿನ ಬೆಳಗ್ಗಿನ ಜಾವ ಲಾರಿಗಳಿಂದ ತಂದ ಮೀನುಗಳನ್ನು ಬೇರೆ ವಾಹನಗಳಿಗೆ ಲೋಡ್‌ ಮಾಡುವ ಕೆಲಸ ನಡೆಯುತ್ತಿದೆ. ಈ ವೇಳೆ ಮೀನಿನ ತ್ಯಾಜ್ಯ ನೀರನ್ನು ಅಲ್ಲೇ ಹರಿದು ಬಿಡ ಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಇದರ ಪಕ್ಕದಲ್ಲೇ ವ್ಯಾಪಾರಿಗಳು ಕುಳಿತು ತರಕಾರಿ ಹಣ್ಣು ಮಾರಾಟ ಮಾಡುತ್ತಿದ್ದಾರೆ. ಇದರಿಂದಾಗಿ ಸಾಂಕ್ರಮಿಕ ರೋಗ ಭೀತಿ ಜನರನ್ನು ಕಾಡಲಾರಂಭಿಸಿದೆ. ರಸ್ತೆಯ ಇಕ್ಕೆಲಗಳಲ್ಲಿ ಮೀನಿನ ನೀರು ಸಂಗ್ರಹಗೊಂಡು ನೈರ್ಮಲ್ಯದ ಸಮಸ್ಯೆ ಎದುರಾಗಿದೆ. ಕುಲುಷಿತ ವಾತಾವರಣದಿಂದಾಗಿ ಸೊಳ್ಳೆಗಳ ಸಂಖ್ಯೆ ಹೆಚ್ಚಾಗಿದೆ. ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪೊಲೀಸ್‌ ಇಲಾಖೆಗೆ ದೂರು ಕೊಟ್ಟಿದ್ದರೂ ಇನ್ನೂ ಸಮಸ್ಯೆ ಪರಿಹಾರಗೊಂಡಿಲ್ಲ ಎನ್ನಲಾಗಿದೆ. ತತ್‌ಕ್ಷಣ ಇಲ್ಲಿನ ಸಮಸ್ಯೆಗೆ ಪರ್ಯಾಯ ಮಾರ್ಗವನ್ನು ಕಲ್ಪಿಸಬೇಕೆಂದು ಆದಿವುಡುಪಿ ಮಿತ್ರ ಸೇನೆ ಆಗ್ರಹಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next