Advertisement
ಸಂತೆಗೆ ರಾಜ್ಯದಲ್ಲಿ ನಿಷೇಧವಿದೆ. ಕೆಲವು ವರ್ತಕರು ಮಾತ್ರ ಸರಕಾರದ ಆದೇಶ ಉಲ್ಲಂಘಿಸಿ ಬುಧವಾರ ಆದಿ ಉಡುಪಿಯಲ್ಲಿ ಸಂತೆ ನಡೆಸುವ ಪ್ರಯತ್ನ ಮಾಡಿದ್ದಾರೆ. ಜನರು ಸಾಮಾಜಿಕ ಅಂತರವನ್ನು ಮರೆತು ತರಕಾರಿ ಹಣ್ಣು ಹಂಪಲು ಖರೀದಿಸಲು ಮುಗಿಬಿದ್ದರು. ಈ ಬಗ್ಗೆ ಮಾಹಿತಿ ದೊರಕುತ್ತಿದಂತೆ ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ಬಂದ ವರ್ತಕರನ್ನು ಓಡಿಸಿದ್ದಾರೆ. ಎಪಿಎಂಸಿ ಪ್ರಾಂಗಣದೊಳಗೆ ಸಂತೆ ನಡೆದಿಲ್ಲ. ಹೊರಗೆ ಕೆಲವು ವರ್ತಕರು ಬಂದು ವ್ಯವಹಾರ ನಡೆಸಲು ಯತ್ನಿಸಿದರು ಎಂದು ತಿಳಿದುಬಂದಿದೆ.
ಕೋವಿಡ್ 19 ಭೀತಿಯಿಂದ ಸಂತೆಯನ್ನು ರದ್ದುಗೊಳಿಸಲಾಗಿದೆ. ಕೆಲವು ವರ್ತಕರು ಬಂದು ವ್ಯಾಪಾರ ಮಾಡಲು ಪ್ರಯತ್ನಿಸುತ್ತಿರುವುದು ಗಮನಕ್ಕೆ ಬಂದಿದ್ದು, ತತ್‌ಕ್ಷಣ ಅವರನ್ನು ವ್ಯಾಪಾರ ನಡೆಸದಂತೆ ಎಚ್ಚರಿಕೆ ನೀಡಿ ವರ್ತಕರನ್ನು ಹಿಂದೆ ಕಳುಹಿಸಲಾಗಿದೆ ಎಂದು ನಗರಸಭೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.