Advertisement

ಗಾಂಜಾ ಪತ್ತೆ ಪ್ರಕರಣ; ಗೀತವಿಷ್ಣುಗೆ ಷರತ್ತುಬದ್ಧ ಜಾಮೀನು ಮಂಜೂರು

05:21 PM Oct 04, 2017 | Sharanya Alva |

ಬೆಂಗಳೂರು: ಕಾರು ಅಪಘಾತ ಹಾಗೂ ಗಾಂಜಾ ಪತ್ತೆ ಪ್ರಕರಣಕ್ಕೆ ಸಂಬಂಧಿಸಿಂತೆ ಉದ್ಯಮಿ ದಿ.ಆದಿಕೇಶವುಲು ಮೊಮ್ಮಗ ಗೀತವಿಷ್ಣುಗೆ ಕೋರ್ಟ್ ಬುಧವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

Advertisement

ಬೆಂಗಳೂರಿನ 1ನೇ ಎಸಿಎಂಎಂ ನ್ಯಾಯಾಲಯ ಗೀತವಿಷ್ಣುಗೆ ನ್ಯಾ.ವೆಂಕಟಗಿರಿ ಅವರು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದಾರೆ. ಇಬ್ಬರ ಶ್ಯೂರಿಟಿ ಹಾಗೂ 25 ಸಾವಿರ ರೂಪಾಯಿ ಬಾಂಡ್ ಸಲ್ಲಿಸಲು ಕೋರ್ಟ್ ಸೂಚನೆ ನೀಡಿದೆ.

ಅಲ್ಲದೇ ಸಾಕ್ಷ್ಯ ಮಾಡಬಾರದು, ತನಿಖೆಗೆ ಪೊಲೀಸರಿಗೆ ಸಹಕರಿಸುವಂತೆ ನ್ಯಾಯಾಲಯ ಗೀತವಿಷ್ಣುಗೆ ಷರತ್ತು ವಿಧಿಸಿ, ಜಾಮೀನು ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next