Advertisement

ಆಧಾರ್‌ ನೋಂದಣಿದಾರರ ದಾಖಲೆಗಳ ನವೀಕರಣ ಕಡ್ಡಾಯ

01:08 AM Dec 22, 2022 | Team Udayavani |

ಮಂಗಳೂರು : ಕಳೆದ 10 ವರ್ಷಗಳಿಗೂ ಹಿಂದೆ ವಿಶಿಷ್ಟ ಗುರುತಿನ ಸಂಖ್ಯೆ ಪಡೆದ ಆಧಾರ್‌ ನೋಂದಣಿದಾರರು ತಮ್ಮ ದಾಖಲೆಗಳ ನವೀಕರಣ ಮಾಡಿಸಿ ಕೊಳ್ಳಬೇಕು ಎಂದು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ)ವು ಸೂಚಿಸಿದೆ.

Advertisement

ಯುಐಡಿಎಐ ಆಧಾರ್‌ ಕಾರ್ಡ್‌ಗೆ ನೀಡಲಾದ ಪ್ರಮುಖ ದಾಖಲೆ ಗಳಾದ ನಿವಾಸದ ವಿಳಾಸ ದೃಢೀ ಕರಣ ಪತ್ರ, ವ್ಯಕ್ತಿಯ ಗುರುತಿನ ದಾಖಲೆಗಳ ಜತೆಗೆ ಇತರ ಪ್ರಮುಖ ಮಾಹಿತಿಗಳನ್ನು ಸದ್ಯದ ದಾಖಲೆಗಳಿಗೆ ಅನುಗುಣ ವಾಗಿ ತಿದ್ದುಪಡಿ ಮಾಡಿಕೊಳ್ಳಬೇಕು. ಎಲ್ಲ ಹಳೆಯ ಆಧಾರ್‌ ನೋಂದಣಿ ದಾರರು ತಮ್ಮ ದಾಖಲೆಗಳಲ್ಲಿನ ವಿವರಗಳು ಲೇಟೆಸ್ಟ್‌ ಆಗಿರುವಂತೆ ನಿಗಾ ವಹಿಸಬೇಕಿವೆ.

ಕಳೆದ 10 ವರ್ಷಗಳಿಂದ ಸರಕಾರಿ ಸೌಲಭ್ಯಗಳನ್ನು ಪಡೆಯುವಲ್ಲಿ ಆಧಾರ್‌ ಸಂಖ್ಯೆಯು ಪ್ರಮುಖ ಪಾತ್ರ ವಹಿಸುತ್ತಿದೆ. ಆಧಾರ್‌ ಸಂಖ್ಯೆಗೆ ಬ್ಯಾಂಕ್‌ ಖಾತೆಯ ಜೋಡಣೆ ಯೊಂದಿಗೆ ವಿವಿಧ ಯೋಜನೆ ಗಳ ಸಹಾಯಧನವು ನೇರ ವಾಗಿ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ವರ್ಗಾಯಿಸಲು ಸುಲಭವಾಗಿ ಸಾಧ್ಯವಾಗುತ್ತಿದೆ.

10 ವರ್ಷಗಳ ಮುನ್ನ ಆಧಾರ್‌ ಪಡೆದವರು ಒಂದು ವೇಳೆ ಮಧ್ಯದಲ್ಲಿ ದಾಖಲೆಗಳ ನವೀಕರಣ ಅಥವಾ ಪೂರಕ ಮಾಹಿತಿಗಳ ಪರಿಷ್ಕರಣೆ ಮಾಡಿಸಿದ್ದಲ್ಲಿ ಪುನಃ ನವೀಕರಣ ಮಾಡುವ ಅಗತ್ಯವಿಲ್ಲ. ಒಂದು ಬಾರಿಯೂ ಕೂಡ ದಾಖಲೆ, ಮಾಹಿತಿ ತಿದ್ದುಪಡಿ ಮಾಡಿಸದವರು ಮಾತ್ರ ಶೀಘ್ರದಲ್ಲಿ ಸಮೀಪದ ಆಧಾರ್‌ ನೋಂದಣಿ ಕೇಂದ್ರಗಳಿಗೆ ಭೇಟಿ ನೀಡಬೇಕು. ದಾಖಲೆಗಳ ನವೀಕರಣದ ನಿಗದಿತ ಶುಲ್ಕವನ್ನು ಕೂಡ ಪಾವತಿಸಬೇಕು ಎಂದು ಜಿಲ್ಲಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next