ಕಾಸರಗೋಡು: ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್(ಐಸಿಸ್) ಸಂಬಂಧಿಸಿದ ಪ್ರಕರಣ ದಲ್ಲಿ ಕಾಸರಗೋಡಿನ ಇಬ್ಬರು ಸೇರಿದಂತೆ ಮೂವರನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಆರೋಪಿಗಳನ್ನಾಗಿ ಸೇರ್ಪಡೆಗೊಳಿಸಿದೆ.
ಕಾಸರಗೋಡು ನಿವಾಸಿಗಳಾದ ಅಬೂಬಕ್ಕರ್ ಸಿದ್ದಿಕ್, ಅಹಮ್ಮದ್ ಅರಾಫತ್, ಕೊಲ್ಲಂ ಕರುನಾಗಪಳ್ಳಿ ನಿವಾಸಿ ಮೊಹಮ್ಮದ್ ಫೈಜಲ್‌ನನ್ನು ಹೊಸದಾಗಿ ಆರೋಪಿಗಳ ಪಟ್ಟಿಗೆ ಸೇರಿದ್ದು, ಪ್ರಕರಣದ ತನಿಖೆ ನಡೆಸು ತ್ತಿರುವ ಎನ್‌ಐಎ ಎರ್ನಾಕುಳಂ ನಲ್ಲಿರುವ ಎನ್‌ಐಎ ವಿಶೇಷ ನ್ಯಾಯಾಲ ಯಕ್ಕೆ ವರದಿ ಸಲ್ಲಿಸಿದೆ.
ಈ ಮೂವರನ್ನು ಇನ್ನಷ್ಟು ವಿಚಾರಣೆಗೊಳಪಡಿಸಲು ಎನ್‌ಐಎ ತೀರ್ಮಾನಿಸಿದೆ. ಐಸಿಸ್ ಚಟುವ ಟಿಕೆಗಳನ್ನು ಕೇರಳದಲ್ಲಿ ಬಲಪಡಿ ಸಲೆತ್ನಿಸಿದ, ಅದಕ್ಕಾಗಿ ಸಿರಿಯಾದಲ್ಲಿರುವ ಐಸಿಸ್ ಉಗ್ರ ಅಬ್ದುಲ್ ರಾಶೀದ್‌ನ ಜತೆ ಸೇರಿ ಒಳಸಂಚು ಹೂಡಿರುವ ಪ್ರಕರಣದಲ್ಲಿ ಈ ಮೂವರನ್ನು ಆರೋಪಿಗಳನ್ನಾಗಿಸಲಾಗಿದೆ ಎಂದು ನ್ಯಾಯಾಲಯಕ್ಕೆ ಎನ್‌ಐಎ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ.
ರಿಯಾಸ್ ಮತ್ತೂಮ್ಮೆ ವಿಚಾರಣೆ
ಇದೇ ಪ್ರಕರಣಕ್ಕೆ ಸಂಬಂಧಿಸಿ ಪಾಲಕ್ಕಾಡ್ ನಿವಾಸಿ ರಿಯಾಸ್ ಅಬೂಬಕ್ಕರ್‌ನನ್ನು ತನಿಖೆಗಾಗಿ ನ್ಯಾಯಾಂಗ ಬಂಧನದಿಂದ ಮತ್ತೆ ಕಸ್ಟಡಿಗೆ ಪಡೆದು ಸಮಗ್ರ ವಿಚಾರಿಸಲು ಎನ್‌ಐಎ ತೀರ್ಮಾನಿಸಿದೆ.
ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಪ್ರಧಾನ ಸೂತ್ರಧಾರ ಜಹ್ರಾನ್ ಹಾಶಿಂನೊಂದಿಗೆ ಅಬೂಬಕ್ಕರ್ ಈ ಹಿಂದೆ ವಿಚಾರ ವಿನಿಮಯ ನಡೆಸಿದ್ದನೆಂಬುದನ್ನು ವಿಚಾರಣೆ ವೇಳೆ ಆತ ಒಪ್ಪಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಶ್ರೀಲಂಕಾ ಬಾಂಬ್ ಸ್ಫೋಟದಲ್ಲಿ ಅಬೂಬಕ್ಕರ್ ಪಾತ್ರ ಹೊಂದಿದ್ದಾನೆಯೇ ಎಂಬುದನ್ನು ವಿಚಾರಿಸಲು ಆತನನ್ನು ಮತ್ತೆ ಕಸ್ಟಡಿಗೆ ಪಡೆಯಲು ಎನ್‌ಐಎ ಮುಂದಾಗಿದೆ.