Advertisement
ಮೂರು ಇಲಾಖೆಗಳಲ್ಲಿ ವರ್ಷಗಳ ಕಾಲ ಅನಗತ್ಯ ಹಾಗೂ ಹೆಚ್ಚುವರಿ ಹುದ್ದೆಗಳಿಂದ ಆರ್ಥಿಕವಾಗಿ ಸರಕಾರಕ್ಕೆ ದೊಡ್ಡ ಹೊರೆಯೇ ಆಗಿತ್ತು. ಸಂಪುಟ ಉಪ ಸಮಿತಿ ರಚಿಸಿ ಸಾಕಷ್ಟು ದಿನಗಳಾದರೂ ಹಲವು ಸಭೆಗಳ ಅನಂತರ ಅಂತಿಮವಾಗಿ ಉತ್ತಮ ತೀರ್ಮಾನ ಕೈಗೊಳ್ಳಲಾಗಿದೆ.
Related Articles
Advertisement
ಇದರ ಜತೆಗೆ ಇಲಾಖೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಸಾವಿರಾರು ಸಿಬ್ಬಂದಿ ನೇಮಿಸಿಕೊಳ್ಳುವ ಚಾಳಿ ಆರಂಭವಾಗಿದೆ. ವಿಧಾನಸೌಧ- ವಿಕಾಸಸೌಧ, ಬಹುಮಹಡಿ ಕಟ್ಟಡ, ಸಚಿವಾಲಯ, ವಿಧಾನಸಭೆ ಹಾಗೂ ವಿಧಾನಪರಿಷತ್ ಸಚಿವಾಲಯ, ಶಾಸಕರ ಭವನ ಇಲ್ಲಿ ಸಾವಿರಾರು ಮಂದಿ ಅನಗತ್ಯವಾಗಿ ಹೊರಗುತ್ತಿಗೆಯಲ್ಲಿ ನೇಮಕಗೊಂಡು ಮಾಡಲು ಕೆಲಸ ಇಲ್ಲದಂತಾಗಿದೆ. ಇದರ ಬಗ್ಗೆ ಸರಕಾರ ತತ್‌ಕ್ಷಣ ಗಮನಹರಿಸಬೇಕು.
ವಿಧಾನಸೌಧ- ವಿಕಾಸಸೌಧ, ಸಚಿವರ ನಿವಾಸ, ಶಾಸಕರ ಭವನ ನವೀಕರಣ, ಪೀಠೊಪಕರಣ ಬದಲಾವಣೆ, ಹೊರಗುತ್ತಿಗೆಯ ಸಿಬಂದಿ ವಾಹನ ಖರೀದಿ ಹಾಗೂ ಬಾಡಿಗೆಗೆ ವಾಹನ ಪಡೆಯುವುದು ಸರಕಾರಕ್ಕೆ ಅತೀ ದೊಡ್ಡ ಹೊರೆಯಾಗಿದೆ. ಕೋಟ್ಯಂತರ ರೂ. ವಾರ್ಷಿಕವಾಗಿ ಇದಕ್ಕೆ ವ್ಯಯಿಸಲಾಗುತ್ತಿದೆ. ಇದರ ಬಗ್ಗೆ ಸರಕಾರ ಅಗತ್ಯ ಗಮನಹರಿಸಬೇಕಾಗಿದೆ.
ರಾಜ್ಯದ ಬೊಕ್ಕಸಕ್ಕೆ ಹೊರೆಯಾಗಿರುವ ಅನಗತ್ಯ ಹುದ್ದೆ ಹಾಗೂ ವೆಚ್ಚಕ್ಕೆ ಕಡಿವಾಣ ಹಾಕಲೇಬೇಕಾಗಿದೆ. ಇಲ್ಲದಿದ್ದರೆ ಆರ್ಥಿಕ ಪರಿಸ್ಥಿತಿ ಸುಧಾರಣೆ ಸಾಧ್ಯವೇ ಇಲ್ಲ. ಸಂಪುಟ ಉಪ ಸಮಿತಿ ಕೈಗೊಂಡಿರುವ ಮಹತ್ವದ ತೀರ್ಮಾನದ ಜತೆಗೆ ಮುಂದಿನ ದಿನಗಳಲ್ಲಿ ಇತರ ಇಲಾಖೆಗಳ ಬಗ್ಗೆಯೂ ವರದಿ ತರಿಸಿಕೊಂಡು ಹುದ್ದೆ ಕಡಿತ ಹಾಗೂ ಅನಗತ್ಯ ವೆಚ್ಚ ಕಡಿತಕ್ಕೆ ಕ್ರಮ ಕೈಗೊಳ್ಳಲೇಬೇಕಾಗಿದೆ.