ದಾವಣಗೆರೆ: ಕೊರೊನಾ ಎರಡನೇ ಅಲೆ ವ್ಯಾಪಕವಾಗಿಹಬ್ಬುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೊರೊನಾತಪಾಸಣೆ ಹೆಚ್ಚಿಸುವ ಜತೆಗೆ ಕೋವಿಡ್ ಆರೈಕೆ ಕೇಂದ್ರಗಳಸಂಖ್ಯೆಯನ್ನೂ ಹೆಚ್ಚಿಸಲು ಕ್ರಮ ವಹಿಸಿ ಸೋಂಕಿತರಸೇವೆಗೆ ಸಜ್ಜಾಗಿದೆ.ಕೊರೊನಾ ಮೊದಲ ಅಲೆ ವೇಳೆ ಜಿಲ್ಲೆಯಲ್ಲಿತಾಲೂಕಿಗೊಂದರಂತೆ ಕೊರೊನಾ ಆರೈಕೆಕೇಂದ್ರಗಳಿದ್ದವು. ಪ್ರಸ್ತುತ ಕೊರೊನಾ ಆರೈಕೆ ಕೇಂದ್ರಗಳಸಂಖ್ಯೆ ಒಂಭತ್ತಕ್ಕೇರಿದ್ದು ಇನ್ನೂ ಒಂಭತ್ತು ಕೇಂದ್ರಗಳನ್ನುತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
18ಕ್ಕೂಹೆಚ್ಚು ಆರೈಕೆ ಕೇಂದ್ರಗಳಲ್ಲಿ 1530ಕ್ಕೂ ಹೆಚ್ಚು ಹಾಸಿಗೆವ್ಯವಸ್ಥೆ ಮಾಡಿ ಸೋಂಕಿತರಿಗೆ ಸೇವೆ ನೀಡಲು ಕ್ರಮವಹಿಸಲಾಗಿದೆ.ಕೊರೊನಾ ಅಲೆ ಗ್ರಾಮೀಣ ಪ್ರದೇಶಗಳಲ್ಲಿಯೂವ್ಯಾಪಕವಾಗಿ ಹಬ್ಬುತ್ತಿರುವುದರಿಂದ ಕೊರೊನಾ ಆರೈಕೆಕೇಂದ್ರಗಳನ್ನು ಗ್ರಾಮಾಂತರ ಪ್ರದೇಶಗಳಲ್ಲಿಯೂತೆರೆಯಲಾಗುತ್ತಿದೆ. ಪ್ರಸ್ತುತ ಹರಿಹರ ತಾಲೂಕಿನಗುತ್ತೂರು, ಮಾದನಬಾವಿ, ಹೊನ್ನಾಳಿ ತಾಲೂಕಿನಕಾಡದಕಟ್ಟಿ, ಜಗಳೂರು ತಾಲೂಕಿನ ಮೆದಾಗಿನಕೆರೆಗ್ರಾಮಗಳಲ್ಲಿ ಕೊರೊನಾ ಆರೈಕೆ ಕೇಂದ್ರಗಳುಕಾರ್ಯ ನಿರ್ವಹಿಸುತ್ತಿವೆ.
ಇವುಗಳಲ್ಲದೇ ಜಿಲ್ಲಾಡಳಿತಮುಂಜಾಗ್ರತಾ ಕ್ರಮವಾಗಿ ಇನ್ನೂ ಒಂಭತ್ತು ಕಡೆಗಳಲ್ಲಿಕೊರೊನಾ ಆರೈಕೆ ಕೇಂದ್ರಗಳನ್ನು ತೆರೆಯಲು ಸಿದ್ಧತೆನಡೆಸಿದೆ. ಕೊರೊನಾ ಆರೈಕೆ ಕೇಂದ್ರ ತೆರೆಯುವಲ್ಲಿಖಾಸಗಿ ಸಂಘ ಸಂಸ್ಥೆಗಳು ಸಹ ಕೈಜೋಡಿಸಿದ್ದುಜಿಲ್ಲೆಯಲ್ಲಿ ಪ್ರಸ್ತುತ ಐದು ಖಾಸಗಿ ಸಂಘ ಸಂಸ್ಥೆಗಳುಕೊರೊನಾ ಆರೈಕೆ ಕೇಂದ್ರಗಳನ್ನು ತೆರೆದು ಕೊರೊನಾಸೋಂಕಿತರ ಸೇವೆಯಲ್ಲಿ ತೊಡಗಿವೆ.
ಆರೈಕೆ ಕೇಂದ್ರಗಳ ವಿವರ: ಪ್ರಸ್ತುತ ದಾವಣಗೆರೆತಾಲೂಕಿನಲ್ಲಿ ದಾವಣಗೆರೆಯ ಜೆ.ಎಚ್. ಪಟೇಲ್‌ಬಡಾವಣೆ ಎರಡು ಹಾಸ್ಟೆಲ್ (90ಬೆಡ್), ತರಳಬಾಳುಮಹಿಳಾ ಹಾಸ್ಟೆಲ್ (90ಬೆಡ್), ಜೈನ್ ಸಮುದಾಯಭವನ (50ಬೆಡ್), ಹರಿಹರ ತಾಲೂಕಿನ ಗುತ್ತೂರಿನಬಿಸಿಎಂ ಹಾಸ್ಟೆಲ್ (100ಬೆಡ್), ಗುತ್ತೂರಿನಲ್ಲಿರುವಸಮಾಜ ಕಲ್ಯಾಣ ಹಾಸ್ಟೆಲ್ (30ಬೆಡ್), ಹೊನ್ನಾಳಿತಾಲೂಕಿನಲ್ಲಿ ಮಾದನಬಾವಿಯ ಮೊರಾರ್ಜಿದೇಸಾಯಿ ಹಾಸ್ಟೆಲ್ (100ಬೆಡ್), ಕಾಡದಕಟ್ಟಿಗ್ರಾಮದ ಕಿತ್ತೂರುರಾಣಿ ಚೆನ್ನಮ್ಮ ಶಾಲೆ (100 ಬೆಡ್),ಚನ್ನಗಿರಿ ತಾಲೂಕಿನಲ್ಲಿ ಚನ್ನಗಿರಿಯ ಕಿತ್ತೂರುರಾಣಿಚೆನ್ನಮ್ಮ ಶಾಲೆ (100 ಬೆಡ್), ಜಗಳೂರು ತಾಲೂಕಿನಲ್ಲಿಮೆದಗಿನಕೆರೆಯ ಮೊರಾರ್ಜಿ ಶಾಲೆ (100ಬೆಡ್) ಸೇರಿಒಟ್ಟು 760 ಬೆಡ್‌ಗಳ ವ್ಯವಸ್ಥೆ ಮಾಡಲಾಗಿದ್ದು 435ಕ್ಕೂಹೆಚ್ಚು ಸೋಂಕಿತರು ಸೇವೆ ಪಡೆಯುತ್ತಿದ್ದಾರೆ. ಕೊರೊನಾಅಲೆ ಎದುರಿಸಲು ಕೊರೊನಾ ಆರೈಕೆ ಕೇಂದ್ರಗಳನ್ನುತೆರೆದು, ಅವಶ್ಯ ವೈದ್ಯಕೀಯ ಹಾಗೂ ಇತರೆ ಸೇವೆನೀಡಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.
ಎಚ್.ಕೆ. ನಟರಾಜ