ಉಡುಪಿ: ಕರ್ನಾಟಕ ಸಾಹಿತ್ಯ ಅಕಾಡೆಮಿ ಯೋಜನೆಯಾದ ಬಂಗಾರದ ಎಲೆಗಳು-ಸಾಹಿತಿ ಮಾಹಿತಿ ಕೋಶದಲ್ಲಿ 7,200ಕ್ಕೂ ಹೆಚ್ಚು ಸಾಹಿತಿಗಳ ಮಾಹಿತಿಯನ್ನು ಅಕಾಡೆಮಿಯ ವೆಬ್‌ಸೈಟ್ //www.sahithyaacademy.karna taka.gov.in ನಲ್ಲಿ ಅಪ್ಲೋಡ್ ಮಾಡಲಾಗಿದ್ದು,
Advertisement
ಮಾಹಿತಿ ಕೋಶದಲ್ಲಿ ಯಾವುದಾದರೂ ತಿದ್ದುಪಡಿಗಳಿದ್ದಲ್ಲಿ ಅಥವಾ ಹೊಸದಾಗಿ ಸೇರ್ಪಡೆ ಗೊಳಿಸಬೇಕಾಗಿರುವ ಹೆಸರು ಗಳಿದ್ದಲ್ಲಿ ಸೂಕ್ತ ಮಾಹಿತಿ, ದಾಖಲೆಗಳೊಂದಿಗೆ ಸಾಹಿತ್ಯ ಅಕಾಡೆಮಿ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು ಇಲ್ಲಿಗೆ ಸಲ್ಲಿಸಬಹುದಾಗಿದೆ ಎಂದು ಅಕಾಡೆಮಿ ರಿಜಿಸ್ಟ್ರಾರ್ ಪ್ರಕಟನೆ ತಿಳಿಸಿದೆ.