ಕುಂಬಳೆ: ಮಂಗಲ್ಪಾಡಿ ಅಡ್ಕ ಶ್ರೀ ಐವರ್ ಭಗವತೀ ಸನ್ನಿಧಿಯಲ್ಲಿ ಪುನಃಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಮತ್ತು ನೂತನ ಭಂಡಾರ ಗೃಹಪ್ರವೇಶ ಕಾರ್ಯಕ್ರಮವು ಬಡಾಜೆ ಬೀಡು ಬ್ರಹ್ಮಶ್ರೀ ಗೋಪಾಲಕೃಷ್ಣ ತಂತ್ರಿವರ್ಯರ ಆಚಾರ್ಯತ್ವದಲ್ಲಿ ಮಾ. 9ರಂದು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಬುಧವಾರ ಬೆಳಗ್ಗೆ ಗಣಪತಿ ಹೋಮ, ಚಂಡಿಕಾಯಾಗ, ಶಾಂತಿ ಹೋಮ, ಸಂಹಾರ ತತ್ವ ಹೋಮ, ಸಂಹಾರ ತತ್ವಕಲಶ, ಕಲಾಶಾಭಿಷೇಕ, ಕಲಶ ಮಂಡಲ ಪೂಜೆಯ ಬಳಿಕ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಅಪರಾಹ್ನ ಭಕ್ತಿಗಾನ ಸುಧಾ, ಭಂಡಾರ ಗೃಹದಲ್ಲಿ ವಾಸ್ತುಪೂಜೆ, ಶ್ರೀ ಕ್ಷೇತ್ರದಲ್ಲಿ ಬ್ರಹ್ಮಕಲಶಾಧಿವಾಸ, ಬಿಂಬಾಧಿವಾಸ, ಶ್ವಿತತತ್ವ ಹೋಮ, ಶಕ್ತಿದಂಡ ಕಮಂಡಲ ಪೂಜೆ, ಅಧಿವಾಸ ಹೋಮ ನಡೆಯಿತು. ರಾತ್ರಿಬಾಲ ಪ್ರತಿಭೆಗಳಿಂದ ನೃತ್ತನೃತ್ಯಗಳು. ರಾತ್ರಿ ನಾಟ್ಯ ವಿದ್ಯಾನಿಲಯ ಕುಂಬಳೆ ಇವರ ಶಿಷ್ಯವೃಂದದಿಂದ ನೃತ್ಯ ವೈವಿಧ್ಯ ಜರಗಿತು.
ಮಾ.9ರಂದು ಬೆಳಗ್ಗೆ ಗಂಟೆ 5.30ರಿಂದ ಗಣಪತಿ ಹೋಮ, ಬೆಳಗ್ಗೆೆ 7.24ರ ಮೀನ ಲಗ್ನ ಸುಮುಹೂರ್ತದಲ್ಲಿ ನೂತನ ಭಂಡಾರ ಗೃಹ ಪ್ರವೇಶ, ದೀಪ ಪ್ರತಿಷ್ಠೆ, ಗುರು ಪ್ರತಿಷ್ಠೆ, 10.24ರಿಂದ 11.20ರ ವೃಷಭ ಲಗ್ನ ಸುಮೂರ್ತದಲ್ಲಿ ಶ್ರೀ ಕ್ಷೇತ್ರದಲ್ಲಿ ಮತ್ತು ಶ್ರೀ ವಿಷ್ಣುಮೂರ್ತಿ ಕ್ಷೇತ್ರದಲ್ಲಿ ಪುನಃಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ, ಗುಳಿಗ ದೈವದ ಪ್ರತಿಷ್ಠಾ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಮಹಾ ಅನ್ನಸಂತರ್ಪಣೆ ನಡೆಯಲಿದೆ.
ಅಪರಾಹ್ನ 2.30ರಿಂದ ಮಹಿಳಾ ಯಕ್ಷಕೂಟ ಪೊನ್ನೆತೋ¤ಡು ಕಯ್ನಾರು ತಂಡದಿಂದ ಯಕ್ಷ ಗಾನ ತಾಳಮದ್ದಳೆ ಇಂದ್ರಜಿತು ಕಾಳಗ,ಸಂಜೆ 5.30ರಿಂದ ಜರಗುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ಮೋಹನದಾಸ ಪರಮ ಹಂಸ ಸ್ವಾಮೀಜಿ ಮತು ಶ್ರೀ ಗುರುದೇವಾನಂದ ಸ್ವಾಮೀಜಿ ಯವರು ಆಶೀರ್ವಚನ ನೀಡಲಿರುವರು. ಗೋಪಾಲ ಎಂ. ಬಂದ್ಯೋಡು ಆಧ್ಯಕ್ಷತೆ ವಹಿಸುವ ಸಮಾರಂಭದಲ್ಲಿ ರಮೇಶ ಕಾರಂತ ಬೆದ್ರಡ್ಕ, ಗಣ್ಯರಾದ ವಿಠಲ್ ರೈ, ಅಡ್ಕಗುತ್ತು, ಬಿ. ವಸಂತ ಪೈ, ಶ್ರೀ ಸುರೇಶ್, ಶ್ರೀ ಪಿ.ಆರ್. ಶೆಟ್ಟಿ ಪೊಯೆಲು, ಡಾ| ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಕೋಡಿಬೈಲು ನಾರಾಯಣ ಹೆಗ್ಡೆ, ನ್ಯಾಯವಾದಿ ವಾನಂದೆ ಬಾಲಕೃಷ್ಣ ಶೆಟ್ಟಿ, ಸಣ್ಣಹಿತ್ಲು ಶ್ರೀ ಕೊರಗಪ್ಪ ಶೆಟ್ಟಿ, ಮುಳಿಂಜಗುತ್ತು ಸಂಜೀವ ಭಂಡಾರಿ, ಶಿವರಾಮ ಪಕ್ಕಳ, ಕುಡಾಲು ಸತೀಶ್ಚಂದ್ರ ಶೆಟ್ಟಿ ಕೊಂಡೆವೂರು, ಆನಂದ ಕೊಟ್ಲು, ಲಕ್ಷ್ಮಣ ಪೆರಿಯಡ್ಕ, ಎಚ್.ಉದಯ ಆಳ್ವ, ಮುಗೇರ್‌ಗುತ್ತು ಸುಧೀಶ್ಚಂದ್ರ ಶೆಟ್ಟಿ, ಸಂಜೀವ ಕುಂಜತ್ತೂರು, ಉಮೇಶ್ ಕುಂಡೇರಿ ಅತಿಥಿಗಳಾಗಿ ಭಾಗವಹಿಸಲಿರುವರು. ರಾತ್ರಿ 8.30ಕ್ಕೆ ಹೂವಿನ ಪೂಜೆ, 9ಕ್ಕೆ ನಡಾವಳಿ ಉತ್ಸವ, 10.30ರಿಂದ ನೃತ್ಯ ಸೌರಭ ನಾಟ್ಯಾಲಯ ಉಳ್ಳಾಲ ಇವರಿಂದ ಭರತನಾಟ್ಯದೊಂದಿಗೆ ಸಂಪನ್ನಗೊಳ್ಳಲಿದೆ. ಮಾ 19ರಿಂದ 24ರ ತನಕ ಕ್ಷೇತ್ರದಲ್ಲಿ ವಾರ್ಷಿಕ ಕಳಿಯಾಟ ಮಹೋತ್ಸವ ಜರಗಲಿದೆ.