Advertisement

ಅಡ್ಡಪಲ್ಲಕ್ಕಿ ಮಹೋತ್ಸವ: ಪೂರ್ವಭಾವಿ ಸಭೆ

03:20 PM Apr 05, 2017 | Team Udayavani |

ಜೇವರ್ಗಿ: ತಾಲೂಕಿನ ಯಡ್ರಾಮಿ ಹತ್ತಿರದ ರೇಣುಕಗಿರಿ ಶಾಖಾಮಠದ 3ನೇ ವಾರ್ಷಿಕ ಮಹೋತ್ಸವ, ಸಿದ್ಧಾಂತ ಶಿಖಾಮಣಿ ಪ್ರವಚನ, ಅಡ್ಡಪಲ್ಲಕ್ಕಿ ಮಹೋತ್ಸವದ ಅಂಗವಾಗಿ ಮಂಗಳವಾರ ಆಲೂರಿನ ಸಂಸ್ಥಾನ ಹಿರೇಮಠದ ಕೆಂಚಬಸವ ಶಿವಾಚಾರ್ಯರ ನೇತೃತ್ವದಲ್ಲಿ ರೇಣುಗಿರಿಯಲ್ಲಿ ಪೂರ್ವಭಾವಿ ಸಭೆ ನಡೆಯಿತು. 

Advertisement

ವೀರಶೈವ ಸಮಾಜದ ಮುಖಂಡ ರಾಜಶೇಖರ ಸೀರಿ ಮಾತನಾಡಿ, ಆಲೂರಿನ ಕೆಂಚಬಸವ ಶಿವಾಚಾರ್ಯರು ಯಡ್ರಾಮಿ ಹತ್ತಿರ ರೇಣುಕಗಿರಿ ಶಾಖಾ ಮಠ ನಿರ್ಮಿಸಿ 51 ಅಡಿ ಎತ್ತರದ ರೇಣುಕಾಚಾರ್ಯರ ಮೂರ್ತಿ, 21 ಅಡಿ ಎತ್ತರದ ನಂದಿ ಮೂರ್ತಿ ಸ್ಥಾಪಿಸಿ ಭಕ್ತರ ಏಳ್ಗೆ, ಧರ್ಮದ ಉನ್ನತಿಗಾಗಿ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು. 

ಶಾಖಾ ಮಠದ 3ನೇ ವಾರ್ಷಿಕೋತ್ಸವ ಸಮಾರಂಭದ ಅಂಗವಾಗಿ ಕಳೆದ ಮಾ.21 ರಿಂದ ಕೆಂಚಬಸವೇಶ್ವರ ಲೀಲಾಮೃತ ಪುರಾಣ ಕಾರ್ಯಕ್ರಮ ಆರಂಭಿಸಲಾಗಿದ್ದು, ಏ.5 ರಂದು ಕಾಶೀ ಜಗದ್ಗುರು ಡಾ| ಚಂದ್ರಶೇಖರ ಶಿವಾಚಾರ್ಯ ರಾಜದೇಶಿಕೇಂದ್ರ ಭಗವತ್ಪಾದರನ್ನು ಯಡ್ರಾಮಿಯಿಂದ ಸಾರೋಟಿನಲ್ಲಿ ರೇಣುಕಗಿರಿಯ ವರೆಗೆ ಭವ್ಯ ಮೆರವಣಿಗೆಯೊಂದಿಗೆ ಕರೆತರಲಾಗುವುದು ಎಂದು ತಿಳಿಸಿದರು. 

ರಾತ್ರಿ ಕಾಶೀ ಜಗದ್ಗುರುಗಳಿಂದ ಸಿದ್ಧಾಂತ ಶಿಖಾಮಣಿ ಲಿಂಗಧಾರಣ ಸ್ಥಲ ಮತ್ತು ಗುರು ಕಾರುಣ್ಯ ಸ್ಥಲದ ಪ್ರವಚನ ಪ್ರಾರಂಭವಾಗಲಿದೆ. ಏ.10 ರಂದು ಸಂಜೆ ಪುರಾಣ ಮಹಾಮಂಗಲ, ಏ.11 ರಂದು ಆಲೂರ ಗ್ರಾಮದ ಸಂಸ್ಥಾನ ಹಿರೇಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಕಾಶೀ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ, ಸಂಜೆ 6:00 ಗಂಟೆಗೆ ರಥೋತ್ಸವ ನಂತರ ಧಾರ್ಮಿಕಸಭೆ ಜರುಗಲಿದೆ ಎಂದು ಹೇಳಿದರು. 

ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಹಾಗೂ ಗುರುರಕ್ಷೆ ನೀಡಿ ಗೌರವಿಸಲಾಗುತ್ತಿದೆ. ಪುರಾಣ-ಪ್ರವಚನ ಕಾರ್ಯಕ್ರಮಕ್ಕೆ ಆಗಮಿಸುವ ಸುತ್ತಮುತ್ತಲಿನ ಭಕ್ತರಿಗೆ ಪ್ರಸಾದ ವ್ಯವಸ್ಥೆ ಹಾಗೂ ವಾಹನ ಸೌಲಭ್ಯ ಕಲ್ಲಿಸಲಾಗಿದೆ ಎಂದು ವಿವರಿಸಿದರು. 

Advertisement

ಯಡ್ರಾಮಿಯ ವೀರಶೈವ ಸಮಾಜದ ಮುಖಂಡ ಚಂದ್ರಶೇಖರ ಪುರಾಣಿಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಲೂರಿನ ಕೆಂಚಬಸವ ಶಿವಾಚಾರ್ಯರು, ನಿಡಗುಂದದ ಕರುಣೇಶ್ವರ ಸ್ವಾಮೀಜಿ, ಜಿಲ್ಲಾ ರೈತ ಮುಖಂಡ ಕೇದಾರಲಿಂಗಯ್ಯ ಹಿರೇಮಠ, ಸ್ವಾಗತ ಸಮಿತಿ ಅಧ್ಯಕ್ಷ ಬಸಲಿಂಗಪ್ಪ ಅಂಕಲಕೋಟಿ ಹಾಗೂ ಮತ್ತಿತರರು ಭಾಗವಹಿಸಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next