ಅವರೊಂದಿಗೆ ಶಾಮೀಲು ಆಗುತ್ತಿರುವುದರಿಂದ ಕಾಮಗಾರಿಗಳನ್ನು ವಿಳಂಬವಾಗುವಂತೆ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರೀ? ಇಂದು ಸಂಜೆ
ಒಳಗಾಗಿ ಒಂದು ವರ್ಷದಿಂದ ಕಾಮಗಾರಿ ಆರಂಭಿಸದ ಗುತ್ತಿಗೆದಾರರ ಪಟ್ಟಿ ಸಿದ್ಧಮಾಡಿ ಕೊಡಿ ಅವರನ್ನು ಕಪ್ಪು ಪಟ್ಟಿಗೆ ಸೇರಿಸಲು ಮೇಲಾಧಿ ಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಹೇಳಿದರು.
Advertisement
ಅಧಿಕಾರಿಗಳ ನಿರ್ಲಕ್ಷದಿಂದ ಕಾಮಗಾರಿಗಳು ಕುಂಠಿತಗೊಳ್ಳುತ್ತಿವೆ. ಪ್ರಗತಿ ಸಭೆಯಲ್ಲಿ ಕಾಮಗಾರಿಗಳನ್ನು ವಾರದಲ್ಲಿ, ತಿಂಗಳಲ್ಲಿ ಮುಗಿಸಲಾಗುವುದು ಎಂದು ಸುಳ್ಳು ಭರವಸೆ ನೀಡುತ್ತಿದ್ದಿರಿ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕನಕ, ಅಂಬೇಡ್ಕರ್, ಜಗಜೀವನರಾಂ, ಸೇವಾಲಾಲ ಸೇರಿದಂತೆ ಅನೇಕ ಭವನಗಳು ಮಂಜೂರಾಗಿ ಎರಡು ವರ್ಷ ಕಳೆದರೂ ಸರ್ಕಾರಿ ನಿವೇಶನ ಹುಡುಕಿ ಕೊಡಲು ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ. ನಿಮ್ಮಿಂದ ಹೇಗೆ ಅಭಿವೃದ್ಧಿ ಸಾಧ್ಯ ಎಂದು ಅಧಿಕಾರಿಗಳ ವಿರುದ್ಧ ಅಸಮಧಾನ ವ್ಯಕ್ತ ಪಡಿಸಿದರು. ಅರಣ್ಯ ಇಲಾಖೆಗೆ ಅ ಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು ನಿವು ಹಚ್ಚಿದ ಗಿಡಗಳು ಎಲ್ಲಿಯೂ ಕಾಣುತ್ತಿಲ್ಲ. ಅನುದಾನ ಬೀಡುಗಡೆ ತಡೆ ಹಿಡಿಯಲಾಗುವುದು ಎಂದು ಹೇಳಿ ಸುಳ್ಳು ಮಾಹಿತಿ ನೀಡಬೇಡಿ. ಪುರಸಭೆಯ ಜನಪ್ರತಿನಿಧಿಗಳೊಂದಿಗೆ ಕೂಡಿಕೊಂಡು ಕ್ರಿಯಾಯೋಜನೆ ರೂಪಿಸಿ ಪಟ್ಟಣವನ್ನು ಹಸಿರುಕರಣ ಮಾಡಿ ಎಂದು ಸೂಚಿಸಿದರು.
ಅಧ್ಯಕ್ಷ ಜಗದೇವರಡ್ಡಿ ಪಾಟೀಲ, ಜಿಪಂ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ, ಜಿಪಂ ಸದಸ್ಯ ಶಿವರುದ್ರ ಭೀಣಿ, ತಾಪಂ ಉಪಾಧ್ಯಕ್ಷ ಹರಿನಾಥ ಚವ್ಹಾಣ, ತಹಶೀಲ್ದಾರ ಮಲ್ಲೇಶಾ ತಂಗಾ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಣ ಶೃಂಗೇರಿ ಇದ್ದರು.
Related Articles
ಕಳೆದ ಬಿಜೆಪಿ ಸರ್ಕಾರದಲ್ಲಿ ತಾಲೂಕಿನಲ್ಲಿ ಶಾಲೆ ಬಿಟ್ಟ ಮಕ್ಕಳ ಸಂಖ್ಯೆ ಹತ್ತು ಸಾವಿರ ಇತ್ತು. ಅಂದು ಹೈಕೋರ್ಟ್ ತಾಲೂಕಿಗೆ ಛೀ ಮಾರಿ ಹಾಕಿತ್ತು.
ಆದರೆ ಇದೀಗ ಕೇವಲ ನಾಲ್ಕು ವರ್ಷದಲ್ಲಿ ಆ ಸಂಖ್ಯೆಯನ್ನು ಇಳಿಸಿದ ಪರಿಣಾಮ 323 ಮಕ್ಕಳು ಮಾತ್ರ ಶಾಲೆ ಬಿಟ್ಟ ಮಾಹಿತಿ ಇದೆ. ಎಸ್ಸೆಸ್ಸೆಲ್ಸಿ
ಪರೀಕ್ಷೆ ಫಲಿತಾಂಶ ಆಗ ಕೇವಲ ಶೇ. 40ರಷ್ಟು ಇತ್ತು. ಇಂದು ಶೇ.74ರಷ್ಟು ಬಂದಿದೆ. ಜಿಲ್ಲೆಯಲ್ಲಿ ಎರಡನೇ ಸ್ಥಾನ ಲಭಿಸಿದೆ. ಇದು ಶಿಕ್ಷಣದ
ಅಭಿವೃದ್ಧಿಯಲ್ಲವೇ? ಶಿಕ್ಷಣ ಕುಂಠಿತಗೊಂಡಿದೆ ಎಂದು ಮಾತನಾಡುವ ಬಿಜೆಪಿಯವರಿಗೆ ಇದು ಕಾಣಿಸುತ್ತಿಲ್ಲವೇ? ಎಂದು ಸಚಿವ ಪ್ರಿಯಾಂಕ್
ಖರ್ಗೆ ಪ್ರಶ್ನಿಸಿದರು.
Advertisement