Advertisement
ಈ ಸಂಬಂಧ ಶುಕ್ರವಾರ ಅವರು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. 12 ವರ್ಷಗಳ ಹಿಂದೆ ಜೋಗಿ ಸಮಾಜದ ಬಗ್ಗೆ ಕುಲಶಾಸ್ತ್ರೀಯ ಅಧ್ಯಯನ ಸಹ ನಡೆದಿದೆ. ಕುಲಶಾಸ್ತ್ರೀಯ ಅಧ್ಯಯನ ವರದಿಯನ್ನು ಯಥಾವತ್ತಾಗಿ ಜಾರಿ ಮಾಡಬೇಕು ಜೋಗಿ ಸಮಾಜದ ಸಮುದಾಯ ಅಲೆಮಾರಿ ಜನಾಂಗ ಉಳಿಯಲು ಸ್ವಂತ ಮನೆ ಇಲ್ಲ. ಉಳಿಯಲು ಭೂಮಿ ಇಲ್ಲ. ಸಾಕ್ಷರತೆ 00.01 ಇದೆ .ಮೂಡನಂಬಿಕೆ, ಕಂದಾಚಾರ ಸಮಾಜದಲ್ಲಿ ತುಂಬಿದೆ. ಹಾಗಾಗಿ ನಮಗೂ ಗೌರವದ ಬದುಕು ಕೊಡಲು ಸರ್ಕಾರ ನಮ್ಮ ಜೋಗಿ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕು ಎಂದು ಅಖಿಲ ಕರ್ನಾಟಕ ಜೋಗಿ ಸಮಾಜ ಮಹಾಮಂಡಳದ ಗೌರವ ಸಲಹೆಗಾರ ಅಶೋಕ ಎಂ.ಜೋಗಿ ಸಿದ್ದಾಪುರ ಅವರು ಜಿಲ್ಲಾಧಿಕಾರಿಗಳಲ್ಲಿ ವಿನಂತಿಸಿದರು.
Advertisement
Karwar; ಜೋಗಿ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಿ: ಸರ್ಕಾರಕ್ಕೆ ಒತ್ತಾಯ
03:50 PM Aug 18, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.