ಶಹಾಬಾದ: ಸಿದ್ಧರಾಮೇಶ್ವರರು ಹನ್ನೆರಡನೇ ಶತಮಾನದಲ್ಲಿ ಸಾಮಾಜಿಕ ಬದಲಾವಣೆಗೆ ತಮ್ಮದೇ ಆದ ಕೊಡುಗೆ ನೀಡಿದವರು.ಅವರ ತತ್ವ, ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾಮಾಜಿಕ ಬದಲಾವಣೆಯಲ್ಲಿ ತೊಡಗಿಸಿಕೊಳ್ಳಬೇಕಾಗಿದೆ ಎಂದು ನಗರಸಭೆ ಪೌರಾಯುಕ್ತ ಬಿ. ಬಸಪ್ಪ ಹೇಳಿದರು.
ನಗರಸಭೆ ಕಾರ್ಯಾಲಯದಲ್ಲಿ ಆಯೋಜಿಸಲಾಗಿದ್ದ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಸಿದ್ಧರಾಮೇಶ್ವರರು ಶೋಷಿತ ವರ್ಗಕ್ಕೆ ಸೇರಿದವರಾಗಿದ್ದರು. ಅವರು 12ನೇ ಶತಮಾನದಲ್ಲಿ ಬಸವಣ್ಣನವರು ನಡೆಸಿದ ಸಾಮಾಜಿಕ ಕ್ರಾಂತಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ತಮ್ಮ ವಚನಗಳ ಮೂಲಕ ಸಾಮಾಜಿಕ ಅಸಮಾನತೆ ತೊಡೆದು ಹಾಕುವ ಕಾರ್ಯ ಮಾಡಿದರು. ಅವರ ಜಯಂತಿ ಆಚರಿಸುವ ಜತೆಗೆ ಅವರ ತತ್ವ-ಸಿದ್ಧಾಂತ ಪಾಲಿಸುವ, ಅವರ ವಚನಗಳ ಬಗ್ಗೆ ಬೆಳಕು ಚೆಲ್ಲುವ ಕಾರ್ಯ ಮಾಡಬೇಕೆಂದು ಹೇಳಿದರು.
ಭೋವಿ ವಡ್ಡರ ಸೇವಾ ಸಂಘದ ಅಧ್ಯಕ್ಷ ಕನಕಪ್ಪ ದಂಡಗುಲಕರ್ ಮಾತನಾಡಿ, ಸಿದ್ಧರಾಮೇಶ್ವರರು ಒಬ್ಬ ಮಹಾನ್ ಶರಣರು. ಅವರ ಸಾಮಾಜಿಕ ಕಳಕಳಿ, ಮೌಡ್ಯದ ಬಗ್ಗೆ ಇದ್ದ ನಿಲುವು ಸಾರ್ವಕಾಲಿಕ ಎಂದರು. ನೈರ್ಮಲ್ಯ ನಿರೀಕ್ಷಕ ಶಿವರಾಜಕುಮಾರ, ರಾಕೇಶ, ಉಮೇಶ, ಅನೀಲ, ಮಲ್ಲಿಕಾರ್ಜುನ, ಸಿದ್ರಾಮ ಕುಸಾಳೆ ಇದ್ದರು.