ತೊರಿಸಿಕೊಟ್ಟ ದೇಶದ ಅನನ್ಯ ರತ್ನಗಳಲ್ಲಿ ಡಾ| ಸರ್ವಪಲ್ಲಿ ರಾಧಾಕೃಷ್ಣನ್ ಒಬ್ಬರಾಗಿದ್ದಾರೆ. ಅಂತಹ ಮಹಾನ್ ನಾಯಕರ ಆದರ್ಶಗಳನ್ನು ಶಿಕ್ಷಕರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಾಸಕ ನಾಗನಗೌಡ ಕಂದಕೂರ ಹೇಳಿದರು.
Advertisement
ಪಟ್ಟಣದ ಗಾಂಧಿ ಮೈದಾನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದವರ ವತಿಯಿಂದ ಏರ್ಪಡಿಸಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ದೇಶದ ಭವಿಷ್ಯ ರೂಪಿಸುವ ಶಕ್ತಿ ಗುರುಗಳ ಕೈಯಲ್ಲಿದೆ. ಇಂತಹ ಶಕ್ತಿ ಹೊಂದಿರುವ ಶಿಕ್ಷಕರು ಮಕ್ಕಳನ್ನು ತಿದ್ದಿ ತಿಡಿ
ಸಮಾಜದ ಸತ್ಪಪ್ರಜೆಗಳನ್ನಾಗಿ ಮಾಡಬೇಕಾದ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.
ಶಿಕ್ಷಕರಾದವರು ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ಮಾಡುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಮನವಿ ಮಾಡಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜಿಲ್ಲಾ ಪಂಚಾಯತಿ ಅಧ್ಯಕ್ಷ ಬಸರೆಡ್ಡಿ ಪಾಟೀಲ ಅನಪುರ ಮಾತನಾಡಿ, ಯಾದಗಿರಿ ಜಿಲ್ಲೆಯ ಎಸ್.ಎಸ್.ಎಲ್.ಸಿ ಪರಿಕ್ಷಾ ಫಲಿತಾಂಶದಲ್ಲಿ ಕಟ್ಟಕಡೆಯ ಸ್ಥಾನದಲ್ಲಿದೆ. ಇದನ್ನು ಬದಲಾಯಿಸಲು ಶಿಕ್ಷಕರು ತಮ್ಮ ಶಕ್ತಿ ಮೀರಿ ಪ್ರಯತ್ನ ನಡೆಸುವುದರ ಜೊತೆಯಲ್ಲಿ ಯಾದಗಿರಿ ಜಿಲ್ಲೆಯ ಶೈಕ್ಷಣಿಕ ಪ್ರಗತಿಗೆ ಶ್ರಮಿಸಬೇಕು. ಇದಕ್ಕೆ ಬೇಕಾಗುವ ಎಲ್ಲಾ ಸಹಾಯ ಸಹಕಾರ ಸದಾ ಇರುತ್ತದೆ ಎಂದು ತಿಳಿಸಿದರು. ಯಾದಗಿರಿ ತಾಲೂಕು ಕ್ಷೇತ್ರಶಿಕ್ಷಣಾಧಿಕಾರಿ ರುದ್ರಗೌಡ ಕಾರ್ಯಕ್ರಮ ಉದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
Related Articles
ಪುರಸಭೆ ಸದಸ್ಯರಾದ ರವೀಂದ್ರ ರೆಡ್ಡಿ, ಆಶನ್ನ ಬುದ್ಧ, ಕೃಷ್ಣಾ ಮೇಧಾ, ಶಶಿಕಾಂತ ಕಶೆಟ್ಟಿ, ಶರಣಗೌಡ ಪಾಟೀಲ ಭಿಮನಳ್ಳಿ, ವ್ಹಿ.ಎಸ್. ಹಿರೇಮಠ, ಅಶೋಕ ಕೆಂಭಾವಿ, ಮಹಾದೇವಪ್ಪ, ರವೀಂದ್ರ ಚಿಂತನಹಳ್ಳಿ, ಹಣಮಂತ ಹೊಸಮನಿ, ಬನ್ನಪ್ಪ ಸುಂಕದ, ರಾಜಶೇಖರಗೌಡ, ಆರೀಫ್ ಮಲ್ಲಿಕಾರ್ಜುನ ಬಿಳಾರ, ಎಸ್.ಎಸ್. ಗಡ್ಡಿ, ಅಪ್ಪಾರಾವ ಸಂಕೋಳ್ಳಿ, ಕಿಷ್ಟರೆಡ್ಡಿ ಪಾಟೀಲ, ಬಾಲಪ್ಪ ನಿರೇಟಿ, ವಿಜಯ ಕುಮಾರ ನಿರೇಟಿ ಇದ್ದರು.
Advertisement
ಗುರುಮಠಕಲ್ ಖಾಸಾ ಮಠದ ಪೀಠಾಧಿ ಪತಿಗಳಾದ ಶ್ರೀ ಶಾಂತವೀರ ಗುರುಮುರುಘರಾಜೇಂದ್ರ ಮಹಾಸ್ವಾಮೀಜಿದಿವ್ಯ ಸಾನಿಧ್ಯ ವಹಿಸಿ ಆಶೀರ್ವನ ನೀಡಿದರು. ಮಲ್ಲಿಕಾರ್ಜುನ ಸ್ವಾಗತಿಸಿದರು. ಬಾಲರಾಜ ಚಂಡರಕಿ ನಿರೂಪಿಸಿದರು. ಶಿವರಾಜ ಸಾಯಕ ವಂದಿಸಿದರು.