ಹೇಳಿದರು.
Advertisement
ಕಚೇರಿ ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹತ್ತಿಕುಣಿ, ಯರಗೋಳ, ಬಳಿಚಕ್ರ ಸೇರಿದಂತೆ ಮತಕ್ಷೇತ್ರದ ಜನರಿಗೆ ಗುರುಮಠಕಲ್ ಬಹಳ ದೂರ ಆಗುವುದರಿಂದ ಅವರಿಗೆ ಅನುಕೂಲ ಆಗುವ ದೃಷ್ಟಿಯಿಂದ ಯಾದಗಿರಿಯಲ್ಲಿ ಕಚೇರಿ ಆರಂಭಿಸಲಾಗಿದೆ ಎಂದರು.
ಎಲ್ಲಾ ಕ್ರಮ ಕೈಗೊಳ್ಳಲಾಗುತ್ತಿದೆ. ಕೈಗಾರಿಕಾ ಪ್ರದೇಶಕ್ಕೆ ರೈತರು ಭೂಮಿ ನೀಡಿದ್ದು, ಇನ್ನೂ ಕೆಲ ರೈತರಿಗೆ ಪರಿಹಾರ
ದೊರೆತಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಲಾಗಿದ್ದು, ಆದಷ್ಟು ಬೇಗ
ರೈತರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು. ಗುರುಮಠಕಲ್ ಮತಕ್ಷೇತ್ರದಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕಾಗಿ 6 ಎಕರೆ ಜಮೀನು ಬೇಕಾಗಿದ್ದು,
ಖಾಸಗಿಯವರೊಂದಿಗೆ ಮಾತುಕತೆ ನಡೆಯುತ್ತಿದೆ ಎಂದರು. ಪುರಸಭೆ ಅಧ್ಯಕ್ಷ ಸ್ಥಾನದ ಮೀಸಲಾತಿ ಬದಲಾವಣೆ ಕುರಿತು ಪ್ರತಿಕ್ರಿಯಿಸಿದ ಅವರು, ಅದು ಸಹಜ ಪ್ರಕ್ರಿಯೆಯಾಗಿದೆ ಎಂದರು.
Related Articles
ಗೊತ್ತಿದೆ. ಅದಕ್ಕಾಗಿ ಅವರಿಗೆ ಯಾವುದೇ ಮಂತ್ರಿ ಸ್ಥಾನದ ಬೇಡಿಕೆ ಇಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.
Advertisement
ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಯುವ ಉಪಾಧ್ಯಕ್ಷ ಶರಣಗೌಡ ಕಂದಕೂರು, ನ್ಯಾಯವಾದಿ ಎಸ್.ಬಿ.ಪಾಟೀಲ, ಲಕ್ಷ್ಮರೆಡ್ಡಿ ಅನಪುರ. ನಿತ್ಯಾನಂದ ಸ್ವಾಮಿ ಹಂದ್ರಿಕಿ, ಅಜಯರೆಡ್ಡಿ ಎಲೇರಿ, ಬಾಲಪ್ಪ ನಿರೇಟಿ, ರಾಜಶೇಖರಗೌಡ ವಡಗೇರಾ, ಶಂಕ್ರಪ್ಪ ದಿಬ್ಟಾ, ಬಸವಂತರಾಯಗೌಡ ಸೈದಾಪುರ, ಸಿರಾಜ್ ಚಿಂತಕುಂಟಾ, ಕಿಷ್ಟಾರೆಡ್ಡಿ ಪೊಲೀಸ್ ಪಾಟೀಲ, ಸುರೇಶ ಅಲ್ಲಿಪುರ, ಸೂಗಪ್ಪ ಸಾಹು ಕಡೇಚೂರು, ತಾಯಪ್ಪ ಬದ್ದೆಪಲ್ಲಿ, ನರಸಪ್ಪ ಬದ್ದೆಪಲ್ಲಿ, ಜಿ. ತಮ್ಮಣ್ಣ, ಶರಣು ಅವಂಟಿ, ಪ್ರಕಾಶ ನಿರೇಟಿ, ಅಂಬ್ರೇಶ್ ರಾಠೊಡ ಸೇರಿದಂತೆ ಜೆಡಿಎಸ್‌ನ ಪ್ರಮುಖರು ಇದ್ದರು.