Advertisement

Adani: ಅದಾನಿ ಆಸ್ತಿಮೌಲ್ಯ 8.38 ಲಕ್ಷ ಕೋಟಿ ರೂ.ಗೇರಿಕೆ

11:44 PM Feb 08, 2024 | Team Udayavani |

ನವದೆಹಲಿ: 100 ಬಿಲಿಯನ್‌ ಡಾಲರ್‌ ಆಸ್ತಿಮೌಲ್ಯ (8.38 ಲಕ್ಷ ಕೋಟಿ ರೂ.) ಹೊಂದಿರುವವರ ಕ್ಲಬ್‌ಗ ಉದ್ಯಮಿ ಗೌತಮ್‌ ಅದಾನಿ ಪುನಃ ಸೇರ್ಪಡೆಯಾಗಿದ್ದಾರೆ. ಬ್ಲೂಮ್‌ಬರ್ಗ್‌ ವರದಿಯ ಪ್ರಕಾರ, ಪ್ರಸ್ತುತ ಗೌತಮ್‌ ಅದಾನಿ ಅವರು ವಿಶ್ವದ 12ನೇ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ.

Advertisement

ಕಳೆದ ವಾರ ಅವರ ಮಾಲೀಕತ್ವದ ಅದಾನಿ ಎಂಟರ್‌ಪ್ರೈಸಸ್‌ನ ಲಾಭದಲ್ಲಿ ಶೇ.130ರಷ್ಟು ಏರಿಕೆಯಾಗಿದೆ. ಇದೇ ವೇಳೆ ಬುಧವಾರದವರೆಗೆ ಸತತ ಎಂಟು ದಿನಗಳು ಅದಾನಿ ಎಂಟರ್‌ಪ್ರೈಸಸ್‌ನ ಷೇರುಗಳ ಮೌಲ್ಯ ಏರಿಕೆ ಕಂಡಿದೆ. ಈ ಹಿನ್ನೆಲೆಯಲ್ಲಿ ಗೌತಮ್‌ ಅದಾನಿ ಅವರು ಪುನಃ 100 ಬಿಲಿಯನ್‌ ಡಾಲರ್‌ ಕ್ಲಬ್‌ಗ ಸೇರ್ಪಡೆಯಾಗಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next