ನವದೆಹಲಿ: ಗೌತಮ್ ಅದಾನಿ ವಿರುದ್ಧ ಇತ್ತೀಚೆಗೆ ಬಿಡುಗಡೆ ಮಾಡಲಾಗಿದ್ದ ಹಿಂಡೆನ್ ಬರ್ಗ್ ವರದಿ ಕುರಿತು ತನಿಖೆ ನಡೆಸಲು ಸುಪ್ರೀಂಕೋರ್ಟ್ ಗುರುವಾರ (ಮಾರ್ಚ್ 02) ತಜ್ಞರ ಸಮಿತಿಯನ್ನು ರಚಿಸಿದೆ.
ಇದನ್ನೂ ಓದಿ:ಭಾರತದ ಕೋವಿಡ್ ನಿಯಂತ್ರಣ ಕ್ರಮಗಳಿಗೆ ಬಿಲ್‌ಗೇಟ್ಸ್ ಬಹುಪರಾಕ್
ಅದಾನಿ-ಹಿಂಡೆನ್ ಬರ್ಗ್ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಇಂದು ಸುಪ್ರೀಂಕೋರ್ಟ್ ನ ನಿವೃತ್ತ ಜಡ್ಜ್ ಎ.ಎಂ.ಸಪ್ರೆ ನೇತೃತ್ವದ ತನಿಖಾ ಸಮಿತಿಯನ್ನು ರಚಿಸಿದೆ. ಹಿಂಡೆನ್ ಬರ್ಗ್ ವರದಿ ಬಹಿರಂಗಗೊಂಡ ಬೆನ್ನಲ್ಲೇ ಬಾಂಬೆ ಷೇರುಮಾರುಕಟ್ಟೆಯಲ್ಲಿ ಭಾರೀ ಪ್ರಮಾಣದ ಕುಸಿತ ಕಂಡಿದ್ದು, ಇದರಿಂದ ಹೂಡಿಕೆದಾರರಿಗೆ ಲಕ್ಷಾಂತರ ಕೋಟಿ ರೂ. ನಷ್ಟವಾಗಿದ್ದು, ಈ ಬಗ್ಗೆ ಸಪ್ರೆ ನೇತೃತ್ವದ ಸಮಿತಿ ತನಿಖೆ ನಡೆಸಲಿದೆ.
ಅದಾನಿ ವಹಿವಾಟಿಗೆ ಸಂಬಂಧಿಸಿದಂತೆ ಹಿಂಡೆನ್ ಬರ್ಗ್ ಬಿಡುಗಡೆ ಮಾಡಿರುವ ವರದಿ ಕುರಿತು ನಿವೃತ್ತ ಜಡ್ಜ್ ಸಪ್ರೆ ನೇತೃತ್ವದ ಸಮಿತಿ ಎರಡು ತಿಂಗಳೊಳಗೆ ತನಿಖೆ ವರದಿ ನೀಡುವಂತೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.
ಈ ಸಮಿತಿಯು ಷೇರುಮಾರುಕಟ್ಟೆಯಲ್ಲಾದ ಭಾರೀ ಏರಿಳಿತಕ್ಕೆ ಸಂಬಂಧಿಸಿದ ಪರಿಸ್ಥಿತಿ ಹಾಗೂ ಹೂಡಿಕೆದಾರರಿಗೆ ತಿಳಿವಳಿಕೆ ಮೂಡಿಸುವ ಕ್ರಮಗಳ ಬಗ್ಗೆ ಮಾಹಿತಿ ನೀಡಲಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
ನಿವೃತ್ತ ಜಡ್ಜ್ ಎಎಂ ಸಪ್ರೆ ಅವರನ್ನೊಳಗೊಂಡ ಆರು ಮಂದಿ ಸದಸ್ಯರ ಸಮಿತಿಯಲ್ಲಿ ನಿವೃತ್ತ ಜಡ್ಜ್ ಗಳಾದ ಓಪಿ ಭಟ್, ಜೆಪಿ ದೇವ್ ದತ್ ಹೆಸರನ್ನು ಸುಪ್ರೀಂಕೋರ್ಟ್ ಸೂಚಿಸಿದೆ.