Advertisement
ಅದಾನಿ ಬಂದರುಗಳು ಮತ್ತು ವಿಶೇಷ ಆರ್ಥಿಕ ವಲಯ ಲಿ.(ಎಪಿಎಸ್‌ಇಝೆಡ್) ಕಂಪನಿಯು ತನ್ನ ಅಂಗಸಂಸ್ಥೆಯಾದ ಅದಾನಿ ಹಾರ್ಬರ್ ಸರ್ವೀಸಸ್ ಲಿ. ಮೂಲಕ ಓಷಿಯನ್ ಸ್ಪಾರ್ಕಲ್ ಕಂಪನಿ(ಒಎಸ್‌ಎಲ್)ಯ ಎಲ್ಲ ಶೇ.100ರಷ್ಟು ಷೇರುಗಳನ್ನು ಖರೀದಿಸಿದೆ.
2050ರ ವೇಳೆಗೆ ಭಾರತವೇನಾದರೂ ಅಂದುಕೊಂಡಂತೆಯೇ 30 ಲಕ್ಷಕೋಟಿ ಡಾಲರ್ ಆರ್ಥಿಕತೆಯಾಗಿ ರೂಪುಗೊಂಡರೆ, ಹಸಿದ ಹೊಟ್ಟೆಯಲ್ಲಿ ನಿದ್ರಿಸುವಂಥ ಸ್ಥಿತಿ ಯಾರೊಬ್ಬರಿಗೂ ಬರುವುದಿಲ್ಲ ಎಂದು ಕೈಗಾರಿಕೋದ್ಯಮಿ ಗೌತಮ್ ಅದಾನಿ ಹೇಳಿದ್ದಾರೆ.
Related Articles
Advertisement
2050ರಿಂದ ನಾವು 10 ಸಾವಿರ ದಿನಗಳಷ್ಟು ದೂರವಿದ್ದೇವೆ. ಆ ಸಮಯ ಬರುವ ವೇಳೆಗೆ ನಾವು 25 ಲಕ್ಷಕೋಟಿ ಡಾಲರ್ ಅನ್ನು ಆರ್ಥಿಕತೆಗೆ ಸೇರಿಸಿದರೆ, ದೇಶದ ಜಿಡಿಪಿಗೆ ವರ್ಷಕ್ಕೆ ಹೆಚ್ಚುವರಿಯಾಗಿ 2.5 ಲಕ್ಷಕೋಟಿ ಡಾಲರ್ ಸೇರ್ಪಡೆಯಾಗಲಿದೆ. ಹಾಗಾಗಿ, ಎಲ್ಲ ರೀತಿಯ ಬಡತನವೂ ನಿರ್ಮಾಲನೆಯಾಗಲಿದೆ ಎಂದೂ ಅದಾನಿ ಹೇಳಿದ್ದಾರೆ.