“ಅದಮ್ಯ ಚೇತನ ಸೇವಾ ಉತ್ಸವ-2018′ ಆಯೋಜಿಸಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
Advertisement
ಸಂಸ್ಥೆಯ ಅಧ್ಯಕ್ಷೆ ಹಾಗೂ ವ್ಯವಸ್ಥಾಪಕ ಟ್ರಸ್ಟಿ ತೇಜಸ್ವಿನಿ ಅನಂತ್‌ಕುಮಾರ್ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿ ಡಿ.30ರಿಂದ ಜ.2ರವರೆಗೆ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಅದಮ್ಯ ಚೇತನ ಸೇವಾ ಉತ್ಸವ ನಡೆಯಲಿದೆ. ಇದೇ ವೇಳೆ ನ್ಯಾಷನಲ್ ಎಜುಕೇಷನ್ ಸೊಸೈಟಿಯ ಶತಮಾನೋತ್ಸವ ಸಂಭ್ರಮಾಚರಣೆ ಕೂಡ ನೆರವೇರಲಿದ್ದು, ಎರಡೂ ಕಾರ್ಯಕ್ರಮಗಳಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಚಾಲನೆ ನೀಡುವರು. ರಾಜ್ಯಪಾಲ ವಜುಬಾಯ್ ವಾಲಾ ಮತ್ತು ಸಿಎಂ ಸಿದ್ದರಾಮಯ್ಯ ಭಾಗವಹಿಸುವರು ಎಂದು ಹೇಳಿದರು.
ಜಾವಡೇಕರ್, ಪಿಯೂಶ್ ಗೋಯಲ್ ಪಾಲ್ಗೊಳ್ಳಲಿದ್ದಾರೆ. ನ್ಯಾಷನಲ್ ಎಜುಕೇಷನ್ ಸೊಸೈಟಿಯ ಶತಮಾನೋತ್ಸವ
ಸಂಭ್ರಮದಲ್ಲಿ ಸಂಸ್ಥೆಯ ಮಾಜಿ ಅಧ್ಯಕ್ಷರಾದ ದಿ ಡಾ.ಎಚ್.ನರಸಿಂಹಯ್ಯ ಕುರಿತು ಕಿರು ಪರಿಚಯ ಪ್ರದರ್ಶನವಿದ್ದು, ಕ್ರಿಕೆಟ್ ಆಟಗಾರ ಅನಿಲ್ ಕುಂಬ್ಳೆ, ನಟಿ ಭಾರತಿ ವಿಷ್ಣುವರ್ಧನ್, ಇಸ್ರೋ ಅಧ್ಯಕ್ಷ ಡಾ. ಎ.ಎಸ್.ಕಿರಣ್ ಕುಮಾರ್ ಹಾಗೂ ಇತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ವೈಮಾನಿಕ ಮತ್ತು ರಕ್ಷಣಾ ಪ್ರದರ್ಶನವು ಈ ವರ್ಷ ಉತ್ಸವದಲ್ಲಿ ಪ್ರಮುಖ ಆಕರ್ಷಣೆಯಾಗಿದ್ದು, ದೇಶದ ಪ್ರಮುಖ ರಕ್ಷಣಾ ಮತ್ತು ವೈಮಾನಿಕ ಸಂಸ್ಥೆಗಳಾದ ಐಎಎಫ್, ಇಸ್ರೋ, ಎಡಿಎ, ಎಚ್‌ಎಎಲ್ ಪಾಲ್ಗೊಳ್ಳಲಿವೆ. ಇದೇ ವೇಳೆ ವೈಜಾಗ್ ನಿಂದ ಭಾರತೀಯ ವಾಯುಸೇನೆಯ ವರುಣಾಸ್ತ್ರ (ಜಲಾಂತರ್ಗಾಮಿ ಕ್ಷಿಪಣಿ) ಈ ಪ್ರದರ್ಶನದ ವಿಶೇಷವಾಗಿದೆ. ಅಷ್ಟೇ ಅಲ್ಲದೇ, ಪರಿಸರ-ವೈಜ್ಞಾನಿಕ ಪ್ರದರ್ಶನಗಳು ಸಹ ನಡೆಯಲಿದ್ದು, ವಿಶಿಷ್ಟ ನೇಚರ್ ಸೈನ್ಸ್ ಇಂಟರ್ನ್ಶಿಪ್ ಕಾರ್ಯಕ್ರಮವನ್ನು ವಾಗ್ದೇವಿ ವಿಲಾಸ್ ಸಂಸ್ಥೆಗಳ ಅಧ್ಯಕ್ಷ ಕೆ.ಹರೀಶ್ ನಡೆಸಿಕೊಡಲಿದ್ದಾರೆ. ಪ್ರಕೃತಿ-ಸಂಸ್ಕೃತಿ ಪ್ರದರ್ಶನ ಕೂಡ ಇರಲಿದೆ ಎಂದರು.
Related Articles
Advertisement
ಸೌಂದರ್ಯ ಲಹರಿ ಮತ್ತು ಭಗವದ್ಗೀತೆ, ವಂದೇ ಮಾತರಂ ಸಾಮೂಹಿಕ ಪಠಣದೊಂದಿಗೆ ಯೋಗ, ನಿಸರ್ಗ-ವಿಜ್ಞಾನ ಪ್ರದರ್ಶನ, ಇಕೊ-ಚೇತನ ಪ್ರದರ್ಶನವೂ ಇದ್ದು, ಇದರಲ್ಲಿ ರಾಸಾಯನಿಕ ಮಕ್ತ ಧಾನ್ಯಗಳು, ಸಿರಿಧಾನ್ಯಗಳು, ರಾಸಾಯನಿಕ ಮುಕ್ತ ಸಾಬೂನು, ಟೆರೇಸ್ ಗಾರ್ಡ್‌ನ್ ಉತ್ಪನ್ನಗಳು, ಆಯುರ್ವೇದ ಔಷಧಗಳ ಪ್ರದರ್ಶನ ಮತ್ತು ಮಾರಾಟ, ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ವಿವರಿಸಿದರು.