ಸಿಡ್ನಿ: ಆಸ್ಟ್ರೇಲಿಯಾದ ಮಾಜಿ ಆಟಗಾರ ಆ್ಯಡಂ ಗಿಲ್ ಕ್ರಿಸ್ಟ್ ತನ್ನ ಹೊಡಿಬಡಿ ಆಟದಿಂದ ಪ್ರಸಿದ್ದರಾದವರು. ವಿಕೆಟ್ ಕೀಪರ್ ಕೂಡಾ ಆಗಿದ್ದ ಗಿಲ್ ಕ್ರಿಸ್ಟ್ ವಿಶ್ವ ಕ್ರಿಕೆಟ್ ನ ಶ್ರೇಷ್ಠ ವಿಕೆಟ್ ಕೀಪರ್ ಗಳಲ್ಲಿ ಓರ್ವ. 2008ರಲ್ಲಿ ದಿಢೀರ್ ಆಗಿ ನಿವೃತ್ತಿ ಘೋಷಿಸಿದ ಗಿಲ್ ಕ್ರಿಸ್ಟ್ ತನ್ನ ನಿವೃತ್ತಿಗೆ ಕಾರಣವಾದ ಅಂಶಗಳ ಬಗ್ಗೆ ಮಾತನಾಡಿದ್ದಾರೆ.
ಟಿವಿ ನಿರೂಪಕಿ ಮಡೋನಾ ಟಿಕ್ಸಿರಾ ಅವರ ಲೈವ್ ಕನೆಕ್ಟ್ ಶೋ ನಲ್ಲಿ ಮಾತನಾಡಿದ ಗಿಲ್ ಕ್ರಿಸ್ಟ್ 12 ವರ್ಷಗಳ ಹಿಂದಿನ ತನ್ನ ದೊಡ್ಡ ನಿರ್ಧಾರಕ್ಕೆ ಕಾರಣವೇನೆಂದು ಹೇಳಿದ್ದಾರೆ.
2008ರ ಭಾರತ – ಆಸ್ಟ್ರೇಲಿಯಾ ಸರಣಿಯ ಅಡಿಲೇಡ್ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಆಟಗಾರ ವಿವಿಎಸ್ ಲಕ್ಷ್ಮಣ್ ಅವರ ಕ್ಯಾಚ್ ಕೈಬಿಟ್ಟಿದ್ದೆ ನನ್ನ ವಿದಾಯ ನಿರ್ಧಾರಕ್ಕೆ ಕಾರಣ ಎಂದಿದ್ದಾರೆ.
ವಿವಿಎಸ್ ಲಕ್ಷ್ಮಣ್ ಮತ್ತು ಹರ್ಭಜನ್ ಸಿಂಗ್ ಯಾವಾಗಲೂ ಆಸೀಸ್ ತಂಡಕ್ಕೆ ದೊಡ್ಡ ಸವಾಲಾಗಿ ಪರಿಣಿಸಿದ್ದರು. ವಿವಿಯಸ್ ಲಕ್ಷ್ಮಣ್ ನಮ್ಮನ್ನು ಉರುಳಿಸಲು ಭಾರತದ ಬ್ಯಾಟಿಂಗ್ ವಿಭಾಗವನ್ನು ಸಮರ್ಪಕವಾಗಿ ಬಳಸುತ್ತಿದ್ದರು. ನಂತರ ಹರ್ಭಜನ್ ಸಿಂಗ್ ಬಂದು ಬೌಲಿಂಗ್ ಮಾಡಿ ನಮ್ಮ ಮೇಲೆ ಒತ್ತಡ ಹಾಕುತ್ತಿದ್ದರು ಎಂದು ಕಾಂಗರೂ ಮಾಜಿ ಆಟಗಾರ ಹೇಳಿದ್ದಾರೆ.
ಇದನ್ನೂ ಓದಿ: ನಿಯಮ ಉಲ್ಲಂಘನೆ: ತಂಡದಿಂದ ದೂರ ಉಳಿಯುವಂತೆ ಹಫೀಜ್ ಗೆ ಸೂಚಿಸಿದ ಪಾಕ್ ಮಂಡಳಿ
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಕುಂಬ್ಳೆ ನಾಯಕತ್ವದ ಭಾರತ ತಂಡ 526 ರನ್ ಗಳಿಸಿದ್ದರೆ, ಆಸೀಸ್ 563 ರನ್ ಗಳಿಸಿತ್ತು. ಎರಡನೇ ಇನ್ನಿಂಗ್ಸ್ ನಲ್ಲಿ ಭಾರತ ಏಳು ವಿಕೆಟ್ ನಷ್ಟಕ್ಕೆ 269 ರನ್ ಗಳಿಸಿ ಡಿಕ್ಳೇರ್ ಮಾಡಿತ್ತು. ಪಂದ್ಯ ಡ್ರಾ ಆಗಿತ್ತು.