ಸಿಡ್ನಿ: ಪ್ರಥಮ ಏಕದಿನ ಪಂದ್ಯದ ವೀಕ್ಷಕ ವಿವರಣೆ ವೇಳೆ ದೊಡ್ಡದೊಂದು ಎಡವಟ್ಟು ಮಾಡಿದ ಆಸ್ಟ್ರೇಲಿಯಾದ ಮಾಜಿ ಆಟಗಾರ. ಕಮೆಂಟೇಟರ್ ಆ್ಯಡಂ ಗಿಲ್‌ಕ್ರಿಸ್ಟ್ ಬಳಿಕ ಇದಕ್ಕಾಗಿ ಕ್ಷಮೆ ಯಾಚಿಸಿದ ಘಟನೆ ಸಂಭವಿಸಿದೆ.
ಕಮೆಂಟರಿ ನೀಡುತ್ತಿದ್ದ ವೇಳೆ, “ಭಾರತದ ಪೇಸ್ ಬೌಲರ್ ನವದೀಪ್ ಸೈನಿ ಅವರ ತಂದೆ ಇತ್ತೀಚೆಗೆ ನಿಧನರಾಗಿದ್ದರು’ ಎಂಬುದಾಗಿ ಗಿಲ್ ಕ್ರಿಸ್ಟ್ ಹೇಳಿದ್ದರು. ಆದರೆ ನಿಧನ ಹೊಂದಿದ್ದು ಸಿರಾಜ್ ಅವರ ತಂದೆ. ಕೂಡಲೇ ಟ್ವೀಟಿಗರು ಈ ತಪ್ಪನ್ನು ಎತ್ತಿ ತೋರಿಸಿದರು.
ಇದಕ್ಕಾಗಿ ಸೈನಿ ಮತ್ತು ಸಿರಾಜ್ ಇಬ್ಬರಲ್ಲೂ ಗಿಲ್‌ಕ್ರಿಸ್ಟ್ ಕ್ಷಮೆಯಾಚಿಸಿದರು. “ಇದು ನನ್ನಿಂದಾದ ಬಹು ದೊಡ್ಡ ತಪ್ಪು’ ಎಂಬುದಾಗಿ ಗಿಲ್ಲಿ ಪಶ್ಚಾತ್ತಾಪ ವ್ಯಕ್ತಪಡಿಸಿದರು.
ಇದನ್ನೂ ಓದಿ:ಐಪಿಎಲ್ ನಲ್ಲಿ ಫ್ಲಾಪ್, ದೇಶದ ಪರ ಟಾಪ್: ಕೆ.ಎಲ್.ರಾಹುಲ್ ಬಳಿ ಕ್ಷಮೆ ಕೇಳಿದ ಮ್ಯಾಕ್ಸ್ ವೆಲ್
ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ ಆಸೀಸ್ ವಿರುದ್ಧ 66 ರನ್ ಅಂತರದ ಸೋಲನುಭವಿಸಿತು. ಮೊದಲು ಬ್ಯಾಟಿಂಗ್ ಮಾಡಿದ್ದ ಆಸೀಸ್ ತಂಡ ಫಿಂಚ್ ಮತ್ತು ಸ್ಮಿತ್ ಶತಕದ ನೆರವಿನಿಂದ 374 ರನ್ ಗಳ ಬೃಹತ್ ಮೊತ್ತ ದಾಖಲಿಸಿತು. ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾ ಎಂಟು ವಿಕೆಟ್ ನಷ್ಟಕ್ಕೆ 308 ರನ್ ಗಳಿಸಲಷ್ಟೇ ಶಕ್ತವಾಯಿತು.