Advertisement
ಜಿ.ಪಂ. ಕಚೇರಿಯ ಡಾ|ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯಲ್ಲಿ ಅವರು ಮಾತನಾಡಿ, ಪರ್ಕಳದಲ್ಲಿ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಆದರೆ ಭೂ ಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಸ್ಥಳೀಯರು ಪರಿಹಾರ ಬಂದಿಲ್ಲ ಎಂದು ಆರೋಪಿಸುತ್ತಿದ್ದಾರೆ ಎಂದಾಗ ಇದಕ್ಕೆ ಧ್ವನಿಗೂಡಿಸಿದ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಯಾರಿಗೂ ಪರಿಹಾರ ಬಂದಿಲ್ಲ. ದೊಡ್ಡ ಮಟ್ಟದಲ್ಲಿ ಪರಿಹಾರ ನೀಡಲಾಗುತ್ತಿದೆ ಎಂದಷ್ಟೇ ಹೇಳಲಾಗುತ್ತಿದೆ ಎಂದರು.
Related Articles
Advertisement
ಇಂದ್ರಾಳಿ ರೈಲು ನಿಲ್ದಾಣದಿಂದ ಹೆದ್ದಾರಿಗೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಹಾಳಾಗಿದ್ದು, ಈ ಬಗ್ಗೆ ದಿಶಾ ಸಭೆಯಲ್ಲಿ ಚರ್ಚೆ ನಡೆದಿದೆ. ಈ ರಸ್ತೆಯ ಅರ್ಧಭಾಗ ರೈಲ್ವೇ ಇಲಾಖೆಗೆ ಹಾಗೂ ಉಳಿದ ಅರ್ಧ ನಗರಸಭೆಗೆ ಸೇರುತ್ತದೆ. ನಗರಸಭೆಯಿಂದ ಈಗಾಗಲೇ ಪ್ಯಾಚ್ ವರ್ಕ್ ಕೂಡ ಮಾಡಲಾಗಿದೆ. ಆದರೆ, ರೈಲ್ವೇ ಇಲಾಖೆಯಿಂದ ರಸ್ತೆ ಡಾಮರು ಸಂಬಂಧ ಎನ್‌ಒಸಿ ನೀಡದೆ ಇರುವುದರಿಂದ ಕಾಮಗಾರಿ ನಡೆಸಲು ಸಾಧ್ಯವಾಗುತ್ತಿಲ್ಲ ಎನ್ನುವುದು ಪೌರಾಯುಕ್ತ ಡಾ| ಉದಯ ಕುಮಾರ್ ಶೆಟ್ಟಿ ಹೇಳಿದರು. ಆಗ ರೈಲ್ವೇ ಇಲಾಖೆಯ ಅಧಿಕಾರಿಗಳು ಈಗಾಗಲೇ ಎನ್ ಒಸಿ ನೀಡಲಾಗಿದೆ ಎಂದು ಮರು ಉತ್ತರ ನೀಡಿದರು. ಸಚಿವರು ತತ್‌ಕ್ಷಣವೇ ಯಾವುದಾದರೂ ಒಂದು ಕಾಮಗಾರಿಯಲ್ಲಿ ರಸ್ತೆ ಸರಿಪಡಿಸುವಂತೆ ಸೂಚಿಸಿ, ಚರ್ಚೆಗೆ ತೆರೆ ಎಳೆದರು.
ರೈಲ್ವೇ ಪ್ಲಾಟ್‌ಫಾರ್ಮ್ಗೆ ಮೇಲ್ಛಾವಣಿ ಅಳವಡಿಸಿ
ರೈಲು ಪ್ಲಾಟ್‌ಫಾರ್ಮ್ನಲ್ಲಿ ಪ್ರಯಾಣಿಕರಿಗೆ ಮಳೆ ಗಾಲದಲ್ಲಿ ಸಾಕಷ್ಟು ಸಮಸ್ಯೆಯಾಗುತ್ತದೆ. ಪ್ಲಾಟ್ ಫಾರ್ಮ್ ಉದ್ದಕ್ಕೂ ಮೇಲ್ಛಾವಣಿ ಅಳವಡಿಸಿಲ್ಲ. ಮುಖ್ಯದ್ವಾರದಲ್ಲಿ ಮಾತ್ರ ಸುಸಜ್ಜಿತ ವ್ಯವಸ್ಥೆ ಇದೆ. ಎಲ್ಲ ಪ್ಲಾಟ್‌ಫಾರ್ಮ್ಗಳಲ್ಲಿಯೂ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಮೇಲ್ಛಾವಣಿ/ಶೆಡ್ ರೀತಿಯ ವ್ಯವಸ್ಥೆ ಮಾಡಬೇಕು ಎಂದು ಸಚಿವರು ರೈಲು ಇಲಾಖೆಯ ಅಧಿಕಾರಿಗಳಿಗೆ ತಿಳಿದರು.