Advertisement

ಯೋಗೇಶ್ವರ್ ನನ್ನು ಮಂತ್ರಿ ಮಾಡಲು ಸಿಎಂಗೆ ಆತುರ ಯಾಕೆ? ವಿಶ್ವನಾಥ್ ಪ್ರಶ್ನೆ

01:13 PM Dec 02, 2020 | sudhir |

ಮೈಸೂರು ;ಯೋಗೀಶ್ವರ್ ನೂರಕ್ಕೆ ನೂರು ಮಂತ್ರಿ ಆಗ್ತಾರೆ ಅಂತ ಸಿಎಂ ಹೇಳಿದ್ದ ಮಾತಿಗೆ ಸಿಟ್ಟಾದ ವಿಶ್ವನಾಥ್ ಯೋಗೇಶ್ವರ್ ನನ್ನು ಮಂತ್ರಿ ಮಾಡಲು ಅಷ್ಟೊಂದು ಆತುರ ಯಾಕೆ ಎಂದು ಮುಖ್ಯಮಂತ್ರಿಗಳಿಗೆ ಪ್ರಶ್ನೆ ಮಾಡಿದ್ದಾರೆ.

Advertisement

ಮೈಸೂರಿನಲ್ಲಿ ಮಾತನಾಡಿದ ಅವರು ಮುಖ್ಯಮಂತ್ರಿಗಳು ಸಿ.ಪಿ.ಯೋಗೇಶ್ವರ್ ಗೆ ಮಂತ್ರಿ ಸ್ಥಾನ ನೀಡಲು ತುದಿಗಾಲಲ್ಲಿ ನಿಂತಿದ್ದಾರೆ ಯೋಗೀಶ್ವರ್ ನೂರಕ್ಕೆ ನೂರು ಮಂತ್ರಿ ಆಗ್ತಾರೆ ಅಂತ ನಿನ್ನೆ ಸಿಎಂ ಹೇಳಿದ್ದಾರೆ. ಹೈಕಮಾಂಡ್‌ನವರು ಸಚಿವ ಸಂಪುಟ ವಿಸ್ತರಣೆಗೆ ಅನುಮತಿಯನ್ನೇ ಕೊಟ್ಟಿಲ್ಲ.

ನಿಮಗೆ ಯಾಕಿಷ್ಟು ಆತುರ ? ಸರ್ಕಾರ ಬರಲು ಯೋಗೀಶ್ವರ್ ಪಾತ್ರ ಏನು ? ಅವನು ಎಂಎಲ್‌ಎನಾ ಅಥವಾ ಬೇರೆ ರೀತಿ ನೆರವು ಕೊಟ್ಟಿದ್ದಾನಾ ? ಬಾಂಬೆ, ಪುಣೆಯಲ್ಲಿ ಸೂಟ್‌ಕೇಸ್ ಹಿಡಿದುಕೊಂಡು ಓಡಾಡಿಕೊಂಡಿದ್ದ. ಅವನನ್ನು ಯಾಕೆ ಮಂತ್ರಿ ಮಾಡುತ್ತೀರಿ ? ಎಂದು ಸಿಎಂ ಬಿಎಸ್‌ವೈ‌ಗೆ ಎಂಎಲ್‌ಸಿ ವಿಶ್ವನಾಥ್ ಪ್ರಶ್ನೆ ಮಾಡಿದ್ದಾರೆ.

ಯಡಿಯೂರಪ್ಪನವರು ಯಾಕೋ ಎಲ್ಲವನ್ನೂ ಮರೆಯುತ್ತಿದ್ದಾರೆ. ಸರ್ಕಾರದ ರಚನೆ ಸಂದರ್ಭದಲ್ಲಿ ಬಿಎಸ್‌ವೈ ನನ್ನ ಮುಂದೆ ನಿಂತಿದ್ದ ಸ್ಥಿತಿಯೇ ಬೇರೆ, ಇಂದಿನ ನಡವಳಿಕೆಗಳೇ ಬೇರೆ ಎಂದು ಸಿಎಂ ನಡವಳಿಕೆ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ:ಕ್ರಾಸ್ ಬೀಡ್ ಎಂದಾಗ ಸಿದ್ದರಾಮಯ್ಯಗೆ ಸೋನಿಯಾ ಗಾಂಧಿ, ಪ್ರಿಯಾಂಕ ನೆನಪಾಗುತ್ತದೆ: ಈಶ್ವರಪ್ಪ

Advertisement

ರಾಜಕಾರಣ ಸಕಾರಾತ್ಮಕ ಧೋರಣೆಯಿಂದ ಸಮಾನವಾಗಿ ಹೋಗಬೇಕು.ನಕಾರಾತ್ಮಕವಾಗಿ ರಾಜಕಾರಣ ಮಾಡಬಾರದು. ಪ್ರಜಾತಂತ್ರ ವ್ಯವಸ್ಥೆಯಲ್ಲಿ‌ ರಾಜಕಾರಣವೇ ಉಸಿರು ಆ ಉಸಿರು ಹಾಳಾಗಬಾರದು.ಆದರೆ ಈಗ ಆ ಉಸಿರು ಹೆಚ್ಚೆಚ್ಚು ಹಾಳಾಗುತ್ತಿದೆ ಇದರಿಂದಾಗಿಯೇ ಜನಪ್ರತಿನಿಧಿಗಳನ್ನು ಅಸಹ್ಯವಾಗಿ ನೋಡ್ತಿದ್ದಾರೆ. ಇದು ಆಗಬಾರದು ಎಂದು ರಾಜ್ಯ ರಾಜಕೀಯದ ಬಗ್ಗೆ ಕಾವ್ಯಾತ್ಮಕವಾಗಿ ಹೇಳಿಕೆ ನೀಡಿದ ಎಚ್.ವಿಶ್ವನಾಥ್.

ಬಾಂಬೆ ಟೀಂ‌ನಲ್ಲಿ ನಾನು ಒಂಟಿಯಾಗಿಲ್ಲ ಎಲ್ಲರೂ ಜತೆಯಾಗಿದ್ದಾರೆ:
ಬಾಂಬೆ ಟೀಂ‌ನಲ್ಲಿ ನಾನು ಒಂಟಿಯಾಗಿಲ್ಲ ಎಲ್ಲರೂ ನಾವಿದ್ದೀವಿ ಅಂತ ಬಿಜೆಪಿಯ ಹಿರಿಯ ನಾಯಕರು ಹೇಳಿದ್ದಾರೆ. ಹಾಗಾಗಿ ನಾನು ಒಂಟಿಯಾಗಿಲ್ಲ ಎಂದರು.

ತಂದೆಯನ್ನು ಕೊಂದವನನ್ನೇ ತಾಯಿ ಮದುವೆ ಆಗಿ ಮೆರವಣಿಗೆ ಹೊರಟಂತೆ:
ನಾವು ವಿರೋಧಿಸಿದವರೇ ಈಗ ಮುಖ್ಯಮಂತ್ರಿಗಳ ಸ್ನೇಹಿತರಾಗಿದ್ದಾರೆ ಎಂದು ಸರ್ಕಾರದ ಇಂದಿನ ಸ್ಥಿತಿಗಳ ಕುರಿತು ಮಾರ್ಮಿಕ ಹೇಳಿಕೆ ನೀಡಿದ ಹಳ್ಳಿಹಕ್ಕಿ ವಿಶ್ವನಾಥ್. ಶೇಕ್ಸ್‌ಪೀಯರ್‌ನ ಹ್ಯಾಂಮ್ಲೆಟ್ ನಾಟಕದ ಉಪಮೆ ಉಲ್ಲೇಖಿಸಿದ ಅವರು ನಾವು ಯಾರನ್ನು ವಿರೋಧ ಮಾಡಿಕೊಂಡು ಬಂದಿದ್ದೆವೋ ಅವರೇ ಈಗ ಬಿಎಸ್‌ವೈ ಸ್ನೇಹಿತರಾಗಿದ್ದಾರೆ. ಇದು ತಂದೆಯನ್ನು ಕೊಂದವನನ್ನು ತಾಯಿ ಮದುವೆಯಾದಂತೆ ಕಾಣುತ್ತಿದೆ.
ಶೇಕ್ಸ್‌ಪೀಯರ್ ನಾಟಕದಲ್ಲಿ ಇದೆ ರೀತಿಯ ಪ್ರಸಂಗ ಇದೆ. ನಮ್ಮ‌ ಪರಿಸ್ಥಿತಿ ಹಾಗೂ ಸರ್ಕಾರದ ಪರಿಸ್ಥಿತಿಯೂ ಹಾಗೇ ಇದೆ ಎಂದು ಪರೋಕ್ಷವಾಗಿ ಕುಮಾರಸ್ವಾಮಿ ಸಖ್ಯದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಎಚ್.ವಿಶ್ವನಾಥ್

Advertisement

Udayavani is now on Telegram. Click here to join our channel and stay updated with the latest news.

Next