Advertisement

ಟೀಸರ್‌ನಲ್ಲಿ ಬರಲಿದೆ “ಅಡಚಣೆಗಾಗಿ ಕ್ಷಮಿಸಿ’ 

11:15 AM Dec 05, 2018 | Team Udayavani |

ಶ್ರೀಭೂಮಿಕಾ ಪ್ರೊಡಕ್ಷನ್ಸ್‌ ಲಾಂಛನದಲ್ಲಿ ಸದ್ಗುಣಮೂರ್ತಿ ಅವರು ನಿರ್ಮಿಸಿರುವ “ಅಡಚಣೆಗಾಗಿ ಕ್ಷಮಿಸಿ’ ಚಿತ್ರದ ಟೀಸರ್‌ ಇದೇ ಡಿಸೆಂಬರ್‌ 10ರಂದು ಬಿಡುಗಡೆಯಾಗಲಿದೆ. ಪವರ್‌ಸ್ಟಾರ್‌ ಪುನೀತ್‌ರಾಜಕುಮಾರ್‌ ಟೀಸರ್‌ ಬಿಡುಗಡೆ ಮಾಡಲಿದ್ದಾರೆ. ಕಳೆದ ಹನ್ನೆರಡು ವರ್ಷಗಳಿಂದ ಎಸ್‌.ಮಹೇಂದರ್‌, ಪಿ.ಎನ್‌. ಸತ್ಯ ಮುಂತಾದವರ ಜೊತೆ ಕೆಲಸ ಮಾಡಿ ಅನುಭವರುವ ಭರತ್‌ ಎಸ್‌ ನಾವುಂದ್‌ ಈ ಚಿತ್ರದ ನಿರ್ದೇಶಕರು.

Advertisement

ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು, ಗೀತರಚನೆ ಮಾಡಿರುವ ಭರತ್‌ ಅವರು ಸಾಹಸ ನಿರ್ದೇಶನವನ್ನು ಮಾಡಿದ್ದಾರೆ. ಸೈಕಲಾಜಿಕಲ್‌ ಥ್ರಿಲ್ಲರ್‌ ಕಥಾ ಹಂದರ ಹೊಂದಿರುವ ಈ ಚಿತ್ರಕ್ಕೆ ಮಡಿಕೇರಿಯಲ್ಲಿ 22ದಿನಗಳ ಹಾಗೂ ಬೆಂಗಳೂರಿನಲ್ಲಿ 10ದಿನಗಳ ಚಿತ್ರೀಕರಣ ನಡೆದಿದೆ. ಚಿತ್ರದಲ್ಲಿ ಐದು ಹಾಡುಗಳಿದ್ದು, ಕಳೆದ 20ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಕೀಬೋರ್ಡ್‌ ವಾದಕರಾಗಿ ಕಾರ್ಯ ನಿರ್ವಸುತ್ತಿರುವ ಎಸ್‌. ಪ್ರದೀಪ್‌ ವರ್ಮ ಹಾಡುಗಳಿಗೆ ಸಂಗೀತ ನೀಡಿದ್ದಾರೆ.

ಉಳಿದಂತೆ ರವಿವರ್ಮ ಛಾಯಾಗ್ರಹಣ ಹಾಗೂ ಅರ್ಜುನ್‌ ಕಿಟ್ಟು ಸಂಕಲನ ಈ ಚಿತ್ರಕ್ಕಿದೆ. ಸಂಗೀತ ನಿರ್ದೇಶಕ ಎಸ್‌.ಪ್ರದೀಪ್‌ ವರ್ಮ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ಶಿವಮಂಜು, ಕೆ.ಎಸ್‌ ಶ್ರೀಧರ್‌, ಶ್ರೀನಿವಾಸ ಪ್ರಭು, ಅರ್ಪಿತಾ ಗೌಡ, ಮೇಘ, ಕುಲಕರ್ಣಿ, ಶ್ರೀನಿವಾಸ್‌, ಸುಶೀಲ್‌ ಕುಮಾರ್‌ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next