Advertisement
ಅಮೆರಿಕದ ಸಂಶೋಧನ ಸಂಸ್ಥೆ ಹಿಂಡನ್‌ಬರ್ಗ್ ವರದಿಯು ಅದಾನಿ ಸಾಮ್ರಾಜ್ಯವನ್ನು ನಲುಗಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಬುಧವಾರ ಕಂಪೆನಿಯ ನಿರ್ದೇ ಶಕರ ಮಂಡಳಿಯ ಸಭೆ ನಡೆದಿದ್ದು, ಚಂದಾದಾರರ ಹಿತಾಸಕ್ತಿಯನ್ನು ಪರಿಗಣಿಸಿ, ತನ್ನ 20 ಸಾ.ಕೋಟಿ ರೂ.ಗಳ ಷೇರು ಮಾರಾಟವನ್ನು ತಡೆಹಿಡಿಯಲು ನಿರ್ಧರಿಸಲಾಯಿತು ಎಂದು ಕಂಪೆನಿ ಘೋಷಿಸಿದೆ. ಈ ನಿರ್ಧಾ ರಕ್ಕೆ ಕಾರಣ ತಿಳಿಸಿಲ್ಲ. ಷೇರುಗಳ ಮಾರಾಟದ ಮೇಲೆ ಹಿಂಡನ್‌ಬರ್ಗ್ ವರದಿ ಪ್ರಭಾವ ಬೀರ ಬಹುದು ಎಂಬ ಭೀತಿಯಿದ್ದರೂ, ಎಫ್ಪಿಒ ಪೂರ್ಣ ಪ್ರಮಾಣ ದಲ್ಲಿ ಚಂದಾದಾರಿಕೆ ಗಳಿಸಿತ್ತು.
ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರು ಈಗ ಗೌತಮ್ ಅದಾನಿ ಅವರನ್ನು ಹಿಂದಿಕ್ಕಿ “ಜಗತ್ತಿನ ಅತ್ಯಂತ ಶ್ರೀಮಂತ ಭಾರತೀಯ’ ಎಂದೆನಿಸಿಕೊಂಡಿದ್ದಾರೆ. ಕೇವಲ 5 ದಿನಗಳ ಅವಧಿಯಲ್ಲಿ ಗೌತಮ್ ಅದಾನಿ ಅವರ ಸಮೂಹ ಸಂಸ್ಥೆಯ ಮಾರುಕಟ್ಟೆ ಮೌಲ್ಯ 7.5 ಲಕ್ಷ ಕೋಟಿ ರೂ.ಗಳಷ್ಟು ಇಳಿಕೆ ಯಾಗಿದೆ. ಅದಾನಿ ಅವರ ವೈಯಕ್ತಿಕ ಸಂಪತ್ತು ಕೂಡ 40 ಶತಕೋಟಿ ಡಾಲರ್‌ನಷ್ಟು ಇಳಿಕೆಯಾಗಿದೆ.