Advertisement

Ad5-nCoV ಲಸಿಕೆ ಬಳಕೆಗೆ ಒಪ್ಪಿಗೆ

10:26 PM Sep 28, 2020 | sudhir |

ಮಣಿಪಾಲ : ಸದ್ಯ ಇಡೀ ವಿಶ್ವದ ಚಿತ್ತ ಕೋವಿಡ್‌-19ಕ್ಕೆ ಕಡಿವಾಣ ಹಾಕಲು ಪಣತೊಟ್ಟಿ ನಿಂತಿರುವ ಸಂಶೋಧಕರ ಮೇಲಿದೆ. ಈ ಬೆಳವಣಿಗೆಗಳ ನಡುವೆಯೇ ಸೋಂಕಿನ ಮೂಲ ಕೇಂದ್ರ ಎಂದೇ ಕುಖ್ಯಾತಿ ಪಡೆದಿರುವ ಚೀನವೂ ಡೆಡ್ಲಿ ವೈರಸ್‌ಗೆ ಮದ್ದರೆಯುವ ಕಾರ್ಯದಲ್ಲಿ ನಿರತವಾಗಿದ್ದು, ದೇಶದ ಮಿಲಿಟರಿ ಸಂಶೋಧನಾ ಘಟಕ ಮತ್ತು ಕ್ಯಾನ್ಸಿನೊ ಬಯೋಲಾಜಿಕ್ಸ್ ಅಭಿವೃದ್ಧಿಪಡಿಸಿರುವ ಕೋವಿಡ್‌-19 ಲಸಿಕೆಯನ್ನು ಮಿಲಿಟರಿ ವಿಭಾಗದ ಬಳಕೆಗೆ ಅನುಮತಿ ಸಿಕ್ಕಿದೆ ಎಂದು ಹೇಳಿಕೊಂಡಿದೆ.
ಕ್ಲಿನಿಕಲ್‌ ಪ್ರಯೋಗ ಹಂತದ ವೇಳೆ ಈ ಲಸಿಕೆ ಸುರಕ್ಷಿತವಾಗಿದ್ದು, ವೈರಾಣುವಿನ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುತ್ತದೆ ಎಂಬ ಅಂಶ ದೃಢಪಟ್ಟಿದೆ. ಪ್ರಯೋಗದ 2 ಹಂತಗಳಲ್ಲಿಯೂ ಸಕರಾತ್ಮಕ ಬೆಳವಣಿಗೆ ಕಂಡು ಬಂದಿದ್ದು, ವೈರಾಣುವನ್ನು ತಡೆಗಟ್ಟಿ ಅದರಿಂದ ಎದುರಾಗಬಹುದಾದ ರೋಗಗಳಿಗೆ ಕಡಿವಾಣ ಹಾಕುವ ಸಾಮರ್ಥ್ಯವನ್ನು ಲಸಿಕೆ ಹೊಂದಿದೆ ಎಂದು ಅಧ್ಯಯನ ವರದಿ ತಿಳಿಸಿದೆ.

Advertisement

ಈ ಹಿನ್ನಲೆಯಲ್ಲಿ ಚೀನದ ಮಿಲಿಟರಿ ಸಂಶೋಧನಾ ಘಟಕ ಮತ್ತು ಕ್ಯಾನ್ಸಿನೊ ಬಯೋಲಾಜಿಕ್ಸ್ ಕಂಡುಹಿಡಿದಿರುವ ಈ ಲಸಿಕೆಯನ್ನು ಸೋಂಕಿತರಿಗೆ ನೀಡ ಬಹುದು ಎಂದು ಸರಕಾರ ಹಸಿರು ನಿಶಾನೆ ತೋರಿಸಿದೆ ಎಂದು ಕಂಪೆನಿ ಹೇಳಿದೆ.
ಇನ್ನು ಚೀನ ಅಭಿವೃದ್ಧಿಪಡಿಸುತ್ತಿರುವ ಎಂಟು ಲಸಿಕೆಗಳಲ್ಲಿ Ad5-nCoV ಔಷಧವೂ ಒಂದಾಗಿದ್ದು, ಉಸಿರಾಟದ ತೊಂದರೆ ಅನುಭವಿಸುತ್ತಿರುವ ಹೊಸ ಸೋಂಕಿತ ವ್ಯಕ್ತಿಗಳಿಗೆ ಈ ಲಸಿಕೆಯನ್ನು ನೀಡಬಹುದು ಎಂದು ಸಂಶೋಧಕರು ಸೂಚಿಸಿದ್ದಾರೆ.
ಅಕಾಡೆಮಿ ಆಫ್ ಮಿಲಿಟರಿ ಮೆಡಿಕಲ್‌ ಸೈನ್ಸ್‌ನ ಕ್ಯಾನ್ಸಿನೊ ಮತ್ತು ಬೀಜಿಂಗ್‌ ಇನ್‌ಸ್ಟಿಟ್ಯೂಟ್‌ ಆಫ್ ಬಯೋಟೆಕ್ನಾಲಜಿ ಜಂಟಿಯಾಗಿ ಈ ಲಸಿಕೆಯನ್ನು ಹೊರತಂದಿದೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next