Advertisement
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುನೀತ್ ಅವರ ಸಾವಿನ ಬಳಿಕ ನನ್ನ ಅಭಿಮಾನಿಗಳು ಹಾಗೂ ಸ್ನೇಹಿತರು ಜಿಮ್ ಬಿಟ್ಟು ಬಿಡುವಂತೆ ಸಲಹೆ ನೀಡಿದರು. ಈ ರೀತಿ ತಪ್ಪು ಕಲ್ಪನೆ ಬೇಡ ಅತಿಯಾದ ಜಿಮ್‌ನಿಂದ ಸಮಸ್ಯೆಯಾಗಬಹುದು. ಆದರೆ ಮನುಷ್ಯ ದೇಹ ದಂಡಿಸಲಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದರು.
Related Articles
Advertisement
ಕಳೆದ 5 ವರ್ಷಗಳ ವೈದ್ಯ ವೃತ್ತಿಯ 125 ದಿನಗಳ ರಜೆಯಲ್ಲಿ ಸಂಪೂರ್ಣವಾಗಿ ಚಲನಚಿತ್ರ ನಿರ್ದೇಶನದಲ್ಲಿ ತೊಡಗಿ, ಚಿತ್ರೀಕರಣ ಪೂರ್ಣಗೊಳಿಸಲಾಗಿದೆ. ಎಲ್ಲ ವರ್ಗದವರು ಕುಳಿತು ಚಲನಚಿತ್ರ ವೀಕ್ಷಿಸಬಹುದಾದ ರೀತಿಯಲ್ಲಿ ಚಿತ್ರೀಕರಿಸಲಾಗಿದೆ. ಮಂಡ್ಯ-ಮಳವಳ್ಳಿಯಿಂದ ಪ್ರಾರಂಭಗೊಂಡ ಚಿತ್ರೀಕರಣವು ಊಟಿ, ಮುನಾರ್, ವಿಯೆಟ್ನಾಂ, ಚೀನಾ ಗಡಿಯವರೆಗೆ 18 ರಿಂದ 20 ಕೋಟಿ ರೂ. ವೆಚ್ಚದಲ್ಲಿ ಚಿತ್ರೀಕರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಂಬಂಗಳು, ಸಹೋದ್ಯೋಗಿಗಳು, ಗೆಳೆಯರು, ಪ್ರೇಯಸಿ ಸೇರಿದಂತೆ ಎಲ್ಲರ ಮೇಲಿನ ಪ್ರೀತಿಯನ್ನು ಪೂಜ್ಯನೀಯ ಮನೋಭಾವದಿಂದ ನೋಡಿದಾಗ ಅದರಿಂದ ಹೊರಬರುವ ಫಲಿತಾಂಶ ಏನು ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ ಎಂದು ತಿಳಿಸಿದರು.
ಚಿತ್ರವು ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಗೊಳ್ಳಲಿದ್ದು, ಕನ್ನಡ, ತಮಿಳು, ತೆಲುಗು, ಮಳಯಾಳಂ ಹಿಂದಿ ಮತ್ತು ಇಂಗ್ಲಿಷ್‌ನ ಸಬ್‌ಟೈಟಲ್‌ನೊಂದಿಗೆ ಲಭ್ಯವಿದೆ. ನಿರ್ದೇಶಕರು ನನ್ನನ್ನು ಏಳು ಅವತಾರಗಳಲ್ಲಿ ತೋರಿಸಿದ್ದು, ಅಭಿಮಾನಿಗಳು ಚಲನಚಿತ್ರವನ್ನು ಹೇಗೆ ಸ್ವಾಗತಿಸಲಿದ್ದಾರೆ ಎಂಬುದನ್ನು ಕಾಣಲು ಉತ್ಸುಕನಾಗಿದ್ದೇನೆ ಎಂದು ಹೇಳಿದರು.
ನಟ ಮಾಸ್ಟರ್ ಆನಂದ್ ಮಾತನಾಡಿ, ಚಲನಚಿತ್ರಗಳಲ್ಲಿ ಕಥೆಗೆ ಸಂಬಂಧವಿಲ್ಲದಂಥ ಪಾತ್ರಗಳಲ್ಲಿ ನಟಿಸುತ್ತಿದ್ದೆ. ಮುಂದಿನ ದಿನಗಳಲ್ಲಿ ಕಥೆಗೆ ಸಂಬಂಧಿಸಿದಂತಹ ಪಾತ್ರಗಳಲ್ಲಿ ನಟಿಸುವ ಉದ್ದೇಶ ಹೊಂದಿದ್ದೆ. ಪ್ರೇಮಂ ಪೂಜ್ಯಂ ಚಿತ್ರದಲ್ಲಿ ಅಂತದೊಂದು ಪಾತ್ರ ದೊರೆತಿದೆ ಎಂದು ಹೇಳಿದರು.