Advertisement

ರಾಹುಲ್‌ಗೆ ರಮ್ಯಾ ಮಂಕುಬೂದಿ?

12:44 AM Jun 17, 2019 | Sriram |

ಹೊಸದಿಲ್ಲಿ: “ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಏನಿಲ್ಲವೆಂ ದರೂ, 164ರಿಂದ 184 ಸ್ಥಾನಗಳನ್ನು ಗೆದ್ದೇ ಗೆಲ್ಲುತ್ತೆ. ಕೇಂದ್ರದಲ್ಲಿ ಕಾಂಗ್ರೆಸ್‌ ನೇತೃತ್ವದ ಯುಪಿಎ ಅಧಿಕಾರಕ್ಕೆ ಬರುವುದು ಖಾತ್ರಿ. ನೀವು ನಿಶ್ಚಿಂತರಾಗಿರಿ’ ಎಂದು ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಕೂತಲ್ಲಿ, ನಿಂತಲ್ಲಿ ಅವರ ತಲೆಗೆ ತುಂಬುತ್ತಿದ್ದ ಅವರ ಆಪ್ತರಾದ ಕಾಂಗ್ರೆಸ್‌ ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥೆ, ನಟಿ ರಮ್ಯಾ (ದಿವ್ಯಸ್ಪಂದನ) ಹಾಗೂ ಪಕ್ಷದ ಚುನಾವಣಾ ತಂತ್ರಗಾರಿಕೆ ಜವಾಬ್ದಾರಿ ಹೊತ್ತಿದ್ದ ಪ್ರವೀಣ್‌ ಚಕ್ರವರ್ತಿ ಎಂಬುವರು ರಾಹುಲ್‌ ಅವರಿಂದ ಬರೋಬ್ಬರಿ 30 ಕೋಟಿ ರೂ. ಪಡೆದಿದ್ದಾರೆ ಎಂದು ಮೂಲಗಳು ಹೇಳಿವೆ.

Advertisement

“ದ ಗಾರ್ಡಿಯನ್‌’ ನೀಡಿರುವ ವರದಿ ಆಧರಿಸಿ “ಟೈಮ್ಸ್‌ ನೌ’ ಪ್ರಕಟಿಸಿರುವ ವರದಿಯಲ್ಲಿ ಈ ವಿಷಯ ಹೇಳಲಾಗಿದ್ದು, ರಮ್ಯಾ, ಪ್ರವೀಣ್‌ ಮಾತನ್ನು ಬಲವಾಗಿ ನಂಬಿದ್ದ ರಾಹುಲ್‌, ಚುನಾವಣೆ ಮುಗಿದ ಕೂಡಲೇ ಯುಪಿಎ ಮಿತ್ರಪಕ್ಷಗಳ ನಾಯಕರಿಗೆ ಫೋನಾಯಿಸಿ, ಸಂಪುಟಕ್ಕೆ ಸೇರ್ಪಡೆಗೊಳ್ಳುವ ಸಚಿವರ ಬಗ್ಗೆ ಮಾತುಕತೆ ನಡೆಸಿದ್ದರು. ಮತ್ತೂಂದೆಡೆ, ಫ‌ಲಿತಾಂಶ ಬಂದ ದಿನ ರಾಷ್ಟ್ರಪತಿ ಬಳಿ ಸರಕಾರ ರಚಿಸಲು ಹಕ್ಕೊತ್ತಾಯ ಮಂಡಿಸುವ ಕಾನೂನಾತ್ಮಕ ಪ್ರತಿಗಳನ್ನು ಸಿದ್ಧಪಡಿಸಿದ್ದರು!

ಆದರೆ, ಫ‌ಲಿತಾಂಶ ಹೊರಬಿದ್ದಾಗಲೇ ರಾಹುಲ್‌ಗೆ ವಾಸ್ತವ‌ದ ಅರಿವಾಯಿತು. ಅಷ್ಟರಲ್ಲಿ ರಮ್ಯಾ ಹಾಗೂ ಪ್ರವೀಣ್‌ಚಕ್ರವರ್ತಿ ಹಲವಾರು ಸಮೀಕ್ಷೆಗಳನ್ನು ನಡೆಸಿರುವುದಾಗಿ ಹೇಳಿ ರಾಹುಲ್‌ ಅವರಿಂದ ಅಪಾರ ಹಣವನ್ನು ಶುಲ್ಕದ ರೂಪದಲ್ಲಿ ಪಡೆದಿದ್ದರು. ರಮ್ಯಾ 8 ಕೋಟಿ ರೂ. ಪಡೆದಿದ್ದರೆ, ಪ್ರವೀಣ್‌ 24 ಕೋಟಿ ರೂ. ಪಡೆದಿದ್ದರು ಎಂದು ಹೇಳಲಾಗಿದೆ.

ರಮ್ಯಾ ನಾಪತ್ತೆ: ಚುನಾವಣಾ ಫ‌ಲಿತಾಂಶ ಬಂದ ನಂತರ ಕೆಲವೇ ದಿನಗಳಲ್ಲಿ ರಮ್ಯಾ ಅವರು ತಮ್ಮ ಟ್ವಿಟರ್‌ ಖಾತೆಯನ್ನು ಡಿಲೀಟ್‌ ಮಾಡಿ ಏಕಾಏಕಿ ನಾಪತ್ತೆಯಾಗಿ ದ್ದಾರೆ. ಕೇಂದ್ರದಲ್ಲಿ ಮೋದಿ ಸರಕಾರ ಅಧಿಕಾರ ಸ್ವೀಕರಿಸಿದ ಅನಂತರ, ಹಣಕಾಸು ಸಚಿವೆಯಾದ ನಿರ್ಮಲಾ ಸೀತಾರಾಮನ್‌ ಅವರಿಗೆ, ನೀವು ದೇಶದ ಮೊದಲ ಹಣಕಾಸು ಸಚಿವೆಯಲ್ಲ. ಇಂದಿರಾಜೀ ನಂತರ 2ನೇ ಹಣಕಾಸು ಸಚಿವೆ. ನಿಮಗೆ ಶುಭವಾಗಲಿ ಎಂದು ಟ್ವೀಟ್‌ ಮಾಡಿದ್ದ ರಮ್ಯಾ ಆನಂತರ ಏಕಾಏಕಿ ಟ್ವಿಟರ್‌ ಖಾತೆಯನ್ನೇ ಡಿಲೀಟ್‌ ಮಾಡಿದ್ದರು.

ವಿಪಕ್ಷ ನಾಯಕ ಯಾರು?
ಸಂಸತ್ತಿನಲ್ಲಿ ಬಜೆಟ್‌ ಅಧಿವೇಶನ ಆರಂಭಗೊಳ್ಳಲು ದಿನಗಣನೆ ಆರಂಭವಾಗಿದ್ದರೂ ಲೋಕಸಭೆಯಲ್ಲಿ ವಿರೋಧ ಪಕ್ಷಗಳ ನಾಯಕ ಇನ್ನೂ ಯಾರು ಎಂಬುದು ನಿರ್ಧಾರವಾಗದಿರುವುದು ಸೋಜಿಗವೆನಿಸಿದೆ. ಈ ಬಗ್ಗೆ ವಿಪಕ್ಷಗಳಲ್ಲಿನ್ನೂ ಒಮ್ಮತ ರೂಪುಗೊಂಡಿಲ್ಲ ಎನ್ನಲಾಗಿದೆ. ಆದರೆ, ಒಮ್ಮತದ ಅಭಿಪ್ರಾಯ ರೂಪಿಸಲು ಸಭೆಯನ್ನೂ ನಿಗದಿಗೊಳಿಸಿಲ್ಲ ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next