ಮುಂಬೈ : ಬಾಲಿವುಡ್ ಮೋಹಕ ನಟಿ ಸನ್ನಿ ಲಿಯೋನ್ ಅವರು ತಮ್ಮ ದತ್ತು ಪುತ್ರಿ ನಿಶಾ ವೇಬರ್ ಳ ಹುಟ್ಟುಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದ್ದಾರೆ.
ಮುಂಬೈನಲ್ಲಿರುವ ತಮ್ಮ ಹೊಸ ಮನೆಯಲ್ಲಿ ಹಿರಿಯ ಮಗಳ ಜನ್ಮದಿವನ್ನು ಅದ್ಧೂರಿಯಾಗಿ ಆಚರಿಸಿರುವ ಸನ್ನಿ ಲಿಯೋನ್ ಹಾಗೂ ಡೇನಿಯಲ್ ದಂಪತಿ, ಈ ಸುಂದರ ಕ್ಷಣಗಳ ಫೋಟೊಗಳನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದರ ಜೊತೆಗೆ “ನೀನು ನಮ್ಮ ಬಾಳಿನ ಬೆಳಕು” ಎಂದು ಪ್ರೀತಿಯಿಂದ ಶುಭ ಕೋರಿದ್ದಾರೆ.
ಸನ್ನಿ ಲಿಯೋನ್ ಅವರ ಮಗಳು ನಿಶಾ ವೇಬರ್ 6ನೇ ವಸಂತಕ್ಕೆ ಕಾಲಿಟ್ಟಿದ್ದಾಳೆ. ಹೊಸ ಮನೆಯಲ್ಲಿ ಕೇಕ್ ಕತ್ತರಿಸುವ ಮೂಲಕ ಮಗಳ ಹುಟ್ಟುಹಬ್ಬ ಆಚರಿಸಿದ್ದಾರೆ ಸನ್ನಿ ಲಿಯೋನ್. ಈ ಬರ್ತ್ ಡೇ ಪಾರ್ಟಿಯಲ್ಲಿ ಸ್ನೇಹಿತರು ಹಾಗೂ ಕುಟುಂಬದವರು ಭಾಗಿಯಾಗಿದ್ದಾರೆ.
ಸನ್ನಿ ಲಿಯೋನ್ ಮತ್ತು ಪತಿ ಡೇನಿಯಲ್ ವೆಬರ್ ಅವರು 2017ರಲ್ಲಿ ಮಹಾರಾಷ್ಟ್ರದ ಲಾತೂರ್‌ನಿಂದ ಹೆಣ್ಣು ಮಗುವನ್ನು ದತ್ತು ಪಡೆದರು. ಈ ಮಗುವಿಗೆ ನಿಶಾ ಕೌರ್ ವೆಬರ್ ಎಂದು ನಾಮಕರಣ ಮಾಡಿದರು. ಮಗುವನ್ನು ಕಾನೂನಾತ್ಮಕವಾಗಿ ದತ್ತು ಪಡೆದಿದ್ದಾರೆ. ಎರಡು ವರ್ಷಗಳ ಸತತ ಪ್ರಯತ್ನದ ನಂತರ ನಿಶಾಳನ್ನು ಅನಾಥಾಶ್ರಮದಿಂದ ದತ್ತು ಪಡೆಯುವಲ್ಲಿ ಸನ್ನಿ ಲಿಯೋನ್ ಹಾಗೂ ಡೇನಿಯಲ್ ವೆಬರ್ ಯಶಸ್ವಿಯಾಗಿದ್ದರು.
ನಿಶಾಳನ್ನು ದತ್ತು ಪಡೆದ ನಂತರದಲ್ಲಿ ಬಾಡಿಗೆ ತಾಯಿ ಮೂಲಕ ಮತ್ತೆ ಸನ್ನಿ ಲಿಯೋನ್ ಹಾಗೂ ಡೇನಿಯಲ್ ವೆಬರ್ ಅವರು ಅವಳಿ ಗಂಡು ಮಕ್ಕಳನ್ನು ಪಡೆದರು. ಈಗ ಮೂವರು ಮಕ್ಕಳ ಜೊತೆ ಮುಂಬೈನಲ್ಲೇ ಸ್ವಂತ ಮನೆಯಲ್ಲಿ ವಾಸಿಸುತ್ತಿದ್ದಾರೆ.