ಬೇರೆ ಥರದ ಪಾತ್ರಗಳನ್ನು ನಿರ್ವಹಿಸಿದ್ದೇನೆ. ಆದರೆ ಇಲ್ಲಿಯವರೆಗೆ ಇಂಥದ್ದೊಂದು ಪಾತ್ರದಲ್ಲಿ ಯಾವತ್ತೂ ಕಾಣಿಸಿಕೊಂಡಿರಲಿಲ್ಲ. ಈ ಪಾತ್ರದ ಬಗ್ಗೆ ನನಗೂ ತುಂಬ ಕುತೂಹಲವಿದೆ. ಮೊದಲ ಬಾರಿಗೆ ಹೊಸಥರದ ಪಾತ್ರದಲ್ಲಿ ಕಾಣಿಸಿಕೊಂಡಿರುವುದಕ್ಕೆ ನಾನೂ ಎಕ್ಸೈಟ್ ಆಗಿದ್ದೇನೆ’ – ಇದು “ತುರ್ತು ನಿರ್ಗಮನ’ ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ನಟಿ ಸುಧಾರಾಣಿ ಮಾತು.
ಹೌದು, ಸುಧಾರಾಣಿ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸಿರುವ ಈ ವಾರ “ತುರ್ತು ನಿರ್ಗಮನ’ ಚಿತ್ರ ತೆರೆಗೆ ಬರುತ್ತಿದೆ. ತಮ್ಮ ಮೂರೂವರೆ ದಶಕದ ಸಿನಿ ಕೆರಿಯರ್‌ನಲ್ಲಿ ಹತ್ತಾರು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಸುಧಾರಾಣಿ, ಇದೇ ಮೊದಲ ಬಾರಿಗೆ “ತುರ್ತು ನಿರ್ಗಮನ’ ಚಿತ್ರದಲ್ಲಿ ನರ್ಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಒಂದಷ್ಟು ಸಸ್ಪೆನ್ಸ್ ಮತ್ತು ಮೆಸೇಜ್ ಇರುವಂಥ ತಮ್ಮ ಪಾತ್ರದ ಬಗ್ಗೆ ಸುಧಾರಾಣಿ ಕೂಡ ಸಾಕಷ್ಟು ನಿರೀಕ್ಷೆ ಮತ್ತು ಕುತೂಹಲ ಇಟ್ಟುಕೊಂಡಿದ್ದಾರೆ.
ಈ ಬಗ್ಗೆ ಮಾತನಾಡುವ ಸುಧಾರಾಣಿ, “ಕನ್ನಡದಲ್ಲಿ ಈ ಥರದ ಸಿನಿಮಾಗಳ ಸಂಖ್ಯೆ ತುಂಬ ಕಡಿಮೆ. “ತುರ್ತು ನಿರ್ಗಮನ’ ಸಿನಿಮಾದಲ್ಲಿ ಎಲ್ಲರಿಗೂ ಕನೆಕ್ಟ್ ಆಗುವಂಥ ಸಬೆjಕ್ಟ್ ಒಂದನ್ನು ಸಸ್ಪೆನ್ಸ್-ಥ್ರಿಲ್ಲಿಂಗ್ ಆಗಿ ಹೇಳಲಾಗಿದೆ. ಇತ್ತೀಚೆಗೆ ಬೇರೆ ಭಾಷೆಗಳಲ್ಲೂ ಈ ಥರದ ಸಿನಿಮಾಗಳು ಬಂದಿಲ್ಲ. ಎಲ್ಲ ಥರದ ಆಡಿಯನ್ಸ್‌ಗೂ ಇಷ್ಟವಾಗುವಂಥ ಸಬೆjಕ್ಟ್‌ನ ಅಷ್ಟೇ ಮನರಂಜನಾತ್ಮಕವಾಗಿ ಸಿನಿಮಾದಲ್ಲಿ ಹೇಳಲಾಗಿದೆ. ಹೊಸಥರ ಯೋಚಿಸುವ, ಹೊಸಬರ ತಂಡದ ಈ ಸಿನಿಮಾದಲ್ಲಿ ನಾನೂ ಒಂದು ಪಾತ್ರವಾಗಿರುವುದಕ್ಕೆ ಖುಷಿಯಾಗುತ್ತಿದೆ’ ಎಂದು ಹೊಸಬರ ತಂಡದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ ಸುಧಾರಾಣಿ.
ಇದನ್ನೂ ಓದಿ:‘ವಿಕ್ರಾಂತ್ ರೋಣ’ನಿಗೆ ಸ್ಯಾಂಡಲ್ ವುಡ್ ಸಾಥ್; ಇಂದು ಟ್ರೇಲರ್ ರಿಲೀಸ್
“ಎಲ್ಲರೂ ಬದುಕಬೇಕು ಎಂದು ಬಯಸುತ್ತಾರೆ. ಇನ್ನು ಕೆಲವರಿಗೆ ಬದುಕು ಸಾಕು ಎನಿಸುತ್ತದೆ. ಈ ಎರಡೂ ಥರದ ಮನಸ್ಥಿತಿಯ ಜನರ ಬದುಕಿನ ಚಿತ್ರಣ “ತುರ್ತು ನಿರ್ಗಮನ’ ಸಿನಿಮಾದಲ್ಲಿದೆ. ಹುಟ್ಟು ಮತ್ತು ಸಾವು ಎರಡೂ ಕೂಡ ಅಂದುಕೊಳ್ಳದೆ ಆಗುವಂಥದ್ದು. ಅದಕ್ಕೆ ಯಾವುದೇ ಎಮರ್ಜೆನ್ಸಿ ಎಕ್ಸಿಟ್ ಅಂಥ ಇರುವುದಿಲ್ಲ. ಇರುವಷ್ಟು ಕಾಲ ಜೀವನವನ್ನು ಸದುಪಯೋಗಪಡಿಸಿಕೊಂಡು ಬದುಕಬೇಕು ಎಂಬ ಮೆಸೇಜ್ ಈ ಸಿನಿಮಾದಲ್ಲಿದೆ. ಒಂದು ಗಂಭೀರ ವಿಷಯವನ್ನು ಎಲ್ಲರಿಗೂ ಕನೆಕ್ಟ್ ಆಗುವಂತೆ ಹೊಸರೀತಿಯಲ್ಲಿ ಸಿನಿಮಾದಲ್ಲಿ ಹೇಳಲಾಗಿದೆ’ ಎನ್ನುತ್ತಾರೆ ಸುಧಾರಾಣಿ.