Advertisement
ಈ ವಿಚಾರವಾಗಿ ಇಂದು ಸಿಸಿಬಿ ಪೊಲೀಸರ ಮುಂದೆ ತನಿಖೆಗೆ ಹಾಜರಾಗಿದ್ದ ನಟಿ ರಾಗಿಣಿ ದ್ವಿವೇದಿ ಅವರನ್ನು ಇದೀಗ ಬಂಧಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
Related Articles
Advertisement
ನಟಿ ರಾಗಿಣಿ ದ್ವಿವೇದಿ ಅವರ ಆಪ್ತ ರವಿಶಂಕರ್ ನನ್ನು ಬಂಧಿಸಿದ್ದ ಸಿಸಿಬಿ ಪೊಲೀಸರು ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದ ಸಂದರ್ಭದಲ್ಲಿ ಮಾದಕ ದ್ರವ್ಯ ವ್ಯವಹಾರ ಚಟುವಟಿಕೆಗಳಲ್ಲಿ ರಾಗಿಣಿಗೂ ಸಂಬಂಧ ಇರುವ ಕುರಿತಾಗಿ ಮಾಹಿತಿ ಲಭ್ಯವಾಗಿತ್ತು.
ಬಳಿಕ ಸಿಸಿಬಿ ಪೊಲೀಸರು ಗುರುವಾರ ಬೆಳಿಗ್ಗೆ ವಿಚಾರಣೆಗೆ ಹಾಜರಾಗುವಂತೆ ರಾಗಿಣಿ ಅವರಿಗೆ ಬುದವಾರದಂದು ನೊಟೀಸ್ ಜಾರಿ ಮಾಡಿದ್ದರು. ಆದರೆ ರಾಗಿಣಿ ಅವರು ಅನ್ಯ ಕಾರಣಗಳನ್ನು ನೀಡಿ ಸೋಮವಾರದಂದು ವಿಚಾರಣೆಗೆ ಹಾಜರಾಗುವುದಾಗಿ ಪೊಲೀಸರಿಗೆ ತಿಳಿಸಿದ್ದರು.ಇದನ್ನೂ ಓದಿ: ದಿಢೀರ್ ಶಾಕ್! ಬೆಳ್ಳಂಬೆಳಗ್ಗೆ ನಟಿ ರಾಗಿಣಿ ಮನೆ ಮೇಲೆ ಸಿಸಿಬಿ ಅಧಿಕಾರಿಗಳಿಂದ ದಾಳಿ ಆದರೆ ಇಂದು ಬೆಳಿಗ್ಗೆ ನಡೆದ ದಿಢೀರ್ ಬೆಳವಣಿಗೆಯಲ್ಲಿ ಸಿಸಿಬಿ ಅಧಿಕಾರಿಗಳು ರಾಗಿಣಿ ಅವರ ಮನೆಯ ಮೇಲೆ ದಿಢೀರ್ ದಾಳಿ ನಡೆಸಿ ಶೋಧ ಕಾರ್ಯವನ್ನು ಕೈಗೊಂಡಿದ್ದರು. ಬಳಿಕ ಸಿಸಿಬಿ ಅಧಿಕಾರಿಗಳು ರಾಗಿಣಿಯನ್ನು ವಿಚಾರಣೆಗಾಗಿ ತಮ್ಮ ವಶಕ್ಕೆ ಪಡೆದುಕೊಂಡಿದ್ದರು. ಸತತ 7 ಗಂಟೆಗಳ ವಿಚಾರಣೆ ನಡೆಸಿದ ಸಿಸಿಬಿ ಪೊಲೀಸರು ಅಂತಿಮವಾಗಿ ರಾಗಿಣಿಯನ್ನು ಇದೀಗ ಬಂಧಿಸಿದ್ದಾರೆ. ಇದನ್ನೂ ಓದಿ: ಹೈಪ್ರೊಫೈಲ್ ಡ್ರಗ್ಸ್ ಜಾಲ: ಸ್ಯಾಂಡಲ್ ವುಡ್ ನಟಿ ರಾಗಿಣಿ ದ್ವಿವೇದಿ ಸಿಸಿಬಿ ವಶಕ್ಕೆ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಛೇರಿಯಲ್ಲಿ ರಾಗಿಣಿಯನ್ನು ತೀವ್ರ ವಿಚಾರಣೆ ನಡೆಸಿದ ಪೊಲೀಸರು ಸಾಯಂಕಾಲ ಈ ನಟಿಯನ್ನು ಬಂಧಿಸಿದ್ದಾರೆ. ಈ ನಡುವೆ ಬಂಧನದ ಭೀತಿಯಿಂದ ರಾಗಿಣಿ ಅವರು ತಮ್ಮ ವಕೀಲರ ಮೂಲಕ ಸಿಟಿ ಸಿವಿಲ್ ನ್ಯಾಯಾಲಯದ ಮೊರೆ ಹೋಗಿದ್ದು ನಿರೀಕ್ಷಣಾ ಜಾಮೀನಿಗೆ ಅರ್ಜಿಯನ್ನು ಸಲ್ಲಿಸಿದ್ದರು. ಎಸಿಪಿ ಗೌತಮ್ ಅವರು ರಾಗಿಣಿಯ ವಿಚಾರಣೆಯನ್ನು ನಡೆಸಿದ್ದರು. ಇದನ್ನೂ ಓದಿ: ಡ್ರಗ್ಸ್ ಜಾಲ: 25 ಸಾವಿರ ಸಂಬಳದ ರವಿಶಂಕರ್ ರಾಗಿಣಿಗಾಗಿ ದಿನಕ್ಕೆ ಎಷ್ಟು ಖರ್ಚು ಮಾಡ್ತಿದ್ದ ?
ನಟಿ ರಾಗಿಣಿ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಬಳಿಕ ಅವರನ್ನು ವಿಡಿಯೋ ಕಾನ್ಫೆರೆನ್ಸ್ ಮೂಲಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೊಪ್ಪಿಸುವಂತೆ ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಮನವಿ ಸಲ್ಲಿಸುವ ಸಾಧ್ಯತೆಗಳಿವೆ.