Advertisement
ಕಳೆದ ಆ.9ರಂದು ಬಿಡದಿ ಹೋಬಳಿ ಜೋಗನಪಾಳ್ಯದಲ್ಲಿ ಖಾಸಗಿ ತೆಂಗಿನ ತೋಟದಲ್ಲಿ ಚಿತ್ರೀಕರಣದ ವೇಳೆ ಸಂಭವಿಸಿದ್ದ ವಿದ್ಯುತ್ ಅವಘಡದಲ್ಲಿ ಸಾಹಸ ಕಲಾವಿದ ವಿವೇಕ್ ಸಾವನ್ನಪ್ಪಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದ ನಿರ್ದೇಶಕ, ಸಾಹಸ ನಿರ್ದೇಶಕ ಮತ್ತು ಕ್ರೇನ್ ಆಪರೇಟರ್ ವಿರುದ್ದ ಪ್ರಕರಣ ದಾಖಲಿಸಲಾಗಿದೆ.
ಲವ್ ಯೂ ರಚ್ಚು ಚಲನ ಚಿತ್ರದ ಅವಘಡಕ್ಕೆ ಸಂಬಂದಿಸಿದಂತೆ ಚಿತ್ರ ನಿರ್ದೇಶಕ ಶಂಕರ್, ಕ್ರೇನ್ ಆಪರೇಟರ್ ಮಹದೇವ್ ಮತ್ತು ಸಾಹಸ ನಿರ್ದೇಶಕ ವಿನೋದ್ ಕುಮಾರ್ ವಿರುದ್ದ ಬಿಡದಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ಇಲ್ಲಿನ ಅಪರ ಹಿರಿಯ ಸಿವಿಲ್ ನ್ಯಾಯಾಲಯ ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂ‘ನದ ಆದೇಶ ನೀಡಿತ್ತು. ಇಂದು ಪ್ರಕರಣ ನ್ಯಾಯಾಲಯದ ಮುಂದೆ ಬಂದಿತ್ತು. ನ್ಯಾಯಾಧೀಶರಾದ ಅನುಪಮ ಲಕ್ಷ್ಮಿ ಅವರು ವಿಚಾರಣೆಯನ್ನು ಸೆ.7ಕ್ಕೆ ಮುಂದೂಡಿದ್ದಾರೆ. ಆರೋಪಿಗಳ ನ್ಯಾಯಾಂಗ ಬಂಧನವೂ ವಿಸ್ತರಣೆಯಾಗಿದೆ.