Advertisement

ನಟಿ ಪ್ರಿಯಾಂಕಾ ಪಂಡಿತ್ ಖಾಸಗಿ ವಿಡಿಯೋ ಲೀಕ್

08:45 PM Aug 22, 2021 | Team Udayavani |

ನವದೆಹಲಿ : ಭೋಜಪುರಿ ನಟಿ ಪ್ರಿಯಾಂಕಾ ಪಂಡಿತ್ ಅವರದು ಎನ್ನಲಾದ ಖಾಸಗಿ ವಿಡಿಯೋ ಸೋರಿಕೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

Advertisement

ಲೀಕ್ ಆಗಿರುವ ವಿಡಿಯೋ ಕುರಿತು ಪ್ರತಿಕ್ರಿಯಿಸಿರುವ ಪ್ರಿಯಾಂಕಾ ಅದು ನನ್ನದಲ್ಲ ಎಂದಿದ್ದಾರೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿರುವುದು ನಾನಲ್ಲ, ಅದು ಬೇರೆಯವರು. ಯಾರೋ ನನ್ನ ಶತ್ರುಗಳು ಹೀಗೆ ವಿಡಿಯೋ ಹರಿ ಬಿಡುತ್ತಿದ್ದಾರೆ. ಈ ಮೂಲಕ ನನ್ನ ಹೆಸರಿಗೆ ಮಸಿ ಬಳಿಯಲು ಪ್ರಯತ್ನಿಸುತ್ತಿದ್ದಾರೆ ಎಂದು ಪ್ರಿಯಾಂಕಾ ಕಿಡಿ ಕಾರಿದ್ದಾರೆ.

ಪ್ರಿಯಾಂಕಾ ಅವರದು ಎನ್ನಲಾದ ಖಾಸಗಿ ವಿಡಿಯೋ ಲೀಕ್ ಆಗಿರುವುದು ಭೋಜಪುರಿ ಸಿನಿಮಾರಂಗಕ್ಕೆ ಆಘಾತ ಮೂಡಿಸಿದೆ. ಕಾರಣ ಕೆಳ ದಿನಗಳಿಂದ ಹಿಂದೆಯಷ್ಟೆ ಮತ್ತೋರ್ವ ಭೋಜಪುರಿ ನಟಿ ತ್ರಿಷಾ ಕರ್ ಮಧು ಅವರ ಬೆಡ್ ರೂಮ್ ವಿಡಿಯೋ ಕೂಡ ಲೀಕ್ ಆಗಿತ್ತು. ಈ ನಟಿ ತನ್ನ ಸ್ನೇಹಿತನ ಜೊತೆ ಖಾಸಗಿಯಾಗಿ ಕಾಣಿಸಿಕೊಂಡಿದ್ದ ದೃಶ್ಯಗಳು ಆ ವಿಡಿಯೋದಲ್ಲಿದ್ದವು. ಈ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿದ್ದ ತ್ರಿಷಾ, ಎಲ್ಲವನ್ನೂ ದೇವರು ನೋಡುತ್ತಿರುತ್ತಾನೆ. ನನ್ನ ಹೆಸರು ಕೆಡಿಸಲು ಈ ರೀತಿ ಮಾಡಲಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಇನ್ನು ತ್ರಿಷಾ ಅವರ ವಿಡಿಯೋ ಪ್ರಕರಣ ಮಾಸುವ ಮುನ್ನವೆ ಪ್ರಿಯಾಂಕಾ ಅವರ ವಿಡಿಯೋ ಕೂಡ ಹೊರ ಬಂದಿರುವುದು ಸಿನಿ ರಸಿಕರಲ್ಲಿ ಹಲವಾರು ಪ್ರಶ್ನೆಗಳಿಗೆ ಕಾರಣವಾಗಿದೆ. ರಾತ್ರೋರಾತ್ರಿ ಫೇಮಸ್ ಆಗಲು ಈ ನಟಿಯರೇ ವಿಡಿಯೋ ಲೀಕ್ ಮಾಡುತ್ತಿದ್ದಾರೆಯೇ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next