Advertisement

ಕೋವಿಡ್19: ಸಾಮಾಜಿಕ ಅಂತರಕಾಯ್ದುಕೊಳ್ಳುವಂತೆ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ನಟಿ ಪ್ರಣೀತಾ

02:24 PM Mar 25, 2020 | Mithun PG |

ಬೆಂಗಳೂರು: ಕನ್ನಡತಿ, ಜನಮೆಚ್ಚಿದ ನಟಿ ಪ್ರಣೀತಾ ಸುಭಾಷ್ ಸಿನಿಮಾಗಳ ಜೊತೆಗೆ ಸಾಮಾಜಿಕ ಕಾರ್ಯಗಳಲ್ಲೂ ತಮ್ಮನ್ನ ತಾವು ತೊಡಗಿಸಿಕೊಂಡಿರುವ ನಟಿ. ಕರ್ನಾಟಕದಲ್ಲಿ ಸರ್ಕಾರಿ ಶಾಲೆಯೊಂದನ್ನು ದತ್ತು ಪಡೆದಿರುವ ಪ್ರಣೀತಾ ಈಗ ಕೋವಿಡ್ -19 ವಿಚಾರದಲ್ಲೂ ಸಾಮಾಜಿಕ ಜಾಲತಾಣದಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

Advertisement

ಮನೆಯಲ್ಲಿ ಇದ್ದು ಸೆಲ್ಫ್​ ಐಸೋಲೇಶನ್​ ಗೆ ಒಳಗಾಗಿರುವ ಪ್ರಣೀತಾ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಲೈವ್​ ಬಂದು ಅಭಿಮಾನಿಗಳೊಂದಿಗೆ ಕೋವಿಡ್-19  ಕುರಿತಾಗಿ ಮುನ್ನೆಚ್ಚರಿಕೆ ವಹಿಸುವಂತೆ ಮನವಿ ಮಾಡುತ್ತಿದ್ದಾರೆ.

ಯುಗಾದಿ ಹಬ್ಬವನ್ನೂ ಕೂಡ ಸರಳವಾಗಿ ಆಚರಿಸಿ, ನಾನು ಹೆಚ್ಚಾಗಿ ಪ್ರವಾಸ ಮಾಡುತ್ತಿರುತ್ತೇನೆ. ಆದರೇ ಇದೀಗ ಲಾಕ್ ಡೌನ್ ಆಗಿರುವುದರಿಂದ ಮನೆಯಲ್ಲಿಯೇ ಕುಳಿತಿದ್ದೇನೆ. ಕುಟುಂಬದ ಜೊತೆಗೆ ಹೆಚ್ಚಿನ ಸಮಯ ಕಳೆಯುತ್ತಿದ್ದೇನೆ. ನೀವು ಕೂಡ ಮನೆಯಲ್ಲಿದ್ದು ಸುರಕ್ಷಿತರಾಗಿ ಎಂದು ಮನವಿ ಮಾಡಿದ್ದಾರೆ.

ಪ್ರಣೀತಾ ಮನೆಯಲ್ಲೇ ಇದ್ದು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಇವರು ಸದ್ಯ ಶಿಲ್ಪಾಶೆಟ್ಟಿ ಜೊತೆ ಹಂಗಾಮ-2 ಚಿತ್ರದಲ್ಲಿ ನಟಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next