Advertisement

ನಟಿ ಪೂಜಾ ಹೆಗ್ಡೆಗೆ ಫುಲ್ ಡಿಮ್ಯಾಂಡ್;ಒಂದು ಚಿತ್ರಕ್ಕೆ ಈ ಬೆಡಗಿ ಸಂಭಾವನೆ ಎಷ್ಟು ಕೋಟಿ ?

03:07 PM Jun 24, 2021 | Team Udayavani |

ಹೈದರಾಬಾದ್ : ಪೂಜಾ ಹೆಗಡೆ ಅತೀ ಕಡಿಮೆ ಅವಧಿಯಲ್ಲಿ ಹೆಚ್ಚು ಜನಪ್ರಿಯತೆ ಕಂಡ ಪ್ರತಿಭಾವಂತೆ ನಟಿ. ಸಿಕ್ಕ ಅವಕಾಶಗಳನ್ನು ಚೆನ್ನಾಗಿ ಬಳಸಿಕೊಂಡು ಯಶಸ್ಸಿನ ಉತ್ತುಂಗಕ್ಕೇರಿದ ಪೂಜಾ, ಒಂದರ ಮೇಲೊಂದರಂತೆ ಬ್ಲ್ಯಾಕ್ ಬಸ್ಟರ್ ಮೂವಿಗಳಲ್ಲಿ ಅಭಿನಯಿಸಿ ಎಲ್ಲರ ಅಚ್ಚುಮೆಚ್ಚಿನ ಅಭಿನೇಯತ್ರಿಯಾಗಿದ್ದಾರೆ.

Advertisement

ತೆಲುಗು, ಹಿಂದಿ ಸೇರಿದಂತೆ ಬಹುಭಾಷಾ ಸಿನಿಮಾಗಳಲ್ಲಿ ಫುಲ್ ಬ್ಯುಸಿಯಾಗಿರುವ ಪೂಜಾ ಅವರ ಕಾಲ್ ಶೀಟ್ ಪಡೆಯೋದು ನಿರ್ಮಾಪಕರ ಪಾಲಿಗೆ ಕಷ್ಟವಾಗಿದೆ. ಇಷ್ಟೊಂದು ಬ್ಯೂಸಿಯಾಗಿರುವ ಈ ಬೆಡಗಿ ಇದೀಗ ತಮ್ಮ ಸಂಭಾವನೆಯನ್ನೂ ಹೆಚ್ಚಿಸಿಕೊಂಡಿದ್ದಾರಂತೆ.

ಹೌದು, ಸದ್ಯ ಟಾಲಿವುಡ್ ನಲ್ಲಿ ಕೇಳಿ ಬರುತ್ತಿರುವ ಮಾಹಿತಿ ಪ್ರಕಾರ ಈ ನಟಿ ಒಂದು ಚಿತ್ರಕ್ಕೆ 3 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ. ಈಗಾಗಲೇ ಕೆಲವು ನಿರ್ಮಾಪಕರು ಫುಲ್ ಹಣ ನೀಡಿ, ತಮ್ಮ ಸಿನಿಮಾಗಳಿಗೆ ಡೇಟ್ ಪಡೆದುಕೊಂಡಿದ್ದಾರಂತೆ. ತೆಲುಗು ಚಿತ್ರರಂಗದಲ್ಲಿ ಇಷ್ಟೊಂದು ಸಂಭಾವನೆ ಪಡೆಯುತ್ತಿರುವುದು ಅನುಷ್ಕಾ ಶೆಟ್ಟಿ ಬಿಟ್ಟರೆ ಪೂಜಾ ಹೆಗಡೆ ಎರಡನೇ ನಟಿ.

ಇನ್ನು ಪೂಜಾ ಹೆಗಡೆ ಸದ್ಯ ಪ್ರಭಾಸ್ ಜೊತೆ ರಾಧೆ ಶ್ಯಾಮ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಆಚಾರ್ಯ, ಮೋಸ್ಟ್ ಎಲಿಜಿಬಲ್ ಬ್ಯಾಚುರಲ್, ಸರ್ಕಸ್ ಹಾಗೂ ತಮಿಳು ನಟ ವಿಜಯ್ ಧಳಪತಿಯ 65 ನೇ ಚಿತ್ರಕ್ಕೆ ನಾಯಕಿ ನಟಿಯಾಗಿ ತೆರೆ ಹಂಚಿಕೊಳ್ಳುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next