Advertisement

ಮಲಯಾಳಂ ಚಿತ್ರ ನಟಿಯ ಲೈಂಗಿಕ ಕಿರುಕುಳ: ಡಿಜಿಟಲ್‌ ಸಾಕ್ಷ್ಯ ವಶ

03:46 PM Mar 09, 2017 | Team Udayavani |

ಕೊಚ್ಚಿ : ಕಳೆದ ಫೆ.17ರಂದು ನಡೆದಿದ್ದ ಕೇರಳದ ಬಹುಭಾಷಾ ಚಿತ್ರ ನಟಿಯ ಅಪಹರಣ ಹಾಗೂ ಲೈಂಕಿಕ ಕಿರುಕುಳ ಪ್ರಕರಣದ ಹಿಂದಿನ ಉದ್ದೇಶ ಆಕೆಯನ್ನು ಹಣಕ್ಕಾಗಿ ಬ್ಲ್ಯಾಕ್‌ ಮೇಲ್‌ ಮಾಡುವುದೇ ಆಗಿತ್ತು ಎಂಬುದನ್ನು ಸಾಬೀತು ಪಡಿಸುವ ಪ್ರಮುಖ ಡಿಜಿಟಲ್‌ ಸಾಕ್ಷ್ಯ (ಲೈಂಗಿಕ ಕಿರುಕುಳದ ವಿಡಿಯೋ ಚಿತ್ರಿಕೆ) ಲಭಿಸಿರುವುದಾಗಿ ಪೊಲೀಸರು ಇಂದು ತಿಳಿಸಿದ್ದಾರೆ.

Advertisement

ದೇಶಾದ್ಯಂತ ಭಾರೀ ಸುದ್ದಿ ಮಾಡಿದ್ದ ಈ ಪ್ರಕರಣದ ಹಿಂದೆ ಯಾವುದೇ ಸಂಚಿನ ಉದ್ದೇಶ ಇರುವುದು ಕಂಡು ಬಂದಿಲ್ಲ ಎಂದು ಪ್ರಕರಣದ ತನಿಖೆಯನ್ನು ನಡೆಸಿರುವ, ಹೆಸರು ತಿಳಿಸಬಯಸದ, ಹಿರಿಯ ಪೊಲೀಸ್‌ ಅಧಿಕಾರಿ ಹೇಳಿದ್ದಾರೆ.

ಪ್ರಕರಣದ ಪ್ರಧಾನಿ ಆರೋಪಿಯಾಗಿರುವ ಮಾಸ್ಟರ್‌ ಮೈಂಡ್‌ ಪಲ್ಸರ್‌ ಸುನೀಲ್‌ ಎಂಬಾತನು ಈ ಅಪರಾಧ ಕೃತ್ಯವನ್ನು ನಟಿಯ ವಾಹನ ಚಾಲಕ ಮಾರ್ಟಿನ್‌ ಜತೆಗೂಡಿ ಒಂದು ತಿಂಗಳ ಹಿಂದೆಯೇ ಪ್ಲಾನ್‌ ಮಾಡಿದ್ದ; ಫೆ.17ರಂದು ಈ ಅಪರಾಧ ಕೃತ್ಯವನ್ನು ಆತ ಇನ್ನೂ ಕೆಲವರ ಶಾಮೀಲಾತಿಯೊಂದಿಗೆ ಎಸಗಿದ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ. 

“ನಟಿಯನ್ನು ಹಣಕ್ಕಾಗಿ ಬ್ಲಾಕ್‌ ಮೇಲ್‌ ಮಾಡುವುದೇ ಆರೋಪಿಗಳ ಉದ್ದೇಶವಾಗಿತ್ತು. ಫೆ.17ರ ರಾತ್ರಿ ನಟಿಯು ಪ್ರಯಾಣಿಸುತ್ತಿದ್ದ ಕಾರನ್ನು ಅಡ್ಡಗಟ್ಟಿ, ಆಕೆಯ ಕಾರನ್ನು ಹೊಕ್ಕು ಸುಮಾರು ಎರಡು ತಾಸು ಕಾಲ ಆಕೆಗೆ ಚಲಿಸುತ್ತಿದ್ದ ಕಾರಿನಲ್ಲಿ ಲೈಂಗಿಕ ಕಿರುಕುಳ ನೀಡಿ, ಅದನ್ನು ಆರೋಪಿಗಳು ವಿಡಿಯೋ ಮಾಡಿಕೊಂಡಿದ್ದು, ಆ ಡಿಜಿಟಲ್‌ ಸಾಕ್ಷ್ಯವು ಪೊಲೀಸರಿಗೆ ಸಿಕ್ಕಿದೆ’ ಎಂದು ಅಧಿಕಾರಿ ತಿಳಿಸಿದರು. 

ಪ್ರಕರಣದ ಮುಖ್ಯ ಆರೋಪಿಯಾಗಿರುವ ಪಲ್ಸರ್‌ ಸುನಿ ಮತ್ತು ಆತನ ಸಹಚರ ವಿ.ಪಿ. ವಿಗೀಶ್‌ ಪ್ರಕೃತ ಪೊಲೀಸ್‌ ಕಸ್ಟಡಿಯಲ್ಲಿದ್ದು ಅವರ ಪೊಲೀಸ್‌ ಕಸ್ಟಡಿ ನಾಳೆ ಶುಕ್ರವಾರ ಮುಗಿಯಲಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next