Advertisement

ಆ ಖ್ಯಾತ ನಿರ್ದೇಶಕ ಆಫರ್‌ ಕೊಟ್ಟು ತನ್ನ ಜೊತೆ 2 ತಿಂಗಳು ಇರುವಂತೆ ಹೇಳಿದ್ದ: ನಟಿ ಮಿತಾ

12:38 PM Jun 10, 2024 | Team Udayavani |

ಮುಂಬಯಿ: ಚಿತ್ರರಂಗದಲ್ಲಿ ಈ ಹಿಂದೆ ಕಾಸ್ಟಿಂಗ್‌ ಕೌಚ್‌ ಎಂಬ ಪಿಡುಗು ಇತ್ತು. ಇದರಿಂದ ಅನೇಕ ನಟ – ನಟಿಯರು ಅನುಭವಿಸಿದ ಯಾತನೆ ಒಂದೆರೆಡಲ್ಲ. ಈ ಪಿಡುಗು ಇಂದಿಗೂ ಅಲ್ಲಲ್ಲಿ ಇದೆ. ಆದರೆ ಅಷ್ಟಾಗಿ ಈ ಬಗ್ಗೆ ಧ್ವನಿ ಎತ್ತುವವರಿಲ್ಲ.

Advertisement

ಬಾಲಿವುಡ್‌ ನಲ್ಲಿ 90ರ ದಶಕದಲ್ಲಿ ತನ್ನ ನಟನೆಯಿಂದ ಗಮನ ಸೆಳೆದ ಖ್ಯಾತ ನಟಿಯೊಬ್ಬರು ಕಾಸ್ಟಿಂಗ್‌ ಕೌಚ್‌ ಬಗ್ಗೆ ಮಾತನಾಡಿದ್ದಾರೆ.

ಬಾಲಿವುಡ್‌ ನಲ್ಲಿ 90 ರ ದಶಕದಲ್ಲಿ ʼಗುಲಾಮ್‌ʼ ʼತಾಲ್‌ʼ, ʼಸಿದ್ದೇಶ್ವರಿʼ, ʼಕಸ್ಬಾʼ ದಂತಹ ಸಿನಿಮಾದಲ್ಲಿ ನಟಿಸಿ ಬಣ್ಣದ ಲೋಕದಲ್ಲಿ ಮಿಂಚಿದ್ದ ನಟಿ ಮಿತಾ ವಸಿಷ್ಠ ಸಂದರ್ಶನವೊಂದರಲ್ಲಿ ತನ್ನ ವೃತ್ತಿ ಬದುಕಿನಲ್ಲಾದ ಕರಾಳ ಅನುಭವದ ಬಗ್ಗೆ ಮಾತನಾಡಿದ್ದಾರೆ.

“ನಾನು ನನ್ನ ವೃತ್ತಿ ಬದುಕಿನ ಆರಂಭಿಕ ದಿನಗಳನ್ನು ಮಿಸ್‌ ಮಾಡಿಕೊಳ್ಳುತ್ತೇನೆ. ಆಗ ನಾನು ಖ್ಯಾತ ನಿರ್ದೇಶಕರ ಜೊತೆ ಕೆಲಸ ಮಾಡಿದ್ದೆ. ಯಾವ ಸಿನಿಮಾದಲ್ಲೂ ಯಾವ ಪಾತ್ರದಲ್ಲೂ ನಾನು ಸೂಕ್ತವಾಗುತ್ತಿದ್ದೆ. 1999ರಲ್ಲಿ ಬಂದ ʼತಾಲ್‌ʼ ಸಿನಿಮಾದಲ್ಲಿನ ನನ್ನ ಪಾತ್ರವನ್ನು ಜನ ಮರೆಯಲು ಸಾಧ್ಯವಿಲ್ಲ. ಕೆಲ ಕಲಾವಿದರು ಎಲ್ಲಾ ಪಾತ್ರಗಳಿಗೂ  ಸೂಕ್ತವಾಗಿರಲ್ಲ” ಎಂದಿದ್ದಾರೆ.

“ನನ್ನ ವೃತ್ತಿ ಬದುಕಿನ ʼಸಿದ್ದೇಶ್ವರಿʼ(1983), ʼಕಸ್ಬಾʼ(1990) ಸಿನಿಮಾದಲ್ಲಿ ನಾನು ಬೆತ್ತಲಾಗಿ ದೃಶ್ಯದಲ್ಲಿ ನಟಿಸಿದ್ದೆ. ಆ ಸಿನಿಮಾಕ್ಕೆ ಅಂಥ ಪಾತ್ರದ ಅಗತ್ಯವಿತ್ತು. ಈ ಸಮಯದಲ್ಲಿ ನನಗೆ ಅನೇಕ ಆಫರ್‌ ಗಳು ಬಂತು. ಆದರೆ ನಾನು ಅದನ್ನು ತಿರಸ್ಕರಿಸಿದ್ದೆ” ಎಂದು ಹೇಳಿದ್ದಾರೆ.

Advertisement

ದಕ್ಷಿಣದ ಖ್ಯಾತ ನಿರ್ದೇಶಕರೊಬ್ಬರು ನನಗೆ ಲೀಡ್‌ ರೋಲ್‌ ಗಾಗಿ ಆಫರ್‌ ವೊಂದನ್ನು ನೀಡಿದ್ದರು. ಹಾಗಾಗಿ ಅವರನ್ನು ನಾನು ಚೆನ್ನೈನಲ್ಲಿ ಭೇಟಿಯಾಗಿದ್ದೆ. ಆ ನಿರ್ದೇಶಕನ ಸಿನಿಮಾದಲ್ಲಿ ನಟಿಸಿದ್ದ ನಟಿಗೆ ಪ್ರಶಸ್ತಿ ಕೂಡ ಬಂದಿತ್ತು. ಆ ನಿರ್ದೇಶಕ ನನಗೆ ಒಂದು ಆಫರ್‌ ನೀಡಿದ್ದರು. ಆದರೆ ಆಫರ್‌ ನೀಡುವಾಗ ಅವರೊಂದಿಗೆ ನಾನು ಎರಡು ತಿಂಗಳು ಕಾಲ ಕಳೆಯಬೇಕೆನ್ನುವ ಕಂಡಿಷನ್‌ ವೊಂದನ್ನು ಹಾಕಿದ್ದರು. ಮೊದಲು ನಾನು ಭಾಷೆ ಕಳೆಯಲು ಅವರೊಂದಿಗೆ ಎರಡು ತಿಂಗಳು ಕಳೆಯಬೇಕೆಂದು ಹೇಳುತ್ತಿದ್ದಾರೆ ಅನ್ಕೊಂಡಿದ್ದೆ. ಆದರೆ ಆ ಬಳಿಕ ಅವರು ಯಾವ ಅರ್ಥದಲ್ಲಿ ನನ್ನನು ಹಾಗೆ ಕೇಳಿದ್ದಾರೆ ಎನ್ನುವುದು ಗೊತ್ತಾಯಿತು. ಹಾಗಾಗಿ ನಿಮ್ಮ ಆಫರ್‌ ನೀವೇ ಇಟ್ಟುಕೊಳ್ಳಿ ಎಂದು ಹೇಳಿ ಅಲ್ಲಿಂದ ಹೊರನಡೆದ” ಎಂದು ಹಳೆಯ ಘಟನೆ ಬಗ್ಗೆ ಮಾತನಾಡಿದ್ದಾರೆ.

ಇಂಥ ಅನೇಕ ಸನ್ನಿವೇಶಗಳನ್ನು ಎದುರಿಸಿಕೊಂಡೇ ನಾನು ಬಣ್ಣದ ಲೋಕದಲ್ಲಿ ಬಂದಿದ್ದೇನೆ ಎಂದು ನಟಿ ಹೇಳಿದ್ದಾರೆ.

ಇತ್ತೀಚೆಗಷ್ಟೇ ಮಿತಾ ʼದಿ ಶೇಮ್‌ ಲೆಸ್‌ʼ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಕೇನ್ಸ್‌ ಫಿಲ್ಮ್‌ ಫೆಸ್ಟಿವೆಲ್‌ ನಲ್ಲಿ ಪ್ರದರ್ಶನ ಕಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next