Advertisement

‘ಫ್ರೆಂಡ್​ಶಿಪ್​ ಡೇ’ಯಂದು ಪತಿ ನೆನೆದು ಭಾವುಕರಾದ ನಟಿ ಮೇಘನಾ ರಾಜ್

02:02 PM Aug 01, 2021 | Team Udayavani |

ಬೆಂಗಳೂರು: ವಿಶ್ವ ಗೆಳೆಯರ ದಿನವಾದ ಇಂದು ಸ್ಯಾಂಡಲ್ವುಡ್ ನಟಿ ಮೇಘನಾ ರಾಜ್ ಅವರು ಅಗಲಿದ ತಮ್ಮ ಪತಿ ಚಿರಂಜೀವಿಯನ್ನು ನೆನಪಿಸಿಕೊಂಡಿದ್ದಾರೆ.

Advertisement

ಚಿರು ಜೊತೆಗಿರುವ ಫೋಟೋವನ್ನು ಪೋಸ್ಟ್​ ಮಾಡಿರುವ ಅವರು, ‘ನೀನು ಯಾವಾಗಲೂ ನನ್ನ ಉತ್ತಮ ಗೆಳೆಯ. ಹ್ಯಾಪಿ ಫ್ರೆಂಡ್​ಶಿಪ್​ ಡೇ ಎಂದು’ ಬರೆದುಕೊಂಡಿದ್ದಾರೆ.

ಚಿರು ಹಾಗೂ ಮೇಘನಾ ಪ್ರೀತಿಸಿ ಮದುವೆಯಾಗಿದ್ದರು. ಪ್ರೀತಿಗೂ ಮುಂಚೆ ಉತ್ತಮ ಸ್ನೇಹಿತರಾಗಿದ್ದರು. ಇವರ ಗೆಳೆತನ ಪ್ರೀತಿಗೆ ಪ್ರಮೋಟ ಆಗಿ ಮದುವೆಯಾದರು. ಆದರೆ, ವಿಧಿಗೆ ಈ ಜೋಡಿ ನೋಡಿ ಹೊಟ್ಟೆಕಿಚ್ಚಾಯಿತೆನೋ, ಮಗುವಿನ ಮುಖವನ್ನೂ ನೋಡದೆ ಚಿರು ಬಾರದ ಲೋಕಕ್ಕೆ ಹೊರಟು ಹೋದರು.

‘ಚಿರು ನನಗೆ ಪತಿ ಎನ್ನುವುದಕ್ಕಿಂತ ಅತ್ಯುತ್ತಮ ಗೆಳೆಯ’ ಎಂದು ಮೇಘನಾ ರಾಜ್​ ಅನೇಕ ಬಾರಿ ಹೇಳಿಕೊಂಡಿದ್ದಾರೆ. ಹೀಗಾಗಿ, ಪತಿ-ಪತ್ನಿ ಸಂಬಂಧದ ಜತೆಗೆ ಇವರ ನಡುವೆ ಒಳ್ಳೆಯ ಗೆಳೆತನವಿತ್ತು. ಚಿರು ಅವರಲ್ಲಿ ಓರ್ವ ಗೆಳೆಯನನ್ನು ಮೇಘನಾ ಕಂಡಿದ್ದರು. ಈ ಕಾರಣಕ್ಕೆ ಮೇಘನಾ ರಾಜ್​ ಇಂದು ಪತಿಗೆ ಫ್ರೆಂಡ್​ಶಿಪ್​ ಡೇ ಶುಭಾಶಯ ಕೋರಿದ್ದಾರೆ. ಈ ಫೋಟೋ ನೋಡಿದ ಅನೇಕ ಅಭಿಮಾನಿಗಳು ಭಾವುಕರಾಗಿ ಕಮೆಂಟ್​ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next