Advertisement

Actress Leelavathi; ತನ್ನದೇ ತೋಟದಲ್ಲಿ ಚಿರ ನಿದ್ರೆಗೆ ಜಾರಿದ ಲೀಲಾವತಿ ಅಮ್ಮ

05:12 PM Dec 09, 2023 | Team Udayavani |

ನೆಲಮಂಗಲ: ಹಿರಿಯ ನಟಿ ಲೀಲಾವತಿ ಅವರ ಅಂತ್ಯಕ್ರಿಯೆಯನ್ನು ಶನಿವಾರ ಸಂಜೆ ಸೋಲದೇವನಹಳ್ಳಿಯ ತೋಟದ ಮನೆಯಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ನಡೆಸಲಾಯಿತು.

Advertisement

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತದಿಂದ ಗೌರವ ಸಮರ್ಪಣೆ ಸಲ್ಲಿಸಲಾಯಿತು. ಪೊಲೀಸರು3  ಸುತ್ತು ಕುಶಾಲತೋಪು ಸಿಡಿಸಿ ಗೌರವ ಸಲ್ಲಿಸಿದರು.

ಪುತ್ರ ವಿನೋದ್ ರಾಜ್ ಅವರು ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದರು. ಚಿತ್ರರಂಗದ ಗಣ್ಯರು, ಸಂಬಂಧಿಕರು ಸೇರಿ ಸಾವಿರಾರು ಮಂದಿ ಅಂತಿಮ ದರ್ಶನ ಪಡೆದರು.

ಹಿಂದೂ ಸಂಪ್ರದಾಯದಂತೆ ಹೂಳುವ ಮೂಲಕ ಮಣ್ಣು ಮಾಡಲಾಯಿತು. ನೂರಾರು ಮಂದಿ ಹಿರಿಯ ಚೇತನ ಲೀಲಾವತಿ ಅವರ ಮೇಲೆ ಹಿಡಿ ಮಣ್ಣು ಹಾಕಿ ಕಂಬನಿ ಮಿಡಿದರು.

Advertisement

Udayavani is now on Telegram. Click here to join our channel and stay updated with the latest news.

Next