Advertisement

ಕೋವಿಡ್ ಕರಾಳತೆ ಬಿಚ್ಚಿಟ್ಟ ನಟಿ ಕೃತಿ ಕರಬಂದ

12:42 PM May 04, 2021 | Team Udayavani |

ಬೆಂಗಳೂರು: 48 ಗಂಟೆಗಳು ತನ್ನ ಕುಟುಂಬಕ್ಕೆ ತೀರಾ ಸಂಕಷ್ಟದ ಸಮಯವಾಗಿತ್ತು ಎಂದು ಕೋವಿಡ್ ಸೋಂಕಿನ ತೀವ್ರತೆ ಬಗ್ಗೆ ಗೂಗ್ಲಿ ಸುಂದರಿ ನಟಿ ಕೃತಿ ಕರಬಂದ ವಿವರಿಸಿದ್ದಾರೆ.

Advertisement

ಸಾಮಾಜಿಕ ಜಾಲತಾಣದಲ್ಲಿ ಕೋವಿಡ್ ಕರಾಳತೆಯನ್ನು ಬಿಚ್ಚಿಟ್ಟಿರುವ ನಟಿ, ‘ಕಳೆದ 48 ಗಂಟೆಗಳು ನನಗೂ ನನ್ನ ಕುಟುಂಬಕ್ಕೂ ತೀರಾ ಸಂಕಟದ ಸಮಯವಾಗಿತ್ತು. ಅದು ಮನೆಗೆ ಬರುವವರೆಗೂ ಎಷ್ಟು ಭಯಾನಕ ಎನ್ನುವುದು ಗೊತ್ತಾಗಲ್ಲ. ದಯವಿಟ್ಟು ಮನೆಯಲ್ಲೇ ಇರಿ. ಮನೆಯಿಂದ ಹೊರಹೋಗಲು ನಿರ್ಧರಿಸಿದರೆ ಒಂದು ಹೆಜ್ಜೆ ಹಿಂದಕ್ಕೆ ಇಡಿ. ನಿಮ್ಮ ಪ್ರಾಣವನ್ನು ಪಣಕ್ಕಿಡುವುದು ಸರಿಯೇ ಎಂದು ಯೋಚಿಸಿ’ ಎಂದು ಹೇಳಿದ್ದಾರೆ.

ಕೋವಿಡ್ ಸಂಕಷ್ಟದಲ್ಲಿ ಅನುಭವಿಸಿದ ಕಷ್ಟವನ್ನು ವಿವರಿಸುವ ಮೂಲಕ ಎಲ್ಲರೂ ಸುರಕ್ಷಿತವಾಗಿ ಇರುವಂತೆ ಹೇಳಿದ್ದಾರೆ. ಕೃತಿ ಕರಬಂದ ಸದ್ಯ ಮುಂಬೈನಲ್ಲಿ ನೆಲೆಸಿದ್ದಾರೆ.

ಇನ್ನು ಈಗಾಗಲೇ ಸಾಕಷ್ಟು ತಾರೆಯರು ಕೋವಿಡ್ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಮಾಸ್ಕ್ ಧರಿಸುವಂತೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಹಾಗೂ ಹ್ಯಾಂಡ್ ಸ್ಯಾನಿಟೈಸ್ ಮಾಡಿಕೊಳ್ಳುವಂತೆ ತಿಳಿ ಹೇಳುತ್ತಿದ್ದಾರೆ. ಅದರಂತೆ ಮನೆಯಿಂದ ಹೊರ ಹೋಗುವಂತೆ ಕೇಳಿ ಕೊಳ್ಳುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next