“ಆ್ಯಮ್ ಇನ್ ಲವ್’ ಎಂಬ ಚಿತ್ರದ ಮೂಲಕಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು ಕಾವ್ಯ ಶೆಟ್ಟಿ. ಆ ಚಿತ್ರವಾಗುತ್ತಿದ್ದಂತೆಯೇ “ನಮ್ ದುನಿಯಾ ನಮ್ ಸ್ಟೈಲ್’ ಎಂಬ ಚಿತ್ರದಲ್ಲೂ ನಾಯಕಿಯಾಗಿ ಕಾಣಿಸಿಕೊಂಡಿದ್ದ ಕಾವ್ಯಾ ನಂತರ ಪರಭಾಷೆಗಳತ್ತ ಚಿತ್ತ ಹರಿಸಿದರು. ಬಳಿಕ “ಇಷ್ಟಕಾಮ್ಯ’, “ಸಿಲಿಕಾನ್ ಸಿಟಿ’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವಕಾವ್ಯಾ, ಈಗ “ಸೋಲ್ಡ್’, “ಲಂಕೆ’ ಮತ್ತು ರವಿಚಂದ್ರನ್ ಜೊತೆ “ರವಿ ಬೋಪಣ್ಣ’ ಚಿತ್ರದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಅದರ ಹಿಂದೆಯೇ ಪುನೀತ್ ರಾಜಕುಮಾರ್ ನಾಯಕರಾಗಿರುವ “ಯುವರತ್ನ’ ಚಿತ್ರದ ಹಾಡೊಂದಕ್ಕೂ ಹೆಜ್ಜೆ ಹಾಕಿದ್ದಾರೆ.
ಅಲ್ಲದೆ “ಲವ್ ಮಾಕ್ಟೇಲ್’ ತೆಲುಗು ರಿಮೇಕ್‌ನಲ್ಲೂ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಕೋವಿಡ್ ಲಾಕ್‌ಡೌನ್ ನಂತರ ಒಂದರ ಹಿಂದೊಂದು ಚಿತ್ರಗಳಲ್ಲಿ ಬ್ಯುಸಿಯಾಗಿರುವ ಕಾವ್ಯಾ ಶೆಟ್ಟಿ, ತಮ್ಮ ಮುಂಬರುವ ಚಿತ್ರಗಳ ಮೇಲೆ ಸಾಕಷ್ಟು ನಿರೀಕ್ಷೆಯ ಮಾತುಗಳನ್ನಾಡುತ್ತಾರೆ. “ಈಗಾಗಲೇ ಡ್ಯಾನಿಶ್ ಸೇಠ್ ಅವರೊಂದಿಗೆ “ಸೋಲ್ಡ್’, ಲೂಸ್‌ಮಾದ ಯೋಗಿ ಅವರೊಂದಿಗೆ “ಲಂಕೆ’, ರವಿಚಂದ್ರನ್ ಅವರೊಂದಿಗೆ “ರವಿ ಭೋಪಣ್ಣ’ ಸಿನಿಮಾಗಳಲ್ಲಿ ಲೀಡ್ ರೋಲ್ ಪ್ಲೇ ಮಾಡಿದ್ದೇನೆ.
ಈ ಸಿನಿಮಾಗಳು ಸದ್ಯ ರಿಲೀಸ್‌ಗೆ ರೆಡಿಯಾಗುತ್ತಿವೆ. ಇದರೊಂದಿಗೆ “ಯುವರತ್ನ’ ಸಿನಿಮಾದ ಟೈಟಲ್ ಸಾಂಗ್‌ನಲ್ಲೂಕಾಣಿಸಿಕೊಳ್ಳುತ್ತಿದ್ದು, ಇತ್ತೀಚೆಗೆ ಆ ಸಾಂಗ್‌ನ ಶೂಟಿಂಗ್‌ನಲ್ಲಿ ಭಾಗವಹಿಸಿ ಅದನ್ನು ಮುಗಿಸಿಕೊಟ್ಟಿದ್ದೇನೆ. ಇದಲ್ಲದೆ “ನಿಮಗೊಂದು ಸಿಹಿಸುದ್ದಿ’ ಎಂಬ ವೆಬ್ ಸೀರಿಸ್‌ನಲ್ಲೂ ಅಭಿನಯಿಸುತ್ತಿದೆ ªàನೆ. ಈಗಾಗಲೇ ಸಿಕ್ಕಿರುವ ಪ್ರಾಜೆಕ್ಟ್ಗಳು ಒಂದಕ್ಕಿಂತ ಒಂದು ವಿಭಿನ್ನವಾಗಿದ್ದು, ಎಲ್ಲವೂಕೂಡ ಒಂದೊಂದು ಥರದ ಅನುಭವಕೊಟ್ಟಿವೆ’ ಎನ್ನುತ್ತಾರೆ. ಇನ್ನುಕೊರೊನಾ ಲಾಕ್‌ಡೌನ್ ಸಮಯಕಳೆದ ಬಗ್ಗೆ ಮಾತನಾಡುವಕಾವ್ಯಾ ಶೆಟ್ಟಿ, “ಕೋವಿಡ್ ದಿಂದಾಗಿ ಕೆಲ ಸಮಯ ಎಲ್ಲರಂತೆ ನಾನೂ ಕೂಡ ಮನೆಯಲ್ಲಿರ ಬೇಕಾಯ್ತು.
ಹೀಗಾಗಿ ನಾನೂ ಕೂಡಕಂಪ್ಲೀಟ್ ಆಗಿ ಮನೆಯಲ್ಲೇ ಇದ್ದೆ. ಈ ಟೈಮ್‌ನಲ್ಲಿ ಯಾವುದೇ ಹೊಸ ಸಿನಿಮಾಗಳನ್ನು ಒಪ್ಪಿಕೊಂಡಿರಲಿಲ್ಲ. ನಾನು ಕೆಲಸವಿಲ್ಲದೆ ಯಾವತ್ತೂ, ಇಷ್ಟೊಂದು ದಿನ ಮನೆಯಲ್ಲಿ ಇರಲೇ ಇಲ್ಲ. ಫಸ್ಟ್ ಟೈಮ್ ಇಷ್ಟೊಂದು ದಿನ ಪೇರೆಂಟ್ಸ್ ಜೊತೆಗೆಕಾಲ ಕಳೆಯುವಂತ ಚಾನ್ಸ್ ಸಿಕ್ಕಿತು. ಆಗಾಗ್ಗೆ ಸ್ವಲ್ಪ ಮಟ್ಟಿಗೆ ಬೋರಾದ್ರೂ, ಯೋಗ, ಬುಕ್ಸ್ ಓದುವುದು, ವೆಬ್ ಸೀರಿಸ್ ನೋಡೋದು ಹೀಗೆ ಒಂದಷ್ಟು ಆ್ಯಕ್ಟಿವಿಟೀಸ್‌ನಲ್ಲಿ ಎಂಗೇಜ್ ಆಗಿದ್ದೆ. ಸದ್ಯ ಎಲ್ಲವೂ ಮೊದಲಿನಂತೆ ಆಗುತ್ತಿದ್ದು, ಈಗ ಮತ್ತೆ ನನ್ನಕೆಲಸಗಳು ಶುರುವಾಗುತ್ತಿದೆ. ಲಾಕ್‌ಡೌನ್ ಮುಗಿಯುತ್ತಿದ್ದಂತೆ, ನಾನು ಒಪ್ಪಿಕೊಂಡ ಸಿನಿಮಾಗಳನ್ನು ಒಂದೊಂದಾಗಿ ಕಂಪ್ಲೀಟ್ ಮಾಡುತ್ತಿದ್ದೇನೆ’ ಎನ್ನುತ್ತಾರೆ. ಉಳಿದಂತೆ ಮೊದಲ ಬಾರಿಗೆ ರವಿಚಂದ್ರನ್ ಅವರೊಂದಿಗೆ “ರವಿ ಭೋಪಣ್ಣ’ ಸಿನಿಮಾದಲ್ಲಿ ಭಿನಯಿಸುತ್ತಿರುವ ಕಾವ್ಯಾ ಶೆಟ್ಟಿಗೆ ಈ ಸಿನಿಮಾದಲ್ಲಿ ಮೂರು ಶೇಡ್ ಇರುವಂಥ ಪಾತ್ರ ಸಿಕ್ಕಿದೆಯಂತೆ. “ಈ ಸಿನಿಮಾದಲ್ಲಿ ಮೂರು ಡಿಫರೆಂಟ್ ಏಜ್ ಗ್ರೂಪ್‌ನಲ್ಲಿ ನನ್ನ ಕ್ಯಾರೆಕ್ಟರ್ ಇದೆ. ತುಂಬಾ ಡಿಫರೆಂಟ್ ಆಗಿರುವಂಥ ಪಾತ್ರ’ ಎನ್ನುತ್ತಾರೆ ಕಾವ್ಯಾ.