Advertisement

ಹೊಸ ಕಾರು ಖರೀದಿಸಿದ ವಜ್ರಕಾಯದ ಬೆಡಗಿ ಕಾರುಣ್ಯ ರಾಮ್

09:15 PM Apr 07, 2021 | Team Udayavani |

ಬೆಂಗಳೂರು : ವಜ್ರಕಾಯದ ಚೆಲುವೆ ನಟಿ ಕಾರುಣ್ಯ ಫುಲ್ ಖುಷಿಯಲ್ಲಿದ್ದಾರೆ. ಅವರ ಈ ಸಂತಸಕ್ಕೆ ಕಾರಣ ಹೊಸ ಕಾರು ಖರೀದಿ.

Advertisement

ಹೌದು, ಕಾರುಣ್ಯಾ ಐಷಾರಾಮಿ ಬಿಎಂಡಬ್ಲೂ ಕಾರ್ ಖರೀದಿಸಿದ್ದಾರೆ. ಬಿಳಿ ಬಣ್ಣದ ಹೊಸ ಕಾರ್‍ ನಲ್ಲಿ ಡ್ರೈವ್ ಹೋಗಿರುವ ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಹೊಸ ಕಾರು ಖರೀದಿಸಿರುವ ಬಗ್ಗೆ ಇನ್‍ಸ್ಟಾಗ್ರಾಂನಲ್ಲಿ ಸಂತಸ ಹಂಚಿಕೊಂಡಿರುವ ಕಾರುಣ್ಯ, “ಇದು ನನ್ನ ಕನಸಾಗಿತ್ತು, ಆಮೇಲೆ ಗುರಿಯಾಯ್ತು. ಈಗ ಇದು ಸಾಧನೆಯಾಗಿದೆ. ಕನಸುಗಳನ್ನು ಈಡೇರಿಸಿಕೊಳ್ಳಲು ಕೆಲವರು ತುಂಬ ಶ್ರಮಪಡುತ್ತಾರೆ. ನನ್ನ ದೊಡ್ಡ ಕನಸುಗಳ ಲಿಸ್ಟ್‌ನಲ್ಲಿರುವ ಸಣ್ಣ ಸಾಧನೆ ಇದು ಅಂತ ಹೇಳುವೆ. ಬಾಕಿಯವುಗಳನ್ನು ಇನ್ನುಮೇಲೆ ಈಢೇರಿಸಿಕೊಳ್ಳಬೇಕಿದೆ. ಇದು ನನ್ನ ಮೊದಲ ಲಕ್ಷುರಿ ಕಾರ್. ನನಗೆ ಸದಾ ಹಾರೈಸುತ್ತ, ಬೆಂಬಲಿಸುತ್ತ ಬಂದಿರುವವರೆಲ್ಲರಿಗೂ ಧನ್ಯವಾದಗಳು” ಎಂದು ನಟಿ ಕಾರುಣ್ಯಾ ರಾಮ್ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದಾರೆ.

ಕೆಲದಿನಗಳ ಹಿಂದೆ ಕಾರುಣ್ಯಾ ರಾಮ್‌ ಅವರು ಕ್ಯಾನ್ಸರ್ ರೋಗಿಗಳಿಗೆ ಅವರ ಕೂದಲು ದಾನ ಮಾಡಿದ್ದರು. “ಕೂದಲಿನಿಂದ ಮಹಿಳೆಯರ ಸೌಂದರ್ಯ ಹೆಚ್ಚುತ್ತದೆ. ಇಷ್ಟು ಉದ್ದದ ಕೂದಲು ಬೆಳೆಸಲು ನನಗೆ 2 ವರ್ಷ ಬೇಕಾಯಿತು. ಇದು ನನಗೆ ತುಂಬ ಇಷ್ಟವಿದ್ದರೂ ಕೂಡ 2021ರ ಈ ವರ್ಷದಲ್ಲಿ ಅಗತ್ಯ ಇರುವವರಿಗಾಗಿ ಏನಾದರೂ ಮಾಡಬೇಕು ಎಂದು ಕೂದಲು ನೀಡುತ್ತಿದ್ದೇನೆ” ಎಂದು ಕಾರುಣ್ಯಾ ಹೇಳಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next