Advertisement

ನಟಿ ಜಯಪ್ರದಾ ಬಿ.ಜೆ.ಪಿ. ಸೇರ್ಪಡೆ

09:22 AM Mar 29, 2019 | Hari Prasad |

ನವದೆಹಲಿ: ಬಹುಭಾಷಾ ನಟಿ ಮತ್ತು ರಾಜಕಾರಣಿ ಜಯಪ್ರದಾ ಅವರು ಇಂದು ಅಧಿಕೃತವಾಗಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಜಯಪ್ರದಾ ಅವರು 2004 ಮತ್ತು 2009ರಲ್ಲಿ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿ ರಾಂಪುರ ಲೋಕಸಭಾ ಕ್ಷೇತ್ರದಿಂದ ಸಂಸದೆಯಾಗಿ ಆಯ್ಕೆಯಾಗಿದ್ದರು. ಆ ಬಳಿಕ ಅವರು ಪಕ್ಷದಿಂದ ಉಚ್ಛಾಟನೆಗೊಂಡಿದ್ದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜಯಪ್ರದಾ ಸ್ಪರ್ಧಿಸುವುದು ಇನ್ನೂ ಖಚಿತವಾಗಿಲ್ಲ. ಅವರ ಉಮೇದುವಾರಿಕೆ ಕುರಿತಾಗಿ ಬಿಜೆಪಿ ನಾಯಕರೂ ಇದುವರೆಗೂ ಗೌಪ್ಯತೆ ಕಾಯ್ದುಕೊಂಡು ಬಂದಿದ್ದಾರೆ.

Advertisement

ತನಗೆ ಪಕ್ಷಕ್ಕೆ ಆದರದ ಸ್ವಾಗತವನ್ನು ಕೋರಿದ ಕಮಲ ನಾಯಕರಿಗೆ ಜಯಪ್ರದಾ ಅವರು ಅಭಿನಂದನೆ ಸಲ್ಲಿಸಿದ್ದಾರೆ. ‘ಸಿನೇಮಾವಾಗಲಿ ರಾಜಕಾರಣವಾಗಲಿ ನಾನು ನನ್ನ ಕಡೆಯಿಂದ ಉತ್ತಮವಾದುದನ್ನೇ ನೀಡುತ್ತೇನೆ’ ಎಂದು ಜಯಪ್ರದಾ ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ. ‘ಈ ಹಿಂದೆ ನಾನು ಟಿಡಿಪಿ ಮತ್ತು ಸಮಾಜವಾದಿ ಪಕ್ಷಗಳ ಪರವಾಗಿ ಕೆಲಸ ಮಾಡಿದ್ದೇನೆ ಇದೀಗ ನನಗೆ ನರೇಂದ್ರ ಮೋದಿಯಂತಹ ಮಹಾನ್‌ ನಾಯಕರಿರುವ ಪಕ್ಷದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ ಈ ಪಕ್ಷಕ್ಕೆ ಮತ್ತು ದೇಶಕ್ಕೆ ನನ್ನ ಸಂಪೂರ್ಣ ಸೇವೆಯನ್ನು ಮುಡಿಪಾಗಿಡುತ್ತೇನೆ’ ಎಂದವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಇನ್ನೊಂದು ಮೂಲಗಳ ಪ್ರಕಾರ ಜಯಪ್ರದಾ ಅವರು ಸಮಾಜವಾದಿ ಪಕ್ಷದ ಪ್ರಭಾವಿ ನಾಯಕ ಅಜಂ ಖಾನ್‌ ವಿರುದ್ಧ ರಾಂಪುರ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಅಜಂ ಖಾನ್‌ ಅವರು ಈ ಹಿಂದೆ ಜಯಪ್ರದಾ ವಿರುದ್ಧ ಅವಹೇಳನಕಾರಿ ಟೀಕೆಗಳನ್ನು ಮಾಡಿದ್ದರು. 2004 ಮತ್ತು 2009ರಲ್ಲಿ ರಾಂಪುರದಿಂದ ಸಂಸದೆಯಾಗಿ ಆಯ್ಕೆಯಾಗಿದ್ದ ಜಯಪ್ರದಾ ಅವರು 2014ರಲ್ಲಿ ರಾಷ್ಟ್ರೀಯ ಲೋಕ ದಳ ಪಕ್ಷದಿಂದ ಸ್ಪರ್ಧಿಸಿ ಭಾರತೀಯ ಜನತಾ ಪಕ್ಷದ ಡಾ. ನೇಪಾಲ್‌ ಸಿಂಗ್‌ ವಿರುದ್ಧ ಸೋತಿದ್ದರು. ಈ ಕ್ಷೇತ್ರಕ್ಕೆ ಎಪ್ರಿಲ್‌ 23ಕ್ಕೆ ಮತದಾನ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next