Advertisement

ಬಹುಭಾಷಾ  ನಟಿ ಇಷಾ ಕೊಪ್ಪಿಕರ್‌ ಬಿಜೆಪಿ ಸೇರ್ಪಡೆ 

01:17 PM Jan 27, 2019 | |

ಮುಂಬಯಿ: ಬಹುಭಾಷಾ ನಟಿ ಇಷಾ ಕೊಪ್ಪಿಕರ್‌ ಅವರು ಭಾನುವಾರ ಭಾರತೀಯ ಜನತಾ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ. ಅವರಿಗೆ ಮಹಿಳಾ ಸಾರಿಗೆ ವಿಭಾಗದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. 

Advertisement

ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರು 42 ರ ಹರೆಯದ ಇಷಾ ಅವರನ್ನು ಪಕ್ಷಕ್ಕೆ ಆತ್ಮೀಯವಾಗಿ ಬರಮಾಡಿಕೊಂಡರು. 

1998 ರಲ್ಲಿ ಇಷಾ ಅವರು ತಮಿಳು ಚಿತ್ರದ ಮೂಲಕ ಬಣ್ಣದ ಬದುಕಿಗೆ ಕಾಲಿರಿಸಿದ್ದರು. 2000 ರಲ್ಲಿ ಫಿಜಾ ಎಂಬ ಹಿಂದಿ ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿರಿಸಿದ್ದರು. 

ಇಷಾ ಸೂಪರ್‌ ಹಿಟ್‌ ಚಿತ್ರ ‘ಸೂರ್ಯವಂಶ’ ಸೇರಿ ನಾಲ್ಕು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next