ಕಳೆದ ಎರಡು-ಮೂರು ತಿಂಗಳಿನಿಂದ ಮದುವೆ, ಹನಿಮೂನ್ ಅಂಥ ಬ್ಯುಸಿಯಾಗಿದ್ದ ನಟ ವಸಿಷ್ಠ ಸಿಂಹ- ಹರಿಪ್ರಿಯಾ ಜೋಡಿ ಮತ್ತೆ ಸಿನಿಮಾ ಕೆಲಸದತ್ತ ಮುಖ ಮಾಡಿದ್ದಾರೆ. ಸದ್ಯ ವಸಿಷ್ಠ ಸಿಂಹ “ಲವ್ ಲಿ’ ಸಿನಿಮಾದ ಕೆಲಸಗಳಲ್ಲಿ ಬಿಝಿಯಾಗಿದ್ದರೆ, ಮತ್ತೂಂದೆಡೆ ನಟಿ ಹರಿಪ್ರಿಯಾ ಆದಷ್ಟು ಬೇಗ “ಗುಡ್ ನ್ಯೂಸ್’ ಕೊಡುವುದಾಗಿ ಕೆಲ ದಿನಗಳ ಹಿಂದಷ್ಟೇ ಹೇಳಿಕೊಂಡಿದ್ದರು. ಈಗ ಆ ಗುಡ್ ನ್ಯೂಸ್ ಏನಂದು ಹೇಳಿದ್ದು, ಯುಟ್ಯೂಬ್
ಚಾನೆಲ್ ವೊಂದನ್ನು ಶುರು ಮಾಡಲು ಹರಿಪ್ರಿಯಾ ಮುಂದಾಗಿದ್ದಾರೆ.
ಗುಡ್ ನ್ಯೂಸ್ ಕೊಡುತ್ತೇನೆ ಎಂದು ಹರಿ ಪ್ರಿಯಾ ಹೇಳಿದ ಬೆನ್ನಲ್ಲೇ “ಹೆಸರೇನು ಮೇಡಮ್…’, “ಯಾವಾಗ ಅನೌನ್ಸ್ ಮಾಡ್ತೀರಾ’, “ಕೇಳಿದ್ದು ನಿಜಾನಾ’, “ಗುಡ್ ನ್ಯೂಸ್’ ಎಂಬ ಮೆಸೇಜ್ ಇರುವ ಸ್ಕ್ರಿನ್‌ಶಾಟ್‌ಗಳನ್ನು ಹಂಚಿಕೊಂಡಿದ್ದ ಹರಿಪ್ರಿಯಾ, “ನನಗೆ ಗೊತ್ತು ನೀವೆಲ್ಲರೂ ಬಹುಶಃ ಏನೆಂದು ತಿಳಿಯುವ ಕುತೂಹಲ ಹೊಂದಿರುತ್ತೀರಿ. ಅನೌನ್ಸ್ ಮಾಡುವ ಮೊದಲು ಒಂದು ಊಹೆ ಮಾಡಿ’ ಎಂದು ಬರೆದುಕೊಂಡಿದ್ದರು.
ಹರಿಪ್ರಿಯಾ ಸೋಷಿಯಲ್ ಮೀಡಿಯಾದಲ್ಲಿ ಇಂಥದ್ದೊಂದು ಪೋಸ್ಟ್ ಅಪ್ಡೇಟ್ ಮಾಡುತ್ತಿದ್ದಂತೆ, ಅಭಿಮಾನಿಗಳು ಸಾಕಷ್ಟು ಕುತೂಹಲಭರಿತವಾಗಿ ಕಾಮೆಂಟ್ಸ್ ಮೂಲಕ ನೂರಾರು ಪ್ರಶ್ನೆಗಳನ್ನು ಕೇಳುತ್ತಿದ್ದರು. ಕೆಲವರು ಹರಿಪ್ರಿಯಾ ತಮ್ಮ ಮುಂದಿನ ಸಿನಿಮಾದ ಬಗ್ಗೆ ಅಪ್ಡೆàಟ್ ಕೊಡಬಹುದು ಎಂದು ಊಹಿಸಿದರೆ,
ಇನ್ನೂ ಅನೇಕರು, ಮರಿ ಸಿಂಹ ಅಥವಾ ಸಿಂಹಿಣಿ ಬರುತ್ತಿದ್ದಾರಾ? ಎಂದು ಕಾಮೆಂಟ್ಸ್ ಕೂಡ ಮಾಡಿದ್ದರು.
ಅಂದಹಾಗೆ,ಯುಗಾದಿ ಹಬ್ಬದ ಸಂದರ್ಭದಲ್ಲಿ ಹರಿಪ್ರಿಯಾ ತಮ್ಮದೇ ಆದ ಯು-ಟ್ಯೂಬ್ ಚಾನೆಲ್ ಶುರು
ಮಾಡುತ್ತಿದ್ದಾರೆ. ಈ ಯು-ಟ್ಯೂಬ್ ಚಾನೆಲ್ ಮೂಲಕ ಅಭಿಮಾನಿಗಳಿಗೆ ಹೊಸ ಹೊಸ ವಿಷಯವನ್ನು ಹೇಳಲಿದ್ದಾರಂತೆ. ಅಲ್ಲದೇ, ಅಭಿಮಾನಿಗಳ ಜೊತೆ ಸಂವಹನವನ್ನೂ ಇಟ್ಟುಕೊಳ್ಳುತ್ತಾರಂತೆ.