Advertisement

ಸಹ ನಿರ್ದೇಶಕನ ಜತೆ ನಟಿ ಪರಾರಿ

10:26 AM Jan 09, 2020 | Lakshmi GovindaRaj |

ಮಂಡ್ಯ: ಸಹ ನಿರ್ದೇಶಕನೊಂದಿಗೆ ನಟಿಯೊಬ್ಬಳು ಪರಾರಿಯಾಗಿದ್ದಾಳೆ. ಇದರಿಂದ ಮನನೊಂದ ನಟಿಯ ತಾಯಿ ಮತ್ತು ಅಜ್ಜಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಅಜ್ಜಿ ಮೃತಪಟ್ಟಿದ್ದಾರೆ.‌ ಚನ್ನಪಟ್ಟಣದ ಬಸವೇಶ್ವರ ನಗರ ನಿವಾಸಿಗಳಾದ ಚೆನ್ನಮ್ಮ (65) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರೆ, ಸವಿತಾ (45) ಅವರ ಸ್ಥಿತಿ ಗಂಭೀರವಾಗಿದ್ದು ಮಂಡ್ಯ ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಮೆಳ್ಳಹಳ್ಳಿ ಗ್ರಾಮದ ವಿಜಯಲಕ್ಷ್ಮೀ ಸಾಕು ತಂದೆ ಮಹದೇವಸ್ವಾಮಿ ಹಾಗೂ ತಾಯಿ ಸವಿತಾ (45) ಅವರೊಟ್ಟಿಗೆ ಚನ್ನಪಟ್ಟಣದ ಬಸವೇಶ್ವರ ನಗರದಲ್ಲಿ ವಾಸವಾಗಿದ್ದರು. ಕನ್ನಡದ ಹಲವು ಸಿನಿಮಾಗಳಲ್ಲಿ ಇವರು ಸಹ ನಟಿಯಾಗಿ ನಟಿಸಿದ್ದಾರೆ. ಪ್ರಸ್ತುತ “ತುಂಗಭದ್ರಾ’ ಎಂಬ ಸಿನಿಮಾದಲ್ಲಿ ವಿಜಯಲಕ್ಷ್ಮೀ ನಟಿಸುತ್ತಿದ್ದು, 10 ದಿನಗಳ ಕಾಲ ರಾಯಚೂರಿನಲ್ಲಿ ಸಿನಿಮಾ ಚಿತ್ರೀಕರಣ ನಡೆಯಿತು.

ಆ ವೇಳೆ, ವಿಜಯಲಕ್ಷ್ಮೀ ಹಾಗೂ ಸಹ ನಿರ್ದೇಶಕ ಆಂಜನಪ್ಪ ಇಬ್ಬರೂ ಜೊತೆಯಲ್ಲೇ ಇರುತ್ತಿದ್ದರು ಎಂದು ತಿಳಿದು ಬಂದಿದೆ. ಡಿ.15ರಂದು ವಿಜಯಲಕ್ಷ್ಮೀ, ನಿರ್ದೇಶಕ ಆಂಜನಪ್ಪ ಜೊತೆ ಮನೆ ಬಿಟ್ಟು ಹೋಗಿದ್ದರು. 15 ದಿನಗಳ ನಂತರ ಮನೆಗೆ ಆಗ ಮಿಸಿ, ಅಜ್ಜಿ ಹಾಗೂ ತಾಯಿ ಜೊತೆ ಮಾತನಾಡಿ ಇನ್ನು ಮುಂದೆ ಈ ರೀತಿ ನಡೆದುಕೊಳ್ಳುವುದಿಲ್ಲ. ಆಂಜನಪ್ಪನ ಜೊತೆ ಓಡಾಡುವುದಿಲ್ಲ ಎಂದು ಕ್ಷಮೆ ಕೋರಿದ್ದರು. ತಂದೆ ಮಹದೇವಸ್ವಾಮಿ ಮಗಳಿಗೆ ಬುದ್ಧಿ ಹೇಳಿದ್ದರು.

ಮತ್ತೆ ಪರಾರಿ: ಆದರೆ, ಜ.3ರಂದು ವಿಜಯಲಕ್ಷ್ಮೀ ಮತ್ತೆ ಆಂಜನಪ್ಪ ಜತೆ ಪರಾರಿಯಾಗಿದ್ದಾರೆ. ಇಬ್ಬರೂ ಎಲ್ಲಿದ್ದಾರೆ ಎಂಬ ಮಾಹಿತಿ ಇಲ್ಲ. ಆಂಜನಪ್ಪ ಸ್ವಗ್ರಾಮ ರಾಯಚೂರು ಜಿಲ್ಲೆ, ಮಾನ್ವಿ ತಾಲೂಕಿನ ಹಳ್ಳಿಹೊಸೂರಿನಲ್ಲಿಯೂ ಪತ್ತೆಯಿಲ್ಲ. ಈ ಮಧ್ಯೆ, ವಿಜಯಲಕ್ಷ್ಮೀಗೆ “ಪ್ರೇಮಮಹಲ್’, “ಜವಾರಿಲವ್‌’, “ಪ್ರೊಡಕ್ಷನ್‌ ನಂ.1′ ಚಿತ್ರಗಳ ನಿರ್ಮಾಪಕರು ಅಡ್ವಾನ್ಸ್ ನೀಡಿದ್ದರು.

ನಿರ್ಮಾಪಕರು ಮನೆ ಬಾಗಿಲಿಗೆ ಬಂದು ತಂದೆ ಹಾಗೂ ತಾಯಿಯನ್ನು ಹಣ ವಾಪಸ್‌ ನೀಡುವಂತೆ ಪೀಡಿಸುತ್ತಿದ್ದರು. ಇಲ್ಲದಿದ್ದರೆ ಮಗಳನ್ನು ಪತ್ತೆ ಮಾಡಿ ಸಿನಿಮಾ ಚಿತ್ರೀಕರಣಕ್ಕೆ ಕಳುಹಿಸುವಂತೆ ಒತ್ತಾಯಿಸುತ್ತಿದ್ದರು. ಇದರಿಂದ ಮನನೊಂದ ತಾಯಿ ಸವಿತಾ ಹಾಗೂ ಅಜ್ಜಿ ಚೆನ್ನಮ್ಮ, ಕಳೆದ ಸೋಮವಾರ ಮನೆಯಲ್ಲಿ ವಿಷ ಸೇವಿಸಿದ್ದರು. ವಿಷ ಸೇವನೆಗೂ ಮೊದಲು ನಮ್ಮ ಸಾವಿಗೆ ನಿರ್ದೇಶಕ ಆಂಜನಪ್ಪ ಕಾರಣ ಎಂದು ಸವಿತಾ ವಿಡಿಯೋ ಚಿತ್ರೀಕರಣ ಮಾಡಿದ್ದಾರೆಂದು ತಿಳಿದು ಬಂದಿದೆ.

Advertisement

ಇಬ್ಬರನ್ನೂ ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿ ಸಲಾಯಿತು. ಆದರೆ, ಅಜ್ಜಿ ಮಾರ್ಗಮಧ್ಯೆ ಮೃತಪಟ್ಟರೆ, ಸವಿತಾ, ಮಿಮ್ಸ್‌ನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾವು-ಬದುಕಿನೊಂದಿಗೆ ಹೋರಾಟ ನಡೆಸುತ್ತಿದ್ದಾರೆ. ವಿಜಯಲಕ್ಷ್ಮೀ ಶಿವರಾಜ್‌ಕುಮಾರ್‌ ನಟನೆಯ “ಆಯುಷ್ಮಾನ್‌ಭವ’, ಮಯೂರ್‌ ಪಟೇಲ್‌ ಅಭಿನಯದ “ರಾಜೀವ’ ಸೇರಿ ಅಂದಾಜು 16 ಸಿನಿಮಾಗಳಲ್ಲಿ ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next